ಮೈಸೂರು, ಅ.21(ಆರ್‍ಕೆಬಿ)- ಮೈಸೂ ರಿನ ಮಾನಸ ಗಂಗೋತ್ರಿಯಲ್ಲಿ ಮೈಸೂರು ವಿವಿಯ ಯುಜಿಸಿ-ಮಾನವ ಸಂಪ ನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ `ರಾಷ್ಟ್ರೀಯ ಉಚ್ಛತಾ ಶಿಕ್ಷಾ ಅಭಿಯಾನ’ (ರೂಸಾ) ಪ್ರಾಯೋಜಿಸಿ ಹೊಸದಾಗಿ ನಿರ್ಮಿಸಿದ ವಿಡಿಯೊ ಕಾನ್ಫರೆನ್ಸ್ ಹಾಲ್ ಮತ್ತು ವಾಣಿಜ್ಯ ಶಾಸ್ತ್ರ ಪುನಶ್ಚೇತನ ಶಿಬಿರದ ಉದ್ಘಾ ಟನೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾ ಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಬುಧವಾರ ನೆರವೇರಿಸಿದರು. ಇದೇ ವೇಳೆ, ಪುರಾಣನಾಮ ಚೂಡಾಮಣಿ ಪುಸ್ತಕದ ಆನ್‍ಲೈನ್ ಅವತರಣಿಕೆಯನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿ, 1941ರಲ್ಲಿ ಲೇಖಕ ಬೆನೆಗಲ್ ರಾಮರಾವ್ ಮಾಡಿದಂತೆಯೇ ಪುರಾಣನಾಮ ಚೂಡಾಮಣಿ ಪುಸ್ತಕವನ್ನು ಮತ್ತೆ ಬರೆದಿರುವುದು ಶ್ಲಾಘನೀಯ. ಬೆನೆಗಲ್ ಎಷ್ಟು ಕೆಲಸ ಮಾಡಿದ್ದಾರೋ ಅಷ್ಟನ್ನು ನೀವೂ ಮಾಡಿದ್ದೀರಿ. ಅದಕ್ಕಾಗಿ ಅಭಿನಂದನೆ ಎಂದರು.
ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಯುಜಿಸಿ -ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಪ್ರೊ.ಮಿಡತಲ ರಾಣಿ, ಮೈಸೂರು ವಿವಿ ಪಿಎಂಇಬಿ ರೂಸಾ ಮತ್ತು ನಿರ್ದೇಶಕ ನೋಡಲ್ ಅಧಿಕಾರಿ ಪ್ರೊ.ಎನ್.ಕೆ.ಲೋಕನಾಥ್, ರೂಸಾ -ಹೆಚ್‍ಆರ್‍ಡಿಸಿ ಕಾರ್ಯಕ್ರಮ ಸಂಯೋ ಜಕ ಪ್ರೊ.ಎಸ್.ಜೆ.ಮಂಜುನಾಥ್, ಪುನ ಶ್ಚೇತನ ಶಿಬಿರದ ಸಂಯೋಜಕ ಪ್ರೊ. ಆರ್.ಮಹೇಶ್ ಇನ್ನಿತರರು ಇದ್ದರು.