ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ, ಸೇವೆಗೆ ಅವಕಾಶ
ಮೈಸೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ, ಸೇವೆಗೆ ಅವಕಾಶ

November 3, 2020

ಹನೂರು, ನ.2(ಸೋಮು)- ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಮಾದ ಪ್ಪನ ವಿಶೇಷ ದರ್ಶನ, ರಾತ್ರಿ ವಾಸ್ತವ್ಯ ಹಾಗೂ ವಿವಿಧ ಸೇವೆಗಳಿಗೆ ಹೇರಲಾಗಿದ್ದ ನಿರ್ಬಂಧ ವನ್ನು ಸಡಿಲಿಕೆ ಮಾಡಿ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.

ಮುಡಿಸೇವೆ ಸೇರಿದಂತೆ ವಿವಿಧ ಸೇವೆಗಳು, ವಸತಿ ಗೃಹಗಳಲ್ಲಿ ರಾತ್ರಿ ವಾಸ್ತವ್ಯ ಹಾಗೂ ವಿವಿಧ ಉತ್ಸವಗಳನ್ನು ನಡೆಸಲು ಅನುಮತಿ ನೀಡ ಲಾಗಿದ್ದು, ಆದರೆ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ಷರತ್ತನ್ನು ವಿಧಿಸಿದ್ದಾರೆ. ಪ್ರಸ್ತುತ ನಿರ್ಬಂಧಗಳನ್ನು ತೆರವು ಗೊಳಿಸಿರುವುದರಿಂದ ಮುಂದಿನ ದಿನಗಳಲ್ಲಿ ದೇವಾಲಯದಲ್ಲಿ ಎಲ್ಲಾ ಸೇವೆಗಳೂ ಲಾಕ್‍ಡೌನ್ ಗಿಂತ ಮುಂಚಿನ ರೀತಿಯಲ್ಲಿ ನಡೆಯಲಿವೆ.

ಭಕ್ತರ ಭೇಟಿಗೆ ಮುಕ್ತ ಅವಕಾಶ: ಇದುವರೆಗೂ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.  ಜಿಲ್ಲಾ ಡಳಿತದ ಆದೇಶದನ್ವಯ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65ಕ್ಕಿಂತ ಹೆಚ್ಚು ವಯಸ್ಸಿ ನವರನ್ನು ಬಿಟ್ಟು ಉಳಿದ ಎಲ್ಲಾ ವಯೋಮಾನ ದವರು ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ದೇವರ ದರ್ಶನ ಮಾಡಬಹುದಾಗಿದೆ.

ವಾಸ್ತವ್ಯಕ್ಕೂ ಅನುಮತಿ: ಲಾಕ್‍ಡೌನ್ ಜಾರಿ ಯಾಗಿ ದೇವಾಲಯದಲ್ಲಿ ಜೂನ್ 8ರಿಂದ ದರ್ಶ ನಕ್ಕೆ ಅವಕಾಶ ನೀಡಿದ ನಂತರ ಬೆಟ್ಟದಲ್ಲಿ ಭಕ್ತರಿಗೆ ರಾತ್ರಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ನಿರ್ಬಂಧವನ್ನೂ ಜಿಲ್ಲಾಡಳಿತ ತೆರವುಗೊಳಿಸಿದ್ದು, ವಸತಿ ಗೃಹಗಳು, ಕಾಟೇಜ್, ಡಾರ್ಮಿಟರಿಗಳನ್ನು ಪ್ರಾಧಿಕಾರ ಬಾಡಿಗೆಗೆ ನೀಡಲಿದೆ. ಭಕ್ತರು ವಾಸ್ತವ್ಯ ಹೂಡುವ ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿಸಲಾಗುತ್ತದೆ. ಯಾವುದೇ ಕೊಠಡಿ, ಕಾಟೇಜ್ ಅಥವಾ ಡಾರ್ಮಿಟರಿ ಖಾಲಿ ಆದಾಗ ಅವುಗಳನ್ನು ತಕ್ಷಣ ಶುದ್ಧೀಕರಿಸಿ, ಎಲ್ಲಾ ವಸ್ತ್ರಗಳನ್ನು ಬದಲಿಸ ಲಾಗುವುದು. ಇದಕ್ಕಾಗಿ 100 ರೂ. ಹೆಚ್ಚುವರಿ ಶುಲ್ಕ ವನ್ನು ಪ್ರತಿ ಕೊಠಡಿಗೆ ವಿಧಿಸಲಾಗುವುದು ಎಂದು ಜಯವಿಭವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನಿಯಮ ಪಾಲನೆ ಕಡ್ಡಾಯ: ಭಕ್ತರು ಕೋವಿಡ್ -19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು. ಮಾಸ್ಕ್ ಧರಿಸಿ, ಸ್ಯಾನಿಟೈಸರ್‍ಗಳನ್ನು ಆಗಾಗ ಉಪಯೋಗಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಆನ್‍ಲೈನ್ ಮೂಲಕ ಎಲ್ಲಾ ಸೇವೆಗಳನ್ನು ಕಾಯ್ದಿರಿಸಲು ಅವಕಾಶ ನೀಡ ಲಾಗಿದೆ. ಭಕ್ತರು mmhiಟಟs ಣemಠಿಟe. ಛಿomಗೆ ಲಾಗಿನ್ ಆಗಿ ಸೇವೆಗಳನ್ನು ಕಾಯ್ದಿರಿಸಬಹುದು. 3 ದಿನಗಳಲ್ಲಿ ವಿಶೇಷ ಸಹಾಯವಾಣಿಯನ್ನು ಆರಂಭಿಸಲಾಗುವುದು. 24ಘಿ7 ಕಾಲ ಈ ಸೇವೆ ಲಭ್ಯವಾಗಲಿದೆ. ಅಲ್ಲಿಯವರೆಗೆ ವೆಬ್‍ಸೈಟ್‍ನಲ್ಲಿ ಇರುವ ಮೆಸೆಂಜರ್ ಮೂಲಕ ಯಾವುದೇ ಮಾಹಿತಿ ಪಡೆಯಬಹುದು. ದೂರವಾಣಿ 08225-272121 ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.

 

 

Translate »