ಮೂರು ವಾರ್ಡ್‍ಗಳಲ್ಲಿ 1.18 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಲ್.ನಾಗೇಂದ್ರ
ಮೈಸೂರು

ಮೂರು ವಾರ್ಡ್‍ಗಳಲ್ಲಿ 1.18 ಕೋಟಿ ರೂ. ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಲ್.ನಾಗೇಂದ್ರ

February 26, 2019

ಮೈಸೂರು: ಚಾಮರಾಜ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.2, 20, 22ರಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಚಾಲನೆ ನೀಡಿದರು.

ವಾರ್ಡ್ ನಂ.2ರ ಮಂಚೇಗೌಡನ ಕೊಪ್ಪಲಿನಲ್ಲಿ ಶಾಸಕರು ಈ ಹಿಂದೆ ಪಾದ ಯಾತ್ರೆ ನಡೆಸುವ ವೇಳೆ ರಸ್ತೆ ಹಾಗೂ ಚರಂಡಿ ದುರಸ್ತಿಯಾಗದಿರುವ ಬಗ್ಗೆ ನಾಗರಿ ಕರು ದೂರು ನೀಡಿದ್ದರು. ಇದಕ್ಕೆ ಸ್ಪಂದಿ ಸಿದ ಶಾಸಕರು, 50 ಲಕ್ಷ ರೂ. ವೆಚ್ಚದಲ್ಲಿ ಆಯ್ದ ರಸ್ತೆಗಳ ಡಾಂಬರೀಕರಣ, ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

20ನೇ ವಾರ್ಡ್‍ನಲ್ಲಿ ವಿಜಯನಗರದ ಕನ್ನಡ ಸಾಹಿತ್ಯ ಭವನದ ಎದುರು 18.80 ಲಕ್ಷ ರೂ. ವೆಚ್ಚದಲ್ಲಿ ವಾಚನಾಲಯ ಕಟ್ಟಡ ಹಾಗೂ ವಾರ್ಡ್ 22ರ ಪಡುವಾರ ಹಳ್ಳಿಯ ಮಹದೇಶ್ವರ ದೇವಸ್ಥಾನದ ದಕ್ಷಿಣ ಭಾಗದ ಆಟದ ಮೈದಾನದಲ್ಲಿ 25ಲಕ್ಷ ರೂ. ವೆಚ್ಚದಲ್ಲಿ ಗ್ಯಾಲರಿ ನಿರ್ಮಾಣ ಮತ್ತು 25ಲಕ್ಷ ರೂ. ವೆಚ್ಚದ ರಂಗಮಂದಿರದ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಮುಡಾ ವತಿಯಿಂದ ನಿರ್ಮಾಣವಾಗುತ್ತಿ ರುವ ಕಾಮಗಾರಿಗಳಿಗೆ ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಗುತ್ತಿಗೆದಾ ರರು ಗುಣಮಟ್ಟದ ಕಾಮಗಾರಿ ನಡೆಸಿ, ನಿಗದಿತ ಸಮಯಕ್ಕೆ ಪೂರ್ಣಗೊಳಿಸ ಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮುಡಾದ ಸಹಾ ಯಕ ಕಾರ್ಯಪಾಲಕ ಅಭಿಯಂತರ ರಾದ ಸುರೇಶ್‍ಬಾಬು, ಜೋಷಿ, ಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ನಮ್ರತಾ ರಮೇಶ್, ಸುಬ್ಬಯ್ಯ, ಪುನೀತ್ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಇದೇ ವೇಳೆ ಮಾಧ್ಯಮದವರ ಪ್ರಶ್ನೆ ಗಳಿಗೆ ಪ್ರತಿಕ್ರಿಯಿಸಿ, ಜೆಡಿಎಸ್ ಪಕ್ಷಕ್ಕೆ ತತ್ವ ಸಿದ್ಧಾಂತವೇನೂ ಇಲ್ಲ. ಅವರು ಅಧಿಕಾರ ಕ್ಕಾಗಿ ಯಾರೊಂದಿಗೆ ಬೇಕಾದರೂ ಸೇರು ತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. 37 ಶಾಸಕರಿರುವ ಜೆಡಿಎಸ್, 80 ಶಾಸಕರಿ ರುವ ಕಾಂಗ್ರೆಸ್‍ನೊಂದಿಗೆ ಸೇರಿ ಮೈತ್ರಿ ಸರ್ಕಾರ ರಚಿಸಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್‍ಗೆ ಸ್ವಾಭಿಮಾನ ಸಿದ್ಧಾಂತಗಳು ಇದ್ದಿದ್ದರೆ ಮೈತ್ರಿಗೆ ಅವ ಕಾಶವೇ ಇರುತ್ತಿರಲಿಲ್ಲ ಎಂದು ಹೇಳಿದರು.

ಈ ಹಿಂದೆ ಜೆಡಿಎಸ್‍ನವರು ಪಾಲಿಕೆ ಯಲ್ಲಿ ಬಿಜೆಪಿಯೊಂದಿಗೆ ಸೇರಿ ಉಪ ಮೇಯರ್ ತÀಮಗೆ, ಮೇಯರ್ ಸ್ಥಾನ ಬಿಜೆಪಿಗೆ ಎಂದು ಹೇಳಿ ಅಧಿಕಾರ ಮಾಡಿ ದ್ದರು. ನಂತರದಲ್ಲಿ ಬೆಂಗಳೂರಿನ ಬಿಬಿಎಂಪಿ ಯಲ್ಲಿ ಬೇರೆ ತರಹ ಮಾಡಿದರು. ಇಂದು ಜೆಡಿಎಸ್‍ನವರೇ ನಮ್ಮ ಪಕ್ಷದ ಜಿಲ್ಲಾಧ್ಯಕ್ಷರು, ಸಂಸದರೊಂದಿಗೆ ಮಾತನಾಡಿ, ಬಳಿಕ ವಚನ ಭ್ರಷ್ಟರಾದರು. ಇಂತಹುದೆಲ್ಲ ಜೆಡಿಎಸ್‍ಗೆ ಹೊಸದೇನಲ್ಲ ಎಂದು ಟೀಕಿಸಿದರು.
ಜೆಡಿಎಸ್ ಅವಕಾಶವಾದಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಪಕ್ಷ ಇರು ವುದು ಅಧಿಕಾರಕ್ಕಾಗಿ ಮಾತ್ರ. ಹಿಂಬಾಗಿ ಲಿಂದಲಾದರೂ ಅಧಿಕಾರ ಹಿಡಿದು, ಆಡಳಿತ ನಡೆಸಿ, ಅಸ್ವಿತ್ವವನ್ನು ಉಳಿಸಿಕೊಳ್ಳಲು ಪ್ರತಿ ಕ್ಷಣವೂ ಹೆಣಗಾಡುತ್ತಿದೆ ಎಂದರು.

Translate »