ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಪ್ಪಿಸಲು ಹೊಸ ವೈನ್ ಶಾಪ್ ತೆರೆಯುವುದು ಅನಿವಾರ್ಯ
News

ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಪ್ಪಿಸಲು ಹೊಸ ವೈನ್ ಶಾಪ್ ತೆರೆಯುವುದು ಅನಿವಾರ್ಯ

December 7, 2022

ಬೆಂಗಳೂರು, ಡಿ. 6(ಕೆಎಂಶಿ)- ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ತಪ್ಪಿಸಲು ಹೊಸ ವೈನ್ ಶಾಪ್‍ಗಳನ್ನು ತೆರೆಯುವುದು ಅನಿವಾರ್ಯ ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಇಂದಿಲ್ಲಿ ತಿಳಿಸಿದ್ದಾರೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆ ನಮ್ಮ ಮುಂದಿರುವುದರಿಂದ ಸದ್ಯಕ್ಕೆ ಅದು ಸಾಧ್ಯವಿಲ್ಲ ಎಂದರು. ನಾವೇ ಮತ್ತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ. ನಮ್ಮ ನೇತೃತ್ವದ ಸರ್ಕಾರದಲ್ಲೇ ಎಲ್ಲ ಆಗುಹೋಗುಗಳನ್ನು ಗಮನದಲ್ಲಿಟ್ಟು ಕೊಂಡು ನೂತನ ಅಬಕಾರಿ ನೀತಿ ಅಳವಡಿಸಿ, ಕಿರಾಣಿ ಅಂಗಡಿ ಗಳಲ್ಲಿ ಮದ್ಯ ದೊರೆಯುವುದನ್ನು ತಪ್ಪಿಸಲು ಹೊಸ ವೈನ್‍ಶಾಪ್ ಗಳನ್ನು ತೆರೆಯಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಕ್ರಮ ಮದ್ಯ ಮಾರಾಟ ಮತ್ತು ನೆರೆ ರಾಜ್ಯ ಗಳಿಂದ ಅಕ್ರಮವಾಗಿ ಬರುತ್ತಿರುವ ಮದ್ಯವನ್ನು ತಡೆಯಲು ನಾಳೆ ಅಬಕಾರಿ ಜಿಲ್ಲಾಧಿಕಾರಿಗಳ ಮಹತ್ವದ ಸಭೆ ಕರೆದಿದ್ದೇನೆ. ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರ ಮೂಲಕ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡಿ, ಇಲಾಖೆಯಲ್ಲಿ ಆದಾಯ ವೃದ್ಧಿಸಲು ಕ್ರಮ ಜರುಗಿಸಲಾಗುವುದು ಎಂದರು. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ರಾಜ್ಯಗಳಿಂದ ರಾಜ್ಯಕ್ಕೆ ಮದ್ಯ ಬರುತ್ತಿದ್ದು ಇದನ್ನು ಕಟ್ಟುನಿಟ್ಟಾಗಿ ತಡೆಯಲು ಗಡಿ ಭಾಗಗಳಲ್ಲಿ ಹೊಸದಾಗಿ 25 ಚೆಕ್‍ಪೆÇೀಸ್ಟ್‍ಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ.

Translate »