`ಫ್ಯಾಂಟಮ್’ ಚಿತ್ರೀಕರಣ ಒಂದು ವಾರ ಮುಂದಕ್ಕೆ
ಸಿನಿಮಾ

`ಫ್ಯಾಂಟಮ್’ ಚಿತ್ರೀಕರಣ ಒಂದು ವಾರ ಮುಂದಕ್ಕೆ

July 10, 2020

ಜಾಕ್ ಮಂಜು ಅವರ ನಿರ್ಮಾಣದಲ್ಲಿ ಕಿಚ್ಚ ಸುದೀಪ್ ಅಭಿನಯದಲ್ಲಿ ಅದ್ಧೂರಿ ಬಜೆಟ್‍ನಲ್ಲಿ ನಿರ್ಮಾಣವಾಗುತ್ತಿರುವ ಫ್ಯಾಂಟಮ್ ಚಿತ್ರಕ್ಕೆ ಅದೇಕೋ ವಿಘ್ನದ ಮೇಲೆ ವಿಘ್ನಗಳು ಬಂದೊದಗುತ್ತಿವೆ. ಮಾರ್ಚ್‍ನಲ್ಲಿಯೇ ಚಿತ್ರೀಕರಣ ಆರಂಭಿಸಲು ಎಲ್ಲಾ ರೆಡಿ ಮಾಡಿಕೊಳ್ಳುತ್ತಿರುವಾಗಲೇ ಕೊರೊನಾ ವಕ್ಕರಿಸಿ ಶೂಟಿಂಗ್ ಪೋಸ್ಟ್‍ಪೋನ್ ಆಗಿತ್ತು, ಆನಂತರ ಈಗ ಮತ್ತೆ ಜುಲೈನಲ್ಲಿ ಚಿತ್ರೀಕರಣ ಮಾಡಲು ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ಸಕಲ ಸಿದ್ಧತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಪ್ರತಿದಿನ ಎಲ್ಲಾ ಥರದ ಕೊರೊನಾ ಸೇಫ್ಟಿ ಪ್ರಿಕಾಶನ್ಸ್ ತೆಗೆದುಕೊಂಡು ಕೆಲಸ ಆರಂಭ ಮಾಡಬೇಕಾಗಿದ್ದರಿಂದ ಸೆಟ್‍ವರ್ಕ್ ನಿಧಾನವಾಗಿದ್ದು, ಅಂದುಕೊಂಡ ಸಮಯದಲ್ಲಿ ಚಿತ್ರೀಕರಣ ಆರಂಭಿಸಲು ಸಾಧ್ಯವಾಗಿಲ್ಲ. ಹಾಗಾಗಿ ಒಂದು ವಾರದ ಮಟ್ಟಿಗೆ ಶೂಟಿಂಗ್ ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ಇದು ನಿರ್ಮಾಪಕರಿಗೆ ಸಾಕಷ್ಟು ಪ್ರಮಾಣದ ನಷ್ಟವನ್ನಂತೂ ತಂದೊಗಿಸಿದೆ.

ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಅವರ ನಿರ್ದೇಶನದ ಫ್ಯಾಂಟಮ್ ಸಿನಿಮಾ ತನ್ನ ಹಲವಾರು ವಿಶೇಷತೆಗಳಿಂದ ಸುದ್ದಿಯಾಗುತ್ತಿದ್ದರೂ, ಕೊರೋನಾ ಕಾರಣದಿಂದ ಶೂಟಿಂಗ್ ಮತ್ತೆ ಮುಂದಕ್ಕೆ ಹೋಗಿದೆ. ಚಿತ್ರೀಕರಣಕ್ಕಾಗಿಯೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಕೋಟಿಗಟ್ಟಲೆ ಹಣ ಖರ್ಚು ಮಾಡಿ ದಟ್ಟವಾದ ಕಾಡಿನ ಸೆಟ್ ನಿರ್ಮಿಸಲಾಗಿತ್ತು. ಸುಮಾರು ಆರು ಕೋಟಿ ರೂ.ಗಳ ಬಂಡವಾಳ ಹಾಕಿ ಅರಣ್ಯದ ಸೆಟ್‍ಅನ್ನು ಚಿತ್ರತಂಡ ಹಾಕಿತ್ತು. ರಾಜಮಂಡ್ರಿ ಮತ್ತು ಮುಂತಾದ ಕಡೆಗಳಿಂದ ವಿವಿಧ ಬಗೆಯ ಗಿಡಗಳು, ಮರಗಳನ್ನು ತರಿಸಲಾಗಿತ್ತು. ಇನ್ನೂ ಕೆಲ ಮರಗಿಡಗಳನ್ನು ಕಲಾತಂಡವೇ ಸೃಷ್ಟಿ ಮಾಡಿತ್ತು. ಆದರೀಗ ಅದೆಲ್ಲ ಮತ್ತೆ ಹಾಳಾಗುತ್ತದೆ.

ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ವಿಕ್ರಂ ರೋಣ ಎಂಬ ಖಡಕ್ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿz್ದÁರೆ. ಸಿನಿಮಾದ ಮೊದಲ ಪೆÇೀಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು, ಉದ್ದ ಮೀಸೆ ಬಿಟ್ಟ ಸುದೀಪ್ ಅವರ ಲುಕ್ ಇದೊಂದು ಆP್ಷÀನ್ ಸಿನಿಮಾ ಎಂಬುದನ್ನು ಸಾಬೀತುಪಡಿಸಿದೆ. ಇನ್ನು ಈ ಚಿತ್ರದಲ್ಲಿ ನಟಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ನಿರ್ದೇಶಕರ ಸಹೋದರ ನಿರೂಪ್ ಭಂಡಾರಿ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಇನ್ನೂ ಹಲವಾರು ಹೆಸರಾಂತ ನಟ-ನಟಿಯರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿz್ದÁರೆ. ಸೆಟ್ ವರ್ಕ್ ಇನ್ನೂ ಕಂಪ್ಲೀಟ್ ಆಗಿಲ್ಲದ ಕಾರಣ ಚಿತ್ರೀಕರಣ ಮುಂದೂಡಲಾಗಿದ್ದು, ಮುಂದಿನ ವಾರ ಆರಂಭಿಸಲಿದ್ದೇವೆ ಎಂದು ಚಿತ್ರತಂಡ ಹೇಳಿದೆ.