ಪತ್ರಕರ್ತರ ರಾಜ್ಯ ಸಮ್ಮೇಳನದ  ಪ್ರಚಾರಕ್ಕೆ ಹೊರಟಿದೆ ಮಾಧ್ಯಮ ರಥ
ಮೈಸೂರು

ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರಕ್ಕೆ ಹೊರಟಿದೆ ಮಾಧ್ಯಮ ರಥ

February 26, 2019

ಮೈಸೂರು: ಮೈಸೂರು ಜಿಲ್ಲೆ ಸುತ್ತೂರಿನಲ್ಲಿ ಮಾ.1 ಮತ್ತು 2ರಂದು ನಡೆಯಲಿರುವ 34ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರಕ್ಕಾಗಿ ಸೋಮವಾರ `ಮಾಧ್ಯಮ ರಥ’ಕ್ಕೆ ಸಂಸದರಾದ ಆರ್. ಧ್ರುವನಾರಾಯಣ್, ಪ್ರತಾಪ್ ಸಿಂಹ ಚಾಲನೆ ನೀಡಿದರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಎದುರು ಸಮ್ಮೇಳನದ ಪ್ರಚಾರ ರಥಕ್ಕೆ ಚಾಲನೆ ನೀಡಲಾಯಿತು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಮಾಜದ ಅಭದ್ರತೆ-ಅನ್ಯಾಯಗಳನ್ನು ಬೆಳ ಕಿಗೆ ತರುವ ಪತ್ರಕರ್ತರು ಮಾತ್ರ ಅಭದ್ರತೆ ಯಲ್ಲೇ ಕೆಲಸ ಮಾಡುವ ಸನ್ನಿವೇಶವಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಮ್ಮೇಳನ ವೇದಿಕೆಯಾಗಲಿ. ಈ ಹಿಂದೆ ಪತ್ರಿಕಾ ಕ್ಷೇತ್ರದ ದುಃಖ ದುಮ್ಮಾನ ಗಳನ್ನು ಅನುಭವಿಸಿದ್ದೇನೆ. ಪತ್ರಕರ್ತರ ನೋವು-ನಲಿವಿನ ಚಿಂತನೆಗೆ ಸಮ್ಮೇಳನ ವೇದಿಕೆಯಾಗುವ ಮೂಲಕ ಯಶಸ್ವಿ ಯಾಗಲಿ ಎಂದು ಹಾರೈಸಿದರು.

ರಥದ ಸಂಚಾರ ಮಾರ್ಗ: ಇಂದು ನಗ ರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಮಾಧ್ಯಮ ರಥ ಬಳಿಕ ಕೆಆರ್ ನಗರದತ್ತ ಸಾಗಿತು. ಭೇರ್ಯ, ಸಾಲಿಗ್ರಾಮ, ಚುಂಚನ ಕಟ್ಟೆ, ಹೊಸೂರು, ಬೆಟ್ಟದಪುರ, ಪಿರಿಯಾ ಪಟ್ಟಣದಲ್ಲಿ ಸಂಚರಿಸಿ ಸಂಜೆ ಹುಣಸೂ ರಲ್ಲಿ ತಂಗಲಿದೆ. ಮರುದಿನ ಬೆಳಿಗ್ಗೆ ಹುಣ ಸೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಬಳಿಕ ಗದ್ದಿಗೆ ಮೂಲಕ ಹೆಚ್.ಡಿ.ಕೋಟೆ ತಲುಪಿ ತದನಂತರ ಸರಗೂರು, ನಂಜನಗೂಡು, ತಿ.ನರಸೀಪುರದಲ್ಲಿ ಪ್ರಚಾರ ಕಾರ್ಯ ನಡೆಸ ಲಿದೆ. ಮೈಸೂರು ನಗರ ಸಂಚಾರ ಸಹಾ ಯಕ ಪೆÇಲೀಸ್ ಆಯುಕ್ತ ಜಿ.ಎನ್.ಮೋಹನ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪದಾಧಿಕಾರಿಗಳಾದ ಕೋಟೆ ಮಂಜು, ಸುಬ್ರಹ್ಮಣ್ಯ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಾರ್ತಾ ಇಲಾಖೆ ಸಹಾ ಯಕ ನಿರ್ದೇಶಕ ರಾಜು ಮತ್ತಿತರರಿದ್ದರು.

Translate »