ಮೈಸೂರಿನ ವಿವಿಧೆಡೆ ಪ್ರಧಾನಿ ಮೋದಿ  ಅಭಿಮಾನಿಗಳಿಂದ `ಮನ್ ಕಿ ಬಾತ್’ ಪ್ರಸಾರ
ಮೈಸೂರು

ಮೈಸೂರಿನ ವಿವಿಧೆಡೆ ಪ್ರಧಾನಿ ಮೋದಿ ಅಭಿಮಾನಿಗಳಿಂದ `ಮನ್ ಕಿ ಬಾತ್’ ಪ್ರಸಾರ

February 26, 2019

ಮೈಸೂರು” ಪ್ರಧಾನಿ ನರೇಂದ್ರ ಮೋದಿಯವರ 53ನೇ ಹಾಗೂ ಕೊನೆಯ `ಮನ್ ಕಿ ಬಾತ್’ ರೇಡಿಯೋ ಭಾಷಣ ಆಲಿಸುವ ಅವಕಾಶವನ್ನು ಮೋದಿ ಅಭಿಮಾನಿಗಳು ಮೈಸೂರಿನ ನಾಲ್ಕು ಕಡೆಗಳಲ್ಲಿ ಮಾಡಿಕೊಟ್ಟಿದ್ದರು. ಮೈಸೂರಿನ ತಿಲಕ್‍ನಗರ, ಸರಸ್ವತಿಪುರಂ, ಕಾಳಿದಾಸ ರಸ್ತೆ, ವಿಜಯನಗರದ ಕೆಡಿ ವೃತ್ತದಲ್ಲಿ ವಿಶೇಷವಾಗಿ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಇಟ್ಟು ನರೇಂದ್ರ ಮೋದಿ ಯವರ ಭಾಷಣವನ್ನು ಜನರು ಆಲಿಸಲು ವ್ಯವಸ್ಥೆ ಮಾಡಿದ್ದರು. ಈ ವೇಳೆ ಸಾಕಷ್ಟು ಮಂದಿ ಮೋದಿಯವರ 53ನೇ ರೇಡಿಯೋ ಭಾಷಣವನ್ನು ಆಲಿಸಿದರು.

ವಿಜಯನಗರದ ಕೆಡಿ ವೃತ್ತದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ನೇತೃತ್ವ ವಹಿಸಿದ್ದರೆ, ಕಾಳಿದಾಸ ರಸ್ತೆಯಲ್ಲಿ ಬಿಜೆಪಿ ಮುಖಂಡ ಜಯಪ್ರಕಾಶ್ (ಜೆಪಿ) ವಹಿಸಿದ್ದರು. ಸರಸ್ವತಿಪುರಂ ಜವರೇಗೌಡ ಉದ್ಯಾನದ ಬಳಿ ಬಿಜೆಪಿ ಮುಖಂಡ ಮಲ್ಲಪ್ಪಗೌಡ, ಶಿವಣ್ಣ ಹಾಗೂ ತಿಲಕ್‍ನಗರದ ಉಮ್ಮರ್ ಖಯ್ಯಾಂ ರಸ್ತೆಯಲ್ಲಿ ನಗರ ಪಾಲಿಕೆ ಸದಸ್ಯ ರಂಗಸ್ವಾಮಿ ಮತ್ತು ಬಿಜೆಪಿ ಮುಖಂಡ ಸಂತೋಷ್ ಪತಂಗೆ ನೇತೃತ್ವ ವಹಿಸಿದ್ದರು. ನರೇಂದ್ರ ಮೋದಿಯವರು ಪ್ರತಿ ತಿಂಗಳ ಕೊನೆಯ ಭಾನುವಾರಗಳಂದು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ, ಜನಪರ ಯೋಜನೆ ಗಳ ಬಗ್ಗೆ ತಿಳಿಸುವ ಜೊತೆಗೆ ದೇಶದ ಜನರಲ್ಲಿ ದೇಶಭಕ್ತಿಯನ್ನು ಬಿತ್ತುತ್ತಾ ಬಂದಿದ್ದಾರೆ. ತಮ್ಮ 53ನೇ ಕೊನೆಯ ಮನ್ ಕಿ ಬಾತ್‍ನಲ್ಲಿ ಪುಲ್ವಾಮಾದಲ್ಲಿ ಪ್ರಾಣ ತೆತ್ತ ಸೈನಿಕರ ಧೈರ್ಯ, ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಈ ಸಂದರ್ಭದಲ್ಲಿ ಮುಖಂ ಡರು ಸ್ಮರಿಸಿದರು. ತಿಲಕ್‍ನಗರದ ಉಮ್ಮರ್ ಖಯ್ಯಾಂ ರಸ್ತೆಯಲ್ಲಿ ನಡೆದ ಮನ್‍ಕಿ ಬಾತ್ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಸೋಮಸುಂದರ್, ಸೋಮಶೇಖರ ರಾಜು, ಹರ್ಷ, ವಿನಯ್, ಕಿರಣ್‍ಗೌಡ, ರಾಮನ್‍ಜೀ ಇನ್ನಿತರರು ಪಾಲ್ಗೊಂಡಿದ್ದರು.

Translate »