`ಒಂಬತ್ತನೇ ದಿಕ್ಕು’ ಟೀಸರ್ ಬಿಡುಗಡೆ
ಸಿನಿಮಾ

`ಒಂಬತ್ತನೇ ದಿಕ್ಕು’ ಟೀಸರ್ ಬಿಡುಗಡೆ

July 10, 2020

ದುನಿಯಾ ಖ್ಯಾತಿಯ ಸೂರಿ ಅವರ ನಿರ್ದೇಶನದ ಚಿತ್ರದಲ್ಲಿ ಲೂಸ್ ಮಾದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಯೋಗಿ ವಿಭಿನ್ನ ಶೈಲಿಯ ಪಾತ್ರಗಳ ಮೂಲಕವೇ ಅಭಿಮಾನಿಗಳನ್ನು ಗಳಿಸಿದ್ದಾರೆ. ಮೊನ್ನೆ ಯೋಗಿ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ತಮ್ಮ ನಿರ್ದೇಶನದ ಒಂಬತ್ತನೇ ದಿಕ್ಕು ಚಿತ್ರದ ವಿಶೇಷ ಟೀಸರನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಿದ್ದಾರೆ.

ಕಳೆದ ವರ್ಷ ರಂಗನಾಯಕಿಯಂಥ ಮಹಿಳಾಪ್ರದಾನ ಚಿತ್ರ ನಿರ್ದೇಶಿಸಿದ್ದ ದಯಾಳ್ ಪದ್ಮನಾಭನ್ ಅವರು ಈ ಮಾಸ್ ಥ್ರಿಲ್ಲರ್ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಅವರು ಆರಂಭದಲ್ಲಿ ಕಥೆಯ ಹಿನ್ನೆಲೆ ಮತ್ತು ಕೊನೆಯ ಉಪಸಂಹಾರಕ್ಕೆ ವಾಯ್ಸ್ ನೀಡಿz್ದÁರೆ. ಚಿತ್ರದ ಆರಂಭದ ಮತ್ತು ಕೊನೆಯ ಕೆಲವು ಮಾತುಗಳು ಚಿತ್ರದ ಮುಖ್ಯ ಭಾಗವಾಗಿದ್ದು, ಅದನ್ನು ಪರಿಚಿತ ಧ್ವನಿಯೊಂದರ ಮೂಲಕವೇ ಕೇಳುಗರಿಗೆ ತಲುಪಿಸಬೇಕು ಎನ್ನುವ ಉz್ದÉೀಶದಿಂದ ದಯಾಳ್ ಅವರು ದರ್ಶನ್‍ರನ್ನು ಕರೆತಂದಿದ್ದಾರೆ. ಸಮಾನವಾಗಿ ಸಾಗುವ ಎರಡು ಬೇರೆ, ಬೇರೆ ಕಥೆಗಳು ಕೊನೆಯ ಭಾಗದಲ್ಲಿ ಒಂದೆಡೆ ಸೇರುತ್ತವೆ. ಈ ಅಂಶವನ್ನು ವೀಕ್ಷಕರಿಗೆ ಮನವರಿಕೆ ಮಾಡಿಕೊಡುವ ಉz್ದÉೀಶದಿಂದ ಆರಂಭ ಹಾಗೂ ಅಂತ್ಯದ ಸೀನ್‍ಗಳಲ್ಲಿ ಗ್ರಾಫಿಕ್ಸ್ ಬಳಸಲಾಗಿದೆ. ಆ ಗ್ರಾಫಿಕ್ಸ್ ಸೀನ್‍ಗಳಲ್ಲಿ ದರ್ಶನ್ ಅವರ ಧ್ವನಿ ಇರುತ್ತದೆ ಎಂದು ಹೇಳಿದ ದಯಾಳ್, ಇತ್ತೀಚೆಗಷ್ಟೇ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದ್ದು, ಆಗಸ್ಟ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ ಜೊತೆ ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸಿದ್ದಾರೆ. ದಯಾಳ್ ಅವರು ಚಿತ್ರದ ನಿರ್ದೇಶನದ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ಜೊತೆಗೆ ಅವಿನಾಶ್ ಯು.ಶೆಟ್ಟಿ ಹಾಗೂ ವೆಂಕಟ್‍ದೇವ್ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ, ಪ್ರೀತಿ ಮೋಹನ್ ಅವರ ಸಂಕಲನ, ವಿಕ್ರಂ ಮೋರ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.