ವಿದ್ಯಾರ್ಥಿನಿ ಹತ್ಯೆ ಯತ್ನ: ಯುವರಾಜ  ಕಾಲೇಜು ವಿದ್ಯಾರ್ಥಿ ಅಮಾನತಿಗೆ ನಿರ್ಧಾರ
ಮೈಸೂರು

ವಿದ್ಯಾರ್ಥಿನಿ ಹತ್ಯೆ ಯತ್ನ: ಯುವರಾಜ ಕಾಲೇಜು ವಿದ್ಯಾರ್ಥಿ ಅಮಾನತಿಗೆ ನಿರ್ಧಾರ

February 26, 2019

ಮೈಸೂರು: ಪ್ರೀತಿ ನಿವೇದನೆಯನ್ನು ತಿರಸ್ಕರಿಸಿದ್ದ ವಿದ್ಯಾ ರ್ಥಿನಿಗೆ ಕಟ್ಟರ್ ಬ್ಲೇಡ್‍ನಿಂದ ಕೊಯ್ದು ಹತ್ಯೆಗೈಯ್ಯಲು ಯತ್ನಿಸಿದ್ದ ಯುವ ರಾಜು ಕಾಲೇಜು ವಿದ್ಯಾರ್ಥಿ ರೋಹಿತ್ (21) ಎಂಬಾತನನ್ನು ಕಾಲೇಜಿನಿಂದ ಅಮಾನತು ಮಾಡಲು ನಿರ್ಧರಿಸಲಾ ಗಿದೆ. ಗುಂಡ್ಲುಪೇಟೆಯ ನಿವಾಸಿಯಾದ ರೋಹಿತ್, ಯುವರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಯಾಗಿದ್ದು, ಫೆ.15ರಂದು ಈತನ ಜೊತೆ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ. ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದರಿಂದ ತರಗತಿ ಯ¯್ಲÉೀ ಹತ್ಯೆಗೈಯ್ಯಲು ಯತ್ನಿಸಿದ್ದಲ್ಲದೆ, ರಕ್ಷಿಸಲು ಬಂದ ಮತ್ತೊಬ್ಬ ವಿದ್ಯಾ ರ್ಥಿನಿ ಕೈಗೂ ಗಾಯ ಮಾಡಿದ್ದ. ಈ ಸಂಬಂಧ ಲಕ್ಷ್ಮಿಪುರಂ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ವಿದ್ಯಾರ್ಥಿ ರೋಹಿತ್ ವಿರುದ್ಧ ವಿವಿ ಕಠಿಣ ಕ್ರಮ ತೆಗೆದುಕೊಂಡಿದೆ.

Translate »