ಕೋರ್ಟ್ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ
ಮೈಸೂರು

ಕೋರ್ಟ್ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ

September 15, 2021

ಮೈಸೂರು, ಸೆ.14(ಎಂಕೆ)- ಪ್ರತಿ ಷ್ಠಾಪನೆಯಾದ ಮೇಲೆ ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ಕೆಡವ ಬಾರದು. ಇದು ಯಾರಿಗೂ ಕ್ಷೇಮವಲ್ಲ. ಸುಪ್ರೀಂಕೋರ್ಟ್‍ನ ಆದೇಶ ಪಾಲಿಸು ವುದು ಮುಖ್ಯವಾದರೂ, ಅಧಿಕಾರಿಗಳು ಆದೇಶದಲ್ಲಿರುವ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯಾಚರಣೆ ನಡೆಸ ಬೇಕು ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾ ನಂದ ಸ್ವಾಮೀಜಿ ಹೇಳಿದರು.
ತಮ್ಮ 18ನೇ ಚಾತುರ್ಮಾಸ್ಯ ವ್ರತ ಹಿನ್ನೆಲೆ ನಗರದ ಹೆಬ್ಬಾಳ್ ಕಾಲೋನಿ ಯಲ್ಲಿರುವ ಶ್ರೀ ಪಟ್ಟಲದಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಪೌರಕಾರ್ಮಿಕ ಕುಟುಂಬ ಗಳಿಗೆ ಆರ್ಥಿಕ ಸಹಾಯ ಹಾಗೂ ವಿದ್ಯಾರ್ಥಿ ಗಳಿಗೆ ಪುಸ್ತಕ ವಿತರಣೆ ಮಾಡಿದ ಬಳಿಕ ಮಾತನಾಡಿದ ಅವರು, ದೇವಸ್ಥಾನದೊಂ ದಿಗೆ ಭಕ್ತರ ಮನಸ್ಸು ಕೂಡಿಕೊಂಡಿರುತ್ತದೆ. ದೇವಸ್ಥಾನದಿಂದಾಗಿ ಕಾಲೋನಿ ಮತ್ತು ಅಕ್ಕ-ಪಕ್ಕದ ಪಾರ್ಕ್‍ಗಳು ಅಭಿವೃದ್ಧಿ ಯಾಗಿರುತ್ತವೆ. ಆದ್ದರಿಂದ ಅಧಿಕಾರಿಗಳು ದೇವಸ್ಥಾನಗಳನ್ನು ಕೆಡವುದಕ್ಕೂ ಮುನ್ನ ಸುಪ್ರೀಕೋರ್ಟ್ ಆದೇಶವನ್ನು ಸರಿ ಯಾದ ರೀತಿಯಲ್ಲಿ ಗಮನಿಸಬೇಕು ಎಂದು ಸಲಹೆ ನೀಡಿದರು.

ಮನುಷ್ಯನ ಹೃದಯದ ಸ್ಥಾನವನ್ನು ದೇವಸ್ಥಾನಕ್ಕೆ ನೀಡಲಾಗಿದೆ. ದೇವಸ್ಥಾನವೇ ಇಲ್ಲದ ಮೇಲೆ ಜೀವ ಇರುತ್ತದೆಯೇ. ಜನರಲ್ಲಿ ಭಯ-ಭಕ್ತಿ ಎಂಬುದು ಬರ ಬೇಕಾದರೆ ದೇವಸ್ಥಾನಗಳು ಅಗತ್ಯ. ಭಯ-ಭಕ್ತಿ ಎಂಬುದು ಕಡಿಮೆಯಾಗು ತ್ತಿರುವುದರಿಂದಲೇ ಕೊಲೆ, ಅತ್ಯಾಚಾರ ದಂತಹ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ಮನಸ್ಸಿಗೂ ನೋವಾಗುತ್ತದೆ. ಸಮಾಜವನ್ನು ಕಾಪಾಡುವ ಶಕ್ತಿ ದೇವ ಸ್ಥಾನಗಳಿಗೆ ಇದೆ ಎಂದು ತಿಳಿ ಹೇಳಿದರು.

ನಗರಪಾಲಿಕೆ ಸದಸ್ಯ ಶ್ರೀನಿವಾಸ್, ಕಲ್ಯಾಣ ಚಕ್ರವರ್ತಿ, ವಾಮನ್, ಸಂಚಾ ಲಕ ಹೇಮಂತ್‍ಕುಮಾರ್, ಸ್ಥಳೀಯ ಮುಖಂಡರಾದ ಜಯರಾಂ, ಬಾಬು, ಆರ್ಮುಗಂ, ಕೃಷ್ಣ, ಸಿ.ವಿ.ರಾಜಣ್ಣ ಇನ್ನಿತ ರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Translate »