ಬಹಿರಂಗ ಪ್ರಚಾರಕ್ಕೆ ತೆರೆ
News

ಬಹಿರಂಗ ಪ್ರಚಾರಕ್ಕೆ ತೆರೆ

May 9, 2023

ಬೆಂಗಳೂರು, ಮೇ8(ಕೆಎಂಶಿ)- ರಾಜ್ಯದ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕ್ಷೇತ್ರವಲ್ಲದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಕ್ಷೇತ್ರ ತೊರೆಯುವಂತೆ ಆಯೋಗ ಸೂಚಿಸಿದೆ.

ಮೇ 10 ರಂದು ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಎಳೆದಿ ರುವುದಲ್ಲದೆ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೇ 11 ಮುಂಜಾನೆಯವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಕಂದಾಯ ಸಚಿವ ಆರ್. ಅಶೋಕ್, ವಸತಿ ಸಚಿವ ವಿ.ಸೋಮಣ್ಣ ಸೇರಿ ದಂತೆ ಸುಮಾರು 35ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ ಪಟ್ಟಿಯಲ್ಲಿ ಇಲ್ಲದ ಕ್ಷೇತ್ರಗಳಲ್ಲಿ ಕಣಕ್ಕಿಳಿ ದಿದ್ದಾರೆ. ಅವರೂ ಕೂಡ ಆ ಕ್ಷೇತ್ರಗಳಲ್ಲಿ ಉಳಿ ಯುವಂತಿಲ್ಲ. ಮಂಗಳವಾರ ಅಭ್ಯರ್ಥಿಗಳು ಮನೆ ಮನೆಗೆ ಹೋಗಿ ಮತಯಾಚಿಸಲು ಅವಕಾಶ ವಿದೆಯೇ ಹೊರತು, ಬಹಿರಂಗವಾಗಿ ಪ್ರಚಾರ ಅಥವಾ ಸಭೆಗಳನ್ನು ನಡೆಸಲು ಅವಕಾಶವಿರು ವುದಿಲ್ಲ. ಮೇ 10ರಂದು ಬೆಳಗ್ಗೆ 7ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜ್ಯದ 224 ಕ್ಷೇತ್ರ ಗಳಲ್ಲಿ ಏಕಕಾಲಕ್ಕೆ ಮತದಾನ ನಡೆಯಲಿದೆ. ಎಡಗೈ ತೋರು ಬೆರಳಿಗೆ ಶಾಹಿಹಾಕಲಾಗುತ್ತದೆ.

ಬಹಿರಂಗ ಪ್ರಚಾರದ ಅವಧಿ ಮುಗಿಯು ತ್ತಿದ್ದಂತೆ ನಿಷೇಧಾಜ್ಞೆ ಜಾರಿಯಾಗಲಿದೆ. ಅಭ್ಯರ್ಥಿ ಗಳ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ತಾರಾ ಪ್ರಚಾರಕರು, ವಿವಿಧ ರಾಜಕೀಯ ಪಕ್ಷ ಗಳ ನಾಯಕರು ಕ್ಷೇತ್ರ ಬಿಟ್ಟು ತೆರಳಬೇಕಾಗಿದೆ. ಪ್ರಧಾನಿ ಮೋದಿ ಅವರ ವರ್ಚಸ್ಸಿನ ಮೂಲಕವೇ ಕರ್ನಾಟಕದಲ್ಲಿ ಪುನಃ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಕಳೆದ ಆರು ತಿಂಗಳಿನಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸರ್ಕಾರಿ ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸಿ, ಮತದಾರರನ್ನು ಓಲೈಕೆ ಮಾಡಲು ನಿರಂತರ ಪ್ರಯತ್ನ ಮಾಡಿತು. ಮೋದಿ ಅವರ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 20ಕ್ಕೂ ಹೆಚ್ಚು ದೆಹಲಿಯ ವರ್ಚಸ್ವಿ ನಾಯಕರುಗಳು ರಾಜ್ಯದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಕಾಂಗ್ರೆಸ್ ಕರ್ನಾಟಕದಲ್ಲಿ ಕಳೆದುಕೊಂಡಿರುವ ಅಧಿಕಾರವನ್ನು ಗಳಿಸಲು ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್‍ಗಾಂಧಿ, ಪ್ರಿಯಾಂಕಾ ಗಾಂಧಿ, ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಬಳಸಿಕೊಂಡಿದ್ದರು. ರಾಷ್ಟ್ರೀಯ ಪಕ್ಷಗಳಿಗೆ ಸಮ ಪೈಪೆÇೀಟಿ ನೀಡಲಾ ಗದಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ರಾಜ್ಯಾ ದ್ಯಂತ ಪ್ರವಾಸ ಕೈಗೊಂಡು ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸಿದರು. ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದಂತೆ ಈ ಎಲ್ಲಾ ಅತಿರಥ ಮಹಾನಾಯಕರು ಪ್ರಚಾರ ಕಾರ್ಯದಿಂದ ಹಿಂತಿರುಗಿದ್ದಾರೆ.
ಇನ್ನೇನಿದ್ದರೂ, ಅಭ್ಯರ್ಥಿಗಳು ಮಾತ್ರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಜೊತೆಗೂಡಿ, ಮನೆ ಮನೆಗೆ ತೆರಳಿ, ಮತಯಾಚಿಸಲು ಇನ್ನು 24 ಗಂಟೆ ಸಮಯಾ ವಕಾಶವಿದೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಕರ್ನಾಟಕದಲ್ಲಿ ಶಾಂತಿಯುತ ಮತ್ತು ಮುಕ್ತ ಮತದಾನ ನಡೆಸಲು ಹತ್ತು ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಗಾ ವಹಿಸಲು ಸೂಕ್ಷ್ಮ ವೀಕ್ಷಕರು, ವೆಬ್ ಕಾಸ್ಟಿಂಗ್, ಸಿಸಿಟಿವಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ನಾಳೆ ಆಯಾ ಕ್ಷೇತ್ರದ ಚುನಾವಣಾಕಾರಿಗಳು ನಿಗದಿ ಪಡಿಸಿದ ಸ್ಥಳದಲ್ಲಿ ಮತಗಟ್ಟೆಯ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಸಮಾವೇಶ ಗೊಂಡು, ನಿಗದಿತ ಮತಗಟ್ಟೆಗೆ ಮತಯಂತ್ರ ಸೇರಿದಂತೆ ಮತದಾನಕ್ಕೆ ಅಗತ್ಯವಿರುವ ಸಾಮಗ್ರಿಯೊಂದಿಗೆ ತೆರಳಲಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ಸಾರಿಗೆ ಸಂಸ್ಥೆಗಳ ಹೆಚ್ಚು ಬಸ್ಸುಗಳನ್ನು ಬಳಕೆ ಮಾಡುವುದರಿಂದ ನಾಳೆ ಮತ್ತು ಮತದಾನದಂದು ಬಸ್‍ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಅಭ್ಯರ್ಥಿಗಳು ಕೊನೆಯ ದಿನದ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದ್ದರು. ರೋಡ್ ಶೋ, ಬಹಿರಂಗ ಸಭೆ, ಸಮಾರಂಭ ಗಳ ಮೂಲಕ ಪ್ರಚಾರ ನಡೆಸಿ ಮತಯಾಚನೆ ಮಾಡುತ್ತಿರುವುದು ರಾಜ್ಯದೆಲ್ಲೆಡೆ ಕಂಡುಬಂತು. ಬೆಳಗಾವಿ ಜಿಲ್ಲೆಯಲ್ಲಿ ಅತೀಹೆಚ್ಚು 187 ಅಭ್ಯರ್ಥಿಗಳು ಇದ್ದರೆ, ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ 24 ಅಭ್ಯರ್ಥಿಗಳಿದ್ದಾರೆ. 2,66,82,155 ಪುರುಷರು, 2,63,98483 ಮಹಿಳೆಯರು, 47,488 ಸೇವಾ ಮತದಾರರು ಸೇರಿದಂತೆ ಒಟ್ಟು 5,31,33,054 ಮತದಾರರಿದ್ದಾರೆ. ಈಗಾಗಲೇ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ಶೇ.95ರಷ್ಟು ವಿತರಿಸಿರುವುದಾಗಿ ತಿಳಿಸಲಾಗಿದೆ.

Translate »