ಪೊಲೀಸ್ ಪ್ರತಿಭೆ ಅಭಿವ್ಯಕ್ತಕ್ಕೆ ಇಲಾಖೆಯಿಂದ ಮುಕ್ತ ಅವಕಾಶ
ಮೈಸೂರು

ಪೊಲೀಸ್ ಪ್ರತಿಭೆ ಅಭಿವ್ಯಕ್ತಕ್ಕೆ ಇಲಾಖೆಯಿಂದ ಮುಕ್ತ ಅವಕಾಶ

July 23, 2018

ಮೈಸೂರು: ಇತ್ತೀಚೆಗೆ ಪೊಲೀಸ್ ಸಿಬ್ಬಂದಿಗಳ ಪ್ರತಿಭೆ ಅಭಿವ್ಯಕ್ತಗೊಳಿಸಲು ಇಲಾಖೆ ವೇದಿಕೆ ಕಲ್ಪಿಸಿ ಅವಕಾಶ ಕಲ್ಪಿಸುತ್ತಿದೆ ಎಂದು ಮೈಸೂರಿನ ಪೊಲೀಸ್ ತರಬೇತಿ ಶಾಲೆ ಪ್ರಾಂಶು ಪಾಲರಾದ ಸಾಹಿತಿ ಡಾ. ಧರಣಿದೇವಿ ಮಾಲಗತ್ತಿ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಪ್ರಜ್ಯೋಮ ಪ್ರಕಾಶನ ಮತ್ತು ಹೇಮ ಗಂಗಾ ಕಾವ್ಯ ಬಳಗದ ಸಹಯೋಗ ದೊಂದಿಗೆ ಮೈಸೂರಿನ ಕೆಪಿಎ ಸಭಾಂ ಗಣದಲ್ಲಿ ಏರ್ಪಡಿಸಿದ್ದ ವಿವಿ ಪುರಂ ಠಾಣೆ ಎಎಸ್‍ಐ ಮಹದೇವನಾಯಕ ಕೂಡ್ಲಾಪುರ ಅವರು ಸಂಪಾದಿಸಿ ರಚಿಸಿರುವ `ಸಾಹಿತಿಗಳಂತರಾಳದಿಂದ ಪೊಲೀ ಸರು’ ಎಂಬ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಸಮಾರಂಭ ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.

ಪೊಲೀಸರುಗಳಿಗಾಗಿ ಕವಿಗೋಷ್ಠಿ, ಚಿತ್ರಕಲೆ, ಸಂಗೀತ, ನೃತ್ಯ ಕಾರ್ಯಕ್ರಮ ಗಳು ನಡೆಯುತ್ತಿವೆ. ಇತ್ತೀಚೆಗೆ ಕೆಪಿಎನಲ್ಲಿ ಸಿಬ್ಬಂದಿಗಳ ಕುಂದು-ಕೊರತೆ ಆಲಿಸ ಲೆಂದು ನಿರ್ದೇಶಕರಾದ ವಿಪುಲ್‍ಕುಮಾರ್ ಅವರು ಅಯೋಜಿಸಿದ ಸಭೆಯನ್ನು `ಸಮ್ಮಿಲನ’ ಕಾರ್ಯಕ್ರಮವನ್ನಾಗಿ ಪರಿ ವರ್ತಿಸಲಾಗಿದ್ದು, ಅಲ್ಲಿ ನೃತ್ಯ, ಸಂಗೀತ, ಸಾಹಿತ್ಯ, ಏಕಪಾತ್ರಾಭಿನಯ, ಭಾಷಣ ಸೇರಿದಂತೆ ಇನ್ನಿತರ ಕಲಾ ಪ್ರತಿಭೆಯನ್ನು ವ್ಯಕ್ತಗೊಳಿಸಲು ಅವಕಾಶ ನೀಡಿದಾಗ ನಮ್ಮ ಪೊಲೀಸರ ನಿಜವಾದ ಪ್ರತಿಭೆ ಅರ್ಥ ವಾಯಿತು ಎಂದು ಅವರು ತಿಳಿಸಿದರು.

ಸಾಮಾನ್ಯವಾಗಿ ಪೊಲೀಸರ ಮೇಲೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಕೆಲ ವಿದ್ಯುನ್ಮಾನ ಮಾಧ್ಯಮ ಸಹ ಪೊಲೀ ಸರ ಇಮೇಜ್ ಹಾಳು ಮಾಡುತ್ತಿದೆ ಎಂಬ ಅಭಿಪ್ರಾಯವನ್ನು ಹಲವು ಕವಿ ಗಳು ಈ ಕೃತಿಗೆ ನೀಡಿರುವ ಕವನಗಳ ಮೂಲಕ ವ್ಯಕ್ತಪಡಿಸಿದ್ದಾರೆ ಎಂದ ಮಾಲ ಗತ್ತಿ ಅವರು, ಹೊಗಳಿದಾಗ ಸಂತೋಷ ಪಡುತ್ತೇವೆ, ಬೈದಾಗ ನಿಜವಾಗಲೂ ನೋವಾಗುತ್ತದೆ ಎಂದು ನುಡಿದರು.

ಪೊಲೀಸ್ ಇಲಾಖೆಯಲ್ಲಿ ಪಾಡು ಪಡಬೇಕಾಗಿದೆ ಎಂದು ಹೇಳುತ್ತಾರೆ. ಆದರೆ ಅಧಿಕಾರದ ಶ್ರೇಣೀಕರಣ ಇರು ವೆಡೆಯ ಲ್ಲೆಲ್ಲಾ ಇದೇ ಪರಿಸ್ಥಿತಿ ಇದೆ. ಏಕೆಂದರೆ ಅಧಿಕಾರದ ಶ್ರೇಣೀಕರಣ ಇಲ್ಲದ ವ್ಯವಸ್ಥೆಯೇ ಇಲ್ಲ. ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯದ ಜೊತೆಯಲ್ಲೇ ಮಹದೇವ ನಾಯಕರ ರೀತಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅವ ಕಾಶ ಸಿಕ್ಕಿದಾಗಲೆಲ್ಲಾ ಪ್ರದರ್ಶಿಸಬೇಕು ಎಂದರು.

ಕೃತಿ ಲೋಕಾರ್ಪಣೆ ಮಾಡಿ ಮಾತ ನಾಡಿದ ಕೇಂದ್ರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇ ಶಕಿ ಡಾ. ಟಿ.ಸಿ.ಪೂರ್ಣಿಮಾ ಅವರು, ಈ ಹಿಂದೆ ಪೊಲೀಸರೆಂದರೆ ಕ್ರೂರಿಗಳು ಎಂಬ ಭಯದ ವಾತಾವರಣವಿತ್ತು. ಪೊಲೀಸ್ ಠಾಣೆಗೆ ಹೋಗಲು ಜನ ಹೆದರುತ್ತಿದ್ದರು. ಆದರೀಗ ಈ ಕಂದಕದ ಅಂತರ ತುಂಬಾ ಕಡಿಮೆಯಾಗಿದೆ. ಜನ ಸ್ನೇಹಿ ಪೊಲೀಸ್ ವ್ಯವಸ್ಥೆಯಿಂದಾಗಿ ಬಹಳಷ್ಟು ಸುಧಾರಣೆಯಾಗಿದೆ ಎಂದರು.

ಈ ಕೃತಿಗೆ ಕವನ ರಚಿಸಿರುವ 45 ಸಾಹಿತಿಗಳ 46 ಕವಿತೆಗಳಲ್ಲೂ ಸಹ ಪೊಲೀಸರ ಕೆಲಸ, ತ್ಯಾಗ, ಶ್ರಮವನ್ನೇ ಗುಣಗಾನ ಮಾಡಿದ್ದಾರೆ. ಇದರಿಂದ ಪೊಲೀಸರು ಮತ್ತು ಸಾರ್ವಜನಿಕರ ನಡುವಣ ಭಾವನಾತ್ಮಕ ಸಂಬಂಧ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ಡಾ. ಪೂರ್ಣಿಮಾ ಅವರು ನುಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಅಂಕಣಕಾರ ಡಾ. ಗುಬ್ಬಿಗೂಡು ರಮೇಶ, ಸಾಹಿತಿಗಳಾದ ಡಾ.ಜಯಪ್ಪ ಹೊನ್ನಾಳಿ, ಎ.ಹೇಮಗಂಗಾ ಹಾಗೂ ಸಂಘ ಟಕ ಡಾ. ಭೇರ್ಯ ರಾಮಕುಮಾರ್ ಅವರುಗಳೂ ಸಹ ಮಾತನಾಡಿದರು.
ವಿವಿ ಪುರಂ ಠಾಣೆಯ ಕೇಶವ ಮೂರ್ತಿ ಪ್ರಾರ್ಥಿಸಿದರೆ, ಯುವ ಸಾಹಿತಿ ದೇವರಾಜು ಪಿ.ಚಿಕ್ಕಳ್ಳಿ ಅವರು ಕಾರ್ಯ ಕ್ರಮ ನಿರೂಪಿಸಿದರು. ಕೃತಿಯ ಸಂಪಾ ದಕ ಮಹದೇವನಾಯಕ ಕೂಡ್ಲಾಪುರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

Translate »