ಹಳೆ ದ್ವೇಷ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಕೊಡಗು

ಹಳೆ ದ್ವೇಷ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

March 13, 2019

ಮಡಿಕೇರಿ: ಹಳೇ ದ್ವೇಷದ ಹಿನ್ನಲೆಯಲ್ಲಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಇಂದು ಸಂಜೆ ಪಟ್ಟಣ ದಲ್ಲಿ ನಡೆದಿದೆ. ಮಡಿಕೇರಿ ಪುಟಾಣಿನಗರ ಬಡಾವಣೆಯ ನಿವಾಸಿ ಶರತ್ ಹಲ್ಲೆಗೊಳಗಾಗಿದ್ದು, ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ, ಆರೋಪಿ ಸುಜಿತ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಘಟನೆ ವಿವರ: ಶರತ್ ಹಾಗೂ ಸುಜಿತ್ ಒಂದೇ ಬಡಾವಣೆಯ ನಿವಾಸಿಗಳಾಗಿದ್ದು, ಗೆಳೆಯರಾಗಿದ್ದರು. ಈ ನಡುವೆ ಸುಜಿತ್ ಸಹೋದರಿ ಬೇರೊಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಇದ್ದಳು. ಆ ಹುಡು ಗನಿಗೆ ಮದುವೆಯಾಗಲು ಶರತ್ ಸಹಾಯ ಮಾಡಿದ್ದನೆನ್ನಲಾಗಿದ್ದು, ಇದರಿಂದ ಸುಜಿತ್ ಶರತ್ ಮೇಲೆ ದ್ವೇಷ ಕಾರುತ್ತಿದ್ದನೆಂದು ಹೇಳ ಲಾಗಿದೆ. ಈ ಬಗ್ಗೆ ಹಲವು ಬಾರಿ ಇಬ್ಬರ ನಡುವೆ ಜಗಳ ನಡೆದು ರಾಜಿ ಮಾಡಿಸಲಾಗಿತ್ತೆನ್ನಲಾಗಿದೆ. ಆದರೂ ಶರತ್‍ನನ್ನು ದ್ವೇಷಿಸುತ್ತಿದ್ದ ಸುಜಿತ್ ಒಳಗೊಳಗೆ ಅವನನ್ನು ಮುಗಿಸಲು ಹೊಂಚು ಹಾಕುತ್ತಿದ್ದನೆನ್ನ ಲಾಗಿದೆ. ಇಂದು ಸಂಜೆ ಪಾರ್ಟಿ ಮಾಡಲು ಹೇಳಿ ಶರತ್‍ನನ್ನು ಜೀಪಿ ನಲ್ಲಿ ಮಡಿಕೇರಿಯ ವ್ಯೂ ಪಾಯಿಂಟ್ ಬಳಿಗೆ ಕರೆತಂದಿದ್ದಾನೆ. ಅಲ್ಲಿ ಸುಜಿತ್‍ನ ಒಂದಿಬ್ಬರು ಗೆಳೆಯರು ಇದ್ದು, ಶರತ್ ಜೀಪಿನಿಂದ ಇಳಿ ಯುತ್ತಿದ್ದಂತೆ ಎಲ್ಲರೂ ಸೇರಿ ಕತ್ತಿ, ಚಾಕು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಏಕಾಏಕಿ ದಾಳಿಯಿಂದ ಗಾಬರಿಗೊಂಡ ಶರತ್ ಚೀರಾಡ ಲಾರಂಭಿಸಿದ ಎನ್ನಲಾಗಿದೆ. ಇದನ್ನು ಕಂಡ ಹತ್ತಿರದ ಮತ್ತೊಬ್ಬ ವ್ಯಕ್ತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‍ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿರುವ ಗ್ರಾಮಾಂ ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ತೆರಳಿದ ಎಸ್‍ಐ ಷಣ್ಮುಗ, ಅಪರಾಧ ಪತ್ತೆ ದಳ ಪೊಲೀಸರು ಪರಿ ಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Translate »