ಹಳೇ ವೈಷಮ್ಯದ  ಹಿನ್ನೆಲೆಯಲ್ಲಿ ಹರ್ಷ ಹತ್ಯೆ
News

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಹರ್ಷ ಹತ್ಯೆ

February 22, 2022

ಶಿವಮೊಗ್ಗ, ಫೆ.21- ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಹಿಂದೆ ಯಾವುದೇ ಸಂಘಟನೆಯ ಕೈವಾಡವಿಲ್ಲ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ. ಶಿವಮೊಗ್ಗದ ಸರ್ಕಾರ ಅತಿಥಿ ಗೃಹದಲ್ಲಿ ಸೋಮವಾರ ಮಧ್ಯಾಹ್ನ ಮಾಧ್ಯಮದ ವರೊಂದಿಗೆ ಮಾತನಾಡಿದ ಅವರು, ಹರ್ಷ ಮತ್ತು ಆರೋಪಿ ಗಳ ನಡುವಿನ ವೈರತ್ವ ಅಂತಹ ದೊಡ್ಡದೇನೂ ಅಲ್ಲ. ಎದುರು ಬದುರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿ ದ್ದರೇ, ಪರಿಸ್ಥಿತಿ ಕೊಲೆ ಮಾಡುವಹಂತಕ್ಕೆ ಹೋಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಈ ಹಿಂದೆಯೂ ಹರ್ಷ ಮತ್ತು ಆರೋಪಿಗಳ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆದಿದ್ದವು. ಕೋರ್ಟ್‍ನಲ್ಲಿ ನಡೆದಿದ್ದ ಗಲಾಟೆಯೇ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದು, ಓರ್ವನ ಹೆಸರು ಖಾಸಿಮ್ ಎಂದು ಗೊತ್ತಾಗಿದೆ. ಇನ್ನಿಬ್ಬರ ಹೆಸರು ನಾಳೆ ಗೊತ್ತಾಗುತ್ತದೆ. ಪೂರ್ಣ ತನಿಖೆಯ ನಂತರ ಸತ್ಯಾಸತ್ಯತೆ ಬಹಿರಂಗ ವಾಗುತ್ತದೆ ಎಂದರು. ಇದೊಂದು ಊಹಿಸಲಾಗದ ಕೆಟ್ಟ ಘಟನೆ. ತಂದೆ ತಾಯಿಗೆ ಹರ್ಷ ಒಬ್ಬನೇ ಮಗನಾಗಿದ್ದರು. ಈಗ ಅವರ ತಂದೆ ತಾಯಿ ನೋಡಿಕೊಳ್ಳಲು ಯಾರೂ ಇಲ್ಲ. ನಾನು ಅವರ ಮನೆಗೆ ಖುದ್ದು ಹೋಗಿ ಸಾಂತ್ವನ ಹೇಳಿದ್ದೇನೆ. ಇದು ನಡೆಯ ಬಾರ ದ್ದಾಗಿತ್ತು. ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನಿರಾಂತಕವಾಗಿ ಅವರಿಗೆ ಕೆಲಸ ಮಾಡಲು ಬಿಡಬೇಕು. ನಾವೂ ಕೂಡ ಸಹಕಾರ ನೀಡಬೇಕು. ಎಡಿಜಿಪಿ ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಸೂಕ್ತ ನಿರ್ದೇಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯಬಾರದು. ಗುಪ್ತಚರ ವಿಭಾಗ ಇನ್ನಷ್ಟು ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳಬೇಕು. ಪೊಲೀಸರ ಕರ್ತವ್ಯಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ನಾರಾಯಣಗೌಡ ಹೇಳಿದರು.

Translate »