ಜಿಲ್ಲಾ ಗ್ರಂಥಾಲಯ ನಿಧಿ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ
ಮೈಸೂರು

ಜಿಲ್ಲಾ ಗ್ರಂಥಾಲಯ ನಿಧಿ ಪಾವತಿಗೆ ಜಿಲ್ಲಾಧಿಕಾರಿ ಸೂಚನೆ

February 27, 2020

ಮೈಸೂರು,ಫೆ.26-ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಪಾವತಿಸಬೇಕಾದ ಬಾಕಿ 42.19 ಲಕ್ಷ ರೂ. ಗಳನ್ನು ಕೂಡಲೇ ಪಾವತಿಸುವಂತೆ ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಅಭಿರಾಮ್ ಜಿ.ಶಂಕರ್ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 75ನೇ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಈ ಸೂಚನೆ ನೀಡಿ ದರು ಎಂದು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಹಾಗೂ ಗ್ರಂಥಾಲಯ ಪ್ರಾಧಿಕಾರದ ಕಾರ್ಯದರ್ಶಿ ವಿ.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ 2020-21ನೇ ಸಾಲಿನ ರೂ. 1,71,20, 000 ಆಯವ್ಯಯವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ವಸೂಲಿ ಮಾಡುವ ತೆರಿಗೆ ಮೊತ್ತದಲ್ಲಿ ಶೇ.6ರ ಗ್ರಂಥಾಲಯ ಕರವನ್ನು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರ ನಿಧಿಗೆ ಇSಅಖಔW ಖಾತೆ ಮೂಲಕ ನೇರವಾಗಿ ಜಮಾ ಮಾಡಲು ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಮವಹಿಸುವುದರ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದರು. ಬನ್ನೂರು ಶಾಖಾ ಗ್ರಂಥಾಲಯಕ್ಕೆ ಪುರಸಭೆಯ ಹಳೆಯ ಕಟ್ಟಡವನ್ನು ಈ ಕೂಡಲೇ ತೆರವುಗೊಳಿಸಿ ಗ್ರಂಥಾಲಯ ಇಲಾಖೆಗೆ ನೀಡುವಂತೆ ಸೂಚಿಸಿ 15 ದಿನದೊಳಗೆ ನಿವೇಶನ ನೀಡುವುದು ಹಾಗೂ ಹೆಚ್.ಡಿ.ಕೋಟೆ ಶಾಖಾ ಗ್ರಂಥಾಲಯದ ಸಾರ್ವಜನಿಕ ಓದುಗರಿಗೆ ಪ್ರತ್ಯೇಕವಾಗಿ ಶೌಚಾ ಲಯದ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡುವುದು ಎಂದು ಪುರಸಭಾ ಅಧಿಕಾರಿಗಳಿಗೆ ತಿಳಿಸಿದರು.

ನಂಜನಗೂಡು ಶಾಖಾ ಗ್ರಂಥಾಲಯದ ನೂತನ ಕಟ್ಟಡವನ್ನು ದುರಸ್ತಿಗೊಳಿಸಿ ಗ್ರಂಥಾಲಯ ಇಲಾ ಖೆಗೆ ಹಸ್ತಾಂತರಿಸಲು ನಗರಸಭೆ ಪೌರಾಯುಕ್ತರಿಗೆ ಮತ್ತು ಹುಣಸೂರಿನ ನಗರಸಭೆಯಿಂದ ಬಾಕಿ ಪಾವ ತಿಸಬೇಕಾದ ಗ್ರಂಥಾಲಯದ ಕರ ಪಾವತಿ ಸಂಬಂಧ ಚರ್ಚಿಸಿ 2005-06ನೇ ಸಾಲಿನಿಂದ ಬಾಕಿ ಉಳಿಸಿ ಕೊಂಡಿದ್ದು, ಗ್ರಂಥಾಲಯ ಕರವನ್ನು ಮಾರ್ಚ್ 2020ರ ಅಂತ್ಯದೊಳಗೆ ಪಾವತಿಸಬೇಕು ಎಂದರು.

ಸರಗೂರು ಶಾಖಾ ಗ್ರಂಥಾಲಯದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ಕೂಡಲೇ ನಿವೇ ಶನವನ್ನು ಮಂಜೂರು ಮಾಡಲು ಅಗತ್ಯ ಕ್ರಮವಹಿ ಸಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲೋಕನಾಥ್ ಅವರಿಗೆ ಸೂಚಿಸಿದರು. ಟಿ.ನರಸೀಪುರ ಶಾಖಾ ಗ್ರಂಥಾಲಯ ಕಟ್ಟಡ ನಿರ್ಮಾಣ ಗಳನ್ನು ತ್ವರಿತವಾಗಿ ಪೂರ್ಣಗೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಮೈಸೂರು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆಯ ಕಾರ್ಯ ಪಾಲಕ ಅಭಿಯಂತರ ಮಲ್ಲಪ್ಪರಿಗೆ ಹೇಳಿದರು.

ಜಿಲ್ಲೆಯಲ್ಲಿ ಯಾವುದಾದರೂ ಒಂದು ಶಾಖಾ ಗ್ರಂಥಾ ಲಯವನ್ನು ಕೈಗೆತ್ತಿಕೊಂಡು ಸಂಪೂರ್ಣವಾಗಿ ಗಣಕೀಕರಣ ಹಾಗೂ ಆಧುನೀಕರಣಗೊಳಿಸುವುದು. ಹೆಚ್.ಡಿ.ಕೋಟೆ ಶಾಖಾ ಗ್ರಂಥಾಲಯವನ್ನು ಮುಂದಿನ ಸಾಲಿನಲ್ಲಿ ಕೈಗೆತ್ತಿಕೊಳ್ಳುವುದಾಗಿ ಉಪ ನಿರ್ದೇಶಕರು ತಿಳಿಸಿದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾ ಧ್ಯಕ್ಷ ಸಿ.ಪಿ.ರಾಮಶೇಷ, ಸದಸ್ಯ ಮ.ಗು, ಸದಾನಂದಯ್ಯ, ಜಿಪಂ ಉಪಕಾರ್ಯದರ್ಶಿ ಕೃಷ್ಣಂರಾಜು ಸಭೆಯಲ್ಲಿದ್ದರು.

Translate »