ರೈಲ್ವೆ ನೌಕರರಿಂದ `ಕೇಂದ್ರ ಬಜೆಟ್ ದಿನದಂದು ಗಮನ ಸೆಳೆಯುವ ದಿನ’ ಶೀರ್ಷಿಕೆಯಡಿ ಪ್ರತಿಭಟನೆ
ಮೈಸೂರು

ರೈಲ್ವೆ ನೌಕರರಿಂದ `ಕೇಂದ್ರ ಬಜೆಟ್ ದಿನದಂದು ಗಮನ ಸೆಳೆಯುವ ದಿನ’ ಶೀರ್ಷಿಕೆಯಡಿ ಪ್ರತಿಭಟನೆ

February 2, 2021

ಮೈಸೂರು,ಫೆ.1(ಪಿಎಂ)- ಕೇಂದ್ರ ಸರ್ಕಾರ ಬಾಕಿ ಉಳಿಸಿರುವ ರೈಲ್ವೆ ನೌಕ ರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸೌತ್ ವೆಸ್ಟರ್ನ್ ರೆಲ್ವೆ ಮಜ್ದೂರ್ ಯೂನಿಯನ್ ಮೈಸೂರು ವಿಭಾಗದ ವತಿಯಿಂದ `ಕೇಂದ್ರ ಬಜೆಟ್-2021ರ ದಿನದಂದು ಗಮನ ಸೆಳೆಯುವ ದಿನ’ ಶೀರ್ಷಿಕೆಯಡಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಆವರಣದಲ್ಲಿರುವ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್‍ನ ಮೈಸೂರು ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ರೈಲ್ವೆ ಉತ್ಪಾದನಾ ಘಟಕ ಗಳು, ನೌಕರರ ಖಾಸಗೀಕರಣ ಹಾಗೂ ಹೊರಗುತ್ತಿಗೆ ನಿರ್ಧಾರಗಳನ್ನು ಕೈಬಿಡ ಬೇಕು. 1-1-2020, 1-7-2020 ಮತ್ತು 1-1-2021ರಿಂದ ಕೇಂದ್ರ ಸರ್ಕಾರಿ ನೌಕ ರರ ಮತ್ತು ಪಿಂಚಣಿದಾರರ ಮೂರು ಕಂತುಗಳ ಡಿಎ ಮತ್ತು ಡಿಆರ್ ಭತ್ಯೆ ಯನ್ನು ತಕ್ಷಣ ಬಿಡುಗಡೆ ಮಾಡಬೇಕು. ಕನಿಷ್ಠ ವೇತನ ಮತ್ತು ಫಿಟ್‍ಮೆಂಟ್ ಫಾರ್ಮಲಾ ಸೇರಿದಂತೆ 7ನೇ ಸಿಪಿಸಿ (ವೇತನ ಆಯೋಗ) ಬೇಡಿಕೆಗಳ ಮೇಲೆ ಮಂತ್ರಿಮಂಡಲ ನೀಡಿದ ಆಶ್ವಾಸನೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಎನ್‍ಸಿ-ಜೆಸಿಎಂನ ಸಿಬ್ಬಂದಿ ಕಡೆ ಯಿಂದ ಸೂಚಿಸಲಾದ ಎಲ್ಲಾ 7ನೇ ಸಿಪಿಸಿ ವೈಪರೀತ್ಯಗಳನ್ನು ಬದಲಾಯಿಸಲು ಇನ್ನೊಂದು ಅವಕಾಶ ನೀಡಬೇಕು. ಕೆಲವು ಭತ್ಯೆಗಳು, ಮುಂಗಡಗಳ ಮರು ಸ್ಥಾಪನೆ ಮತ್ತು ಬಡ್ತಿಗೆ ಎರಡು ಇನ್ ಕ್ರಿಮೆಂಟ್ (ಹೆಚ್ಚುವರಿ) ಮಂಜೂರು ಮಾಡಬೇಕು. ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಗ್ಯಾರಂಟಿ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಎಫ್‍ಆರ್ 56 (ಜೆ) ಶಿಕ್ಷೆಯ ದುರ್ಬಳಕೆ ತಡೆಗಟ್ಟಲು ಅದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸ್ಥಾಯಿ ಸಮಿತಿ ಸಭೆಯಲ್ಲಿ ಮತ್ತು ಎನ್‍ಸಿ -ಜೆಸಿಎಂನ 47ನೇ ಸಭೆಯಲ್ಲಿ ಒಪ್ಪಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಕೋವಿಡ್-19ನಿಂದ ಮೃತಪಟ್ಟ ಕೇಂದ್ರ ಸರ್ಕಾರಿ ನೌಕರರಿಗೆ ಪರಿಹಾರ ವನ್ನು ಶೀಘ್ರವೇ ನೀಡಬೇಕು. ಅಲ್ಲದೆ, ಮೃತರ ಕುಟುಂಬಕ್ಕೆ ಶೇ.100ರಷ್ಟು ಸಹಾನುಭೂತಿ ನೇಮಕಾತಿ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ವಿಭಾ ಗೀಯ ಕಾರ್ಯದರ್ಶಿ ಪಿ.ಶಿವಪ್ರಕಾಶ್, ವಿಭಾಗೀಯ ಅಧ್ಯಕ್ಷ ಎಸ್.ಸೋಮಶೇಖರ್, ವಲಯ ಕಾರ್ಯಾಧ್ಯಕ್ಷ ಆರ್ಥುರ್ ಫರ್ನಾಂಡಿಸ್ ಸೇರಿದಂತೆ ರೈಲ್ವೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »