ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಬಿಎಸ್‍ವೈ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ
ಮೈಸೂರು

ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಬಿಎಸ್‍ವೈ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ

October 22, 2020

ಮೈಸೂರು, ಅ.21(ಪಿಎಂ)- ಬಿ.ಎಸ್.ಯಡಿ ಯೂರಪ್ಪನವರೇ ರಾಜ್ಯದ ಮುಖ್ಯ ಮಂತ್ರಿಗಳಾಗಿ ಮುಂದುವರೆಯ ಲಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗು ತ್ತಿಲ್ಲ. ನಮ್ಮ ಪಕ್ಷದ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ಅನಿಸಿಕೆ ತಿಳಿಸಿದ್ದು, ಅದು ಬಿಜೆಪಿ ಅನಿಸಿಕೆ ಆಗುವುದಿಲ್ಲ. ಅದು ಅವರ ವೈಯ ಕ್ತಿಕ ಹೇಳಿಕೆಯಷ್ಟೇ ಎಂದು ವಿಧಾನ ಪರಿಷತ್ ಸದಸ್ಯ ಎ.ಹೆಚ್.ವಿಶ್ವನಾಥ್ ತಿಳಿಸಿದರು. ರಾಜ್ಯದಲ್ಲಿ ಸಿಎಂ ಬದಲಾ ವಣೆ ಆಗಲಿದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಆವರಣದಲ್ಲಿ ಬುಧವಾರ ಮಾಧ್ಯಮದವರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಯತ್ನಾಳ್ ಸಿಎಂ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳ ಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿ ಕಾರಿಗಳ ವರ್ಗಾವಣೆ ಹೊಸ ದೇನಲ್ಲ. ಇದು ಯಡಿಯೂರ ಪ್ಪರ ಕಾಲದಲ್ಲೇ ಜಾಸ್ತಿ ಆಗಿ ರುವುದಲ್ಲ. ಹಿಂದೆಯೂ ಆಗಿದೆ. ಆದರೆ ಬಹಳಷ್ಟು ಮಂದಿ ಸಿಎಂ ಆಗಿದ್ದವರೂ ಸೇರಿದಂತೆ ಹಲವು ರಾಜಕಾರಣಿಗಳು `ವರ್ಗಾವಣೆ’ ಎಂಬುದು ಒಂದು ಉದ್ಯಮ ಮಾಡಿಕೊಂಡಿದ್ದು, ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡುತ್ತೇನೆ. ಸುಖಾಸುಮ್ಮನೆ ವರ್ಗಾವಣೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕಾರ್ಯದಕ್ಷತೆ ನೋಡಿ ವರ್ಗ ಮಾಡಬೇಕು. ಜಿಲ್ಲೆಯೊಂದರಲ್ಲಿ ಒಂದೇ ಜಾತಿ ಅಧಿಕಾರಿಗಳನ್ನು ಹಾಕುವುದು ಸೂಕ್ತ ವಲ್ಲ ಎಂದು ವಿಶ್ವನಾಥ್ ಹೇಳಿದರು.

ಸಾ.ರಾ.ಮಹೇಶ್ ಕೊಚ್ಚೆಗುಂಡಿ: ತಮ್ಮನ್ನು `ಕಳ್ಳ ಹಕ್ಕಿ’ ಎಂದು ಶಾಸಕ ಸಾ.ರಾ. ಮಹೇಶ್ ಟೀಕಿಸಿರುವ ಸಂಬಂಧ ಪ್ರತಿಕ್ರಿ ಯಿಸಿದ ವಿಶ್ವನಾಥ್, ಸಾ.ರಾ. ಮಹೇಶ್ ಎಂಬ ಕೊಚ್ಚೆ ಗುಂಡಿಗೆ ಪದೇ ಪದೆ ಕಲ್ಲೆಸೆಯುವುದಿಲ್ಲ. ಕೆಲವರಿಗೆ ತೀಟೆ ಮಾಡುವುದೇ ಕೆಲಸ ಎಂದು ತಿರುಗೇಟು ನೀಡಿ ದರು. ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ನವರು ತಮ್ಮದೇ ಪಕ್ಷದ ದಲಿತ ಶಾಸಕನ ರಕ್ಷಣೆಗೆ ಮುಂದಾ ಗಿಲ್ಲ ಎಂದು ಬಿಜೆಪಿ ಜಾತಿ ಹೆಸ ರಿನಲ್ಲಿ ಆರೋಪ ಮಾಡಿತ್ತು. ಇದೀಗ ದಲಿತ ಶಾಸಕ ಎಂಬು ದನ್ನು ಮರೆತು ನನ್ನ ಬಗ್ಗೆ ಹಗುರ ವಾಗಿ ಮಾತನಾಡುತ್ತಿದ್ದಾರೆಂದು ಬಿಜೆಪಿ ಶಾಸಕ ಹರ್ಷ ವರ್ಧನ್, ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬುದನ್ನು ಮಾಧ್ಯಮ ದವರು ಪ್ರಸ್ತಾಪಿಸಿದ್ದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್, ಇಲ್ಲಿ ಜಾತಿ ವಿಚಾರ ಮಧ್ಯೆ ತರುವುದು ಬೇಡ. ಸಮಾ ಧಾನವಾಗಿ ಕೂತು ಪರಸ್ಪರರು ತಮ್ಮ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಒಳಿತು ಎಂದರು.

ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಯಾವುದೇ ಪಕ್ಷವೂ ಮಾಡಬಾರದು. ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಇನ್ನು ಸಿಎಂ ಸ್ಥಾನ ಸಿಕ್ಕಿಲ್ಲ ಎಂಬುದು ಬಿಟ್ಟರೆ ಉಳಿದಂತೆ ಎಲ್ಲಾ ಜನಾಂಗದವರಿಗೂ ರಾಜಕೀಯ ಸ್ಥಾನಮಾನ ದೊರೆತಿದೆ. ಅತೀ ಕಡಿಮೆ ಸಂಖ್ಯೆ ಸಮು ದಾಯದಿಂದ ಬಂದ ದೇವರಾಜ ಅರಸು 8 ವರ್ಷ ಸಿಎಂ ಆಗಿದ್ದರು. ಯಾರೂ ಸ್ವಾರ್ಥಕ್ಕಾಗಿ ಜಾತಿ ಹೆಸರಿ ನಲ್ಲಿ ರಾಜಕಾರಣ ಮಾಡಬಾರದು ಎಂದರು. ಶಾಸಕ ಎಸ್.ಎ.ರಾಮದಾಸ್ ಕಾರ್ಯಕ್ರಮಗಳ ವಿಚಾರ ದಲ್ಲೂ ಪ್ರತಾಪ್ ಸಿಂಹ ಟೀಕೆ ಮಾತನಾಡುತ್ತಿದ್ದಾರೆ ಎಂಬ ಆರೋಪವಿದೆ ಎಂಬುದಕ್ಕೆ ಪ್ರತಿಕ್ರಿಯಿಸಿ, ರಾಮದಾಸ್ ನಿಜಕ್ಕೂ ಶ್ರಮಜೀವಿ, ಕ್ಷೇತ್ರದಲ್ಲಿ ಸದಾ ಚಟುವಟಿಕೆ ಯಾಗಿದ್ದಾರೆ. ಹೀಗೆ ವೈಯಕ್ತಿಕ ನಿಂದನೆ ಮಾಡುವುದ ರಿಂದ ಏನೂ ಪ್ರಯೋಜನವಿಲ್ಲ ಎಂದು ತಿಳಿಸಿದರು.

Translate »