ಓ ಪುಷ್ಪ ಐ ಹೇಟ್ ಟಿಯರ್ಸ್ 
ಸಿನಿಮಾ

ಓ ಪುಷ್ಪ ಐ ಹೇಟ್ ಟಿಯರ್ಸ್ 

February 28, 2020

ಕಿರುತೆರೆಯಿಂದ ಹಿರಿತೆರೆಗೆ ಬಂದು ಆ ಕರಾಳರಾತ್ರಿ ಸೇರಿದಂತೆ ಹಲವಾರು ಚಿತ್ರಗಳ ಮೂಲಕ ಗುರ್ತಿಸಿಕೊಂಡ ನಟ ಜೆ.ಕೆ. (ಜಯರಾಂ ಕಾರ್ತಿಕ್) ಹಿಂದಿ ಮೆಗಾ ಧಾರಾವಾಹಿ `ಸಿಯ ಕ ರಾಮ್’ ನಲ್ಲಿ ರಾವಣನಾಗಿ ಘರ್ಜಿಸಿ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಅವರ ಅಭಿನಯದ `ಓ ಪುಷ್ಪ ಐ ಹೇಟ್ ಟಿಯರ್ಸ್’ ಕನ್ನಡ ಹಾಗೂ ಹಿಂದಿ ಸೇರಿ 2 ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈ ಶುಕ್ರವಾರ  ಕನ್ನಡ ಮತ್ತು ಹಿಂದಿ ಎರಡೂ ವರ್ಷನ್ ಸಿನಿಮಾ ಬಿಡುಗಡೆಯಾಗುತ್ತಿದೆ. ಫ್ಯಾಮಿಲಿ ಡ್ರಾಮಾ, ಕಾಮಿಡಿ ಜೊತೆಗೆ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾ ಇದಾಗಿದೆ. ಎಂದು ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ನಟ ಜೆಕೆ ಹೇಳಿದರು. ಈ ಸಂದರ್ಭದಲ್ಲಿ ನಿರ್ದೇಶಕ ದಿನಕರ್ ಕಪೂರ್, ನಟ ಕೃಷ್ಣ ನಾಯಕಿ ಕೂಡ ಹಾಜರಿದ್ದು ಚಿತ್ರದ ಕುರಿತಂತೆ ಮಾತನಾಡಿದರು.

`ಓ ಪುಷ್ಪ ಐ ಹೇಟ್ ಟಿಯರ್ಸ್” ದಿನಕರ್ ಕಪೂರ್ ನಿರ್ದೇಶನದ ಚಿತ್ರ. ಹಿಂದಿಯ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಹೊಂದಿರುವ ದಿನಕರ್ ಅವರು ಈ ಚಿತ್ರದ ಮೂಲಕ ಕನ್ನಡಕ್ಕೂ ಎಂಟ್ರಿ ಕೊಟ್ಟಂತಾಗಿದೆ.

ಅಮೂಲ್ಯದಾಸ್ ಈ ಚಿತ್ರದ ನಿರ್ಮಾಪಕರು.  ಜನಪ್ರಿಯ ಕಾಮಿಡಿ ನಟ ಕೃಷ್ಣ ಅಭಿಷೇಕ್, ಅರ್ಜುಮಾನ್ ಮುಘಲ್, ಅನುಸ್ಮೃತಿ ಸರ್ಕಾರ್, ಅನಘ ದೇಸಾಯಿ, ಪ್ರದೀಪ್ ಕಬ್ರ, ಜಿಮ್ಮಿ ಮೊಸೆಸ್, ಅಖಿಲೇಂದ್ರ ಮಿಶ್ರ  ಈ ಚಿತ್ರದ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿ         ದ್ದಾರೆ. ಅರವಿಂದ್‍ಸಿಂಗ್ ಪೂವಾರ್ ಅವರ ಛಾಯಾ ಗ್ರಹಣ ಹಾಗೂ ರಾಂಜಿ ಗುಲಾಟಿ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

Translate »