ಭಾರತೀಯ ಸಾಕ್ಷ್ಯ ಚಿತ್ರ ಪಿರಿಯಡ್‍ಗೆ ಆಸ್ಕರ್ ಪ್ರಶಸ್ತಿ
ಮೈಸೂರು

ಭಾರತೀಯ ಸಾಕ್ಷ್ಯ ಚಿತ್ರ ಪಿರಿಯಡ್‍ಗೆ ಆಸ್ಕರ್ ಪ್ರಶಸ್ತಿ

February 26, 2019

ಲಾಸ್ ಏಂಜಲೀಸ್: ಅಮೆರಿಕಾದ ಲಾಸ್ ಏಂಜಲೀಸ್‍ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟಗೊಂಡಿತು.ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ರೋಮಾ ಮತ್ತು ದಿ ಫೇವರಿಟ್ ಚಿತ್ರಗಳು ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ: ಅತ್ಯು ತ್ತಮ ಸಾಕ್ಷ್ಯಚಿತ್ರ – ಭಾರತದ ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಮುಟ್ಟಿನ ಕಥೆ ಹೇಳುವ ‘ಪೀರಿಯಡ್ ಎಂಡ್ ಆಫ್ ಸೆಂಟೆನ್ಸ್’ ಸಾಕ್ಷ್ಯಚಿತ್ರ 2019ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದು ಕೊಂಡಿದೆ. ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’ ಮುಟ್ಟಿನ ಬಗ್ಗೆ ಇದ್ದ ಸಾಕ್ಷ್ಯಚಿತ್ರವಾಗಿದೆ. ಅಂದಹಾಗೆ, ‘ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್’ ಡಾಕ್ಯೂಮೆಂಟರಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್ ಅವರ ಕಥೆಯನ್ನ ಆಧರಿಸಿ ಮಾಡಲಾಗಿತ್ತು. ಅಮೆರಿಕನ್ ನಿರ್ದೇಶಕ ರಾಯಕಾ ಖೆತಾಬ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಅತ್ಯುತ್ತಮ ಚಿತ್ರ- ಪೀಟರ್ ಫರೇನಿ ನಿರ್ದೇಶನದ ಗ್ರೀನ್ ಬುಕ್. ಅತ್ಯುತ್ತಮ ನಿರ್ದೇಶಕ-ಅಲ್ಫೋನ್ಸೊ ಕ್ಯುರೋನ್ ರೋಮಾ ಚಿತ್ರಕ್ಕಾಗಿ, ಉತ್ತಮ ನಟಿ-ದಿ ಫೇವರಿಟ್ ಚಿತ್ರಕ್ಕೆ ಒಲಿವಿಯಾ ಕಾಲ್ ಮ್ಯಾನ್, ಉತ್ತಮ ನಟ-ರಾಮಿ ಮಲಿಕ್, ಬೊಹೆಮಿಯನ್ ರಫೆÇ್ಸಡಿ ಚಿತ್ರಕ್ಕೆ, ಅತ್ಯುತ್ತಮ ಪೆÇೀಷಕ ನಟ-ಮಹೆರ್ಷಲಾ ಆಲಿ, ಗ್ರೀನ್ ಬುಕ್ ಚಿತ್ರಕ್ಕೆ, ಅತ್ಯುತ್ತಮ ಪೆÇೀಷಕ ನಟಿ-ರೆಗಿನಾ ಕಿಂಗ್, ಅತ್ಯುತ್ತಮ ವಿದೇಶಿ ಚಿತ್ರ, ಛಾಯಾಗ್ರಹಣ-ರೋಮಾ(ಮೆಕ್ಸಿಕೊ), ಅತ್ಯುತ್ತಮ ಅನಿಮೇಟೆಡ್ ಫ್ಯೂಚರ್ ಚಿತ್ರ-ಸ್ಪೈಡರ್ ಮ್ಯಾನ್: ಇನ್ ಟೂ ದ ಸ್ಪೈಡರ್ ವರ್ಸ್, ಅತ್ಯುತ್ತಮ ಮೂಲ ಚಿತ್ರಕಥೆ- ಬ್ಲಾಕ್ ಪ್ಯಾಂಥರ್, ಅತ್ಯುತ್ತಮ ಗೀತೆ-ಶ್ಯಾಲ್ಲೊ, ಎ ಸ್ಟಾರ್ ಈಸ್ ಬಾರ್ನ್ ಚಿತ್ರಕ್ಕೆ, ಉತ್ತಮ ವಿಶಿಷ್ಟ ಸಾಕ್ಷ್ಯಚಿತ್ರ- ಫ್ರೀ ಸೊಲೊ, ಅತ್ಯುತ್ತಮ ಮೂಲ ಗೀತೆ -ಲೇಡಿ ಗಾಗಾ, ಮಾರ್ಕ್ ರಾಮ್ ಸನ್, ಆಂಟನಿ ರೊಸ್ಸಾಮಾಂಡೊ, ಆಂಡ್ರ್ಯೂ ವ್ಯಾಟ್, ಮೂಲ ಕಥೆ-ನಿಕ್ ವೆಲ್ಲೆಲಾಂಗ್, ಬ್ರಯಾನ್ ಕ್ಯೂರಿ, ಪೀಟರ್ ಫಾರೆಲ್ಲಿ ಗ್ರೀನ್ ಬುಕ್ ಚಿತ್ರಕ್ಕೆ, ಉತ್ತಮ ಛಾಯಾಗ್ರಹಣ-ರೊಮಾ ಚಿತ್ರಕ್ಕೆ ಅಲ್ಫೊನ್ಸೊ ಕ್ಯೂರಾನ್, ಉತ್ತಮ ನಿರ್ಮಾಣ ವಿನ್ಯಾಸ-ಬ್ಲಾಕ್ ಪ್ಯಾಂಥರ್, ಉತ್ತಮ ವಸ್ತ್ರ ವಿನ್ಯಾಸ-ಬ್ಲಾಕ್ ಪ್ಯಾಂಥರ್, ಉತ್ತಮ ಧ್ವನಿ ಸಂಕಲನ -ಬೊಹೆಮಿಯನ್ ರಫೆÇ್ಸಡಿ ಚಿತ್ರ, ಉತ್ತಮ ಸಂಕಲನ-ಬೊಹೆಮಿಯನ್ ರಫೆÇ್ಸಡಿ, ಉತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ-ವೈಸ್.

Translate »