ಬೇಲೂರು ಸೇರಿದಂತೆ ನಾಲ್ಕು ಪ್ರವಾಸಿ ತಾಣದಲ್ಲಿ  ತ್ರೀ-ಸ್ಟಾರ್ ಹೋಟೆಲ್ ನಿರ್ಮಾಣ
ಮೈಸೂರು

ಬೇಲೂರು ಸೇರಿದಂತೆ ನಾಲ್ಕು ಪ್ರವಾಸಿ ತಾಣದಲ್ಲಿ ತ್ರೀ-ಸ್ಟಾರ್ ಹೋಟೆಲ್ ನಿರ್ಮಾಣ

February 26, 2019

ಮೈಸೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿ ಯಿಂದ ರಾಜ್ಯದ ನಾಲ್ಕು ಪ್ರವಾಸಿ ತಾಣಗಳಲ್ಲಿ ತ್ರೀ-ಸ್ಟಾರ್ ಹೋಟೆಲ್ ಗಳ ನಿರ್ಮಾಣಕ್ಕೆ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಅನುಮೋದಿಸಿದ್ದಾರೆ.

ಹಾಸನ ಜಿಲ್ಲೆ ಬೇಲೂರಿನಲ್ಲಿ 20.71 ಕೋಟಿ ರೂ., ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ 18.32 ಕೋಟಿ ರೂ., ವಿಜಯಪುರದಲ್ಲಿ 16.74 ಕೋಟಿ ರೂ. ಹಾಗೂ ಹಂಪಿಯಲ್ಲಿ 28.20 ಕೋಟಿ ರೂ. ಸೇರಿದಂತೆ ಒಟ್ಟು 84 ಕೋಟಿ ಅಂದಾಜು ಮೊತ್ತದಲ್ಲಿ ಹೋಟೆಲ್‍ಗಳ ನಿರ್ಮಾಣಕ್ಕೆ ಸಮಗ್ರ ಯೋಜನಾ ಸಿದ್ಧಪಡಿಸಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸಚಿವ ಸಾ.ರಾ.ಮಹೇಶ್ ಅನುಮೋದಿಸಿದ್ದು, ಸಚಿವ ಸಂಪುಟ ಸಭೆಯ ಸಮ್ಮತಿಯೂ ದೊರಕುವ ನಿರೀಕ್ಷೆ ಇದೆ.

Translate »