2014ರಲ್ಲಿ ಗುಜರಾತ್ ಮಾದರಿ ಈಗ  ವಿಶ್ವಕ್ಕೆ ಭಾರತವೇ ಮಾದರಿಯಾಗಿದೆ
ಮೈಸೂರು

2014ರಲ್ಲಿ ಗುಜರಾತ್ ಮಾದರಿ ಈಗ ವಿಶ್ವಕ್ಕೆ ಭಾರತವೇ ಮಾದರಿಯಾಗಿದೆ

February 26, 2019

ಮೈಸೂರು: 2014ರ ಲೋಕ ಸಭಾ ಚುನಾವಣೆಯಲ್ಲಿ ಮೋದಿ ಅವರ ಸಾಧನೆ ಬಿಂಬಿ ಸಲು ಗುಜರಾತ್ ಮಾದರಿ ಎಂದು ಹೇಳುತ್ತಿದ್ದೆವು. ಈ ಚುನಾವಣೆಯಲ್ಲಿ ಭಾರತದ ಅಭಿವೃದ್ಧಿ ಬಗ್ಗೆ ಇಡೀ ವಿಶ್ವವೇ ಕೊಂಡಾಡುತ್ತಿರುವುದು ನಮ್ಮ-ನಿಮ್ಮೆಲ್ಲರ ಸುದೈವ ಎಂದು ಸಂಸದ ಪ್ರತಾಪ ಸಿಂಹ ಅಭಿಪ್ರಾಯಪಟ್ಟರು.

ಮೈಸೂರಿನ ರಾಜೇಂದ್ರಭವನದಲ್ಲಿ ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕದ ವತಿಯಿಂದ ವಿಜಯ ಲಕ್ಷ್ಯ-2019ರ ಶೀರ್ಷಿಕೆಯಡಿ ಆಯೋಜಿಸಿದ್ದ ಯುವ ಮೋರ್ಚಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಹಿಂದಿನ ಚುನಾವಣೆಯಲ್ಲಿ ಮೋದಿ ಗುಜರಾತಿನ ಮುಖ್ಯ ಮಂತ್ರಿಯಾಗಿದ್ದರು. ಆಗ ದೇಶಕ್ಕೆ ಗುಜರಾತ್ ಮಾದರಿಯ ಅಭಿವೃದ್ಧಿ ಎಂದು ಹೇಳಿತ್ತಿದ್ದೆವು. ಇಂದು ಮೋದಿ ಮಾದ ರಿಯ ಅಭಿವೃದ್ದಿಗೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಹೆಚ್ಚಿನ ಒತ್ತು ನೀಡಬೇಕು ಎನ್ನುತ್ತಿವೆ. ಯುಪಿಎ ಸರ್ಕಾರ ಯೋಜನೆ ಗಳನ್ನು ಘೋಷಣೆ ಮಾಡುತ್ತಿತ್ತು. ಅದು ಜನರಿಗೆ ತಲುಪು ತ್ತಿರಲಿಲ್ಲ. ಆದರೆ, ಈ ಸರ್ಕಾರದಲ್ಲಿ ಒಂದು ಯೋಜನೆ ಯನ್ನು ಘೋಷಣೆ ಮಾಡಿ, ಜನರಿಗೆ ತಲುಪುವಂತೆ ಮಾಡಿರುವುದಕ್ಕೆ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿರುವುದೇ ಒಂದು ಉದಾಹರಣೆ ಎಂದರು.

ಬಹಳ ವರ್ಷಗಳಿಂದಲೂ ಮೈಸೂರು ಪ್ರವಾಸೋದ್ಯ ಮದಲ್ಲಿ ಮುಂಚೂಣಿಯಲ್ಲಿದ್ದರೂ ಇಲ್ಲಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳು ಮಾತ್ರ ಅಭಿವೃದ್ಧಿಯಾಗಿರಲಿಲ್ಲ. ವಾಜಪೇಯಿ ಆಡಳಿತದಲ್ಲಿ ವಿಮಾನ ನಿಲ್ದಾಣವಾಯಿತು. ಮೈಸೂರು-ಬೆಂಗಳೂರು ಜೋಡಿ ರೈಲು ಮಾರ್ಗಕ್ಕೆ ಚಾಲನೆ ನೀಡಲಾಯಿತು. ಆದರೆ, ಅದನ್ನು ಮುಗಿಸಲು ಎನ್‍ಡಿಎ ನೇತೃತ್ವದ ಮೋದಿ ಸರ್ಕಾರವೇ ಬರಬೇಕಾಯಿತು. ಮಾಜಿ ಪ್ರಧಾನಿ ದೇವೇಗೌಡರು, ನೈಸ್ ರಸ್ತೆ ಮಾಡುವುದಾಗಿ ತಾವು ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಿದರು, ಆದರೆ ಅನುಷ್ಠಾನ ಗೊಳಿಸಲಿಲ್ಲ. ಅವರಾದ ಮೇಲೂ ನಾಲ್ಕೈದು ಮಂದಿ ಮುಖ್ಯಮಂತ್ರಿಗಳು ಆಡಳಿತ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಬೇಸತ್ತ ಅಂದಿನ ಸಿಎಂ ಎಸ್.ಎಂ.ಕೃಷ್ಣ 4 ಪಥದ ರಸ್ತೆ ಅಭಿವೃದ್ಧಿಪಡಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ 6 ವಿಮಾನಗಳು ಮೈಸೂರಿಂದ ಬೇರೆ ನಗರಗಳಿಗೆ ಹಾರಾಟ ಆರಂಭಿಸಿವೆ. 10 ಪಥದ ಮೈಸೂರು-ಬೆಂಗಳೂರು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕುಂಟುತ್ತ ಸಾಗುತ್ತಿದ್ದ ಜೋಡಿ ರೈಲು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಅಭಿವೃದ್ಧಿ ಮುಂದುವರೆಸಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಇದಕ್ಕೆ ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಲ್ಲಿ ಭಾಜಪ ಗೆಲುವು ಸಾಧಿಸಬೇಕು ಎಂದರು. ಮುಂದಿನ 2021ರ ವೇಳೆಗೆ ಮೈಸೂರು ಸಂಪರ್ಕಿಸುವ ಎಲ್ಲಾ ಸಾರಿಗೆ ಸಂಪರ್ಕಗಳು ಅಭಿವೃದ್ಧಿಯಾಗಲಿವೆ. ಇದರಿಂದ ಮೈಸೂರಿನ ಕೀರ್ತಿ, ವಾಣಿಜ್ಯ ಚಟುವಟಿಕೆ ಗಳು ಮತ್ತಷ್ಟು ಬೆಳವಣಿಗೆಯಾಗಲಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಯುವ ಮೋರ್ಚಾ ಕಾರ್ಯಕರ್ತರು ನನ್ನ ಗೆಲುವಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರಲ್ಲದೆ, ಕಳೆದ ಬಾರಿ ಮೋದಿ ಪ್ರವಾಹ ಬಂತು. ಈ ಬಾರಿ ಅದು ಸುನಾಮಿ ಆಗಬೇಕು. ಇದು ಸಾಧ್ಯ ವಾಗಬೇಕಾದರೆ, ಯುವ ಮೋರ್ಚಾ ಸಮರೋಪಾದಿ ಯಲ್ಲಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಮೋದಿ ಪ್ರಧಾನಿಯಾದ ಮೇಲೆ ಕೇಂದ್ರ ಸರ್ಕಾರದ ಅನುದಾನ ನೇರವಾಗಿ ಗ್ರಾಮ ಪಂಚಾಯ್ತಿಗೆ ಬರುತ್ತಿದೆ. ಇದರಿಂದ ಗ್ರಾಮಗಳ ಅಭಿವೃದ್ಧಿ, ಆಸ್ಪತ್ರೆ, ಅಂಗನವಾಡಿ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿಗೆ ಸಹಕಾರಿಯಾ ಗಿದೆ. ನನ್ನ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರ ಕಷ್ಟ ಕಾಲದಲ್ಲಿ ನಿಂತು ಕೆಲಸ ಮಾಡಿದ್ದೇನೆ ಎಂದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಗ್ರಾಮಾಂ ತರ ಅಧ್ಯಕ್ಷ ಕೋಟೆ ಶಿವಣ್ಣ, ರಾಜ್ಯ ಸ್ಲಂ ಮೋರ್ಚಾ ಕಾರ್ಯ ರ್ಶಿ ರಘು ಕೌಟಿಲ್ಯ, ಮುಖಂಡರಾದ ಪಿ. ರಾಜೇಂದ್ರ, ಫಣೀಶ್, ಗೋಕುಲ್ ಗೋವರ್ಧನ್, ಮಾರ್ಬಳ್ಳಿ ಮೂರ್ತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »