ಮೈಸೂರು: ಬಿಜೆಪಿ ಯುವ ಮೋರ್ಚಾ ಮೈಮರೆತರೆ, ಕೇಂದ್ರದ ಅಧಿಕಾರದ ಚುಕ್ಕಾಣಿ ಮತ್ತೆ ದುಷ್ಟಕೂಟದ ವಶವಾಗುತ್ತದೆ. ಇದರಿಂದ ಕಳೆದ ಐದು ವರ್ಷಗಳಲ್ಲಿ ವಿಶ್ವ ಮಟ್ಟದಲ್ಲಿ ಭಾರತ ಸಂಪಾದಿಸಿರುವ ಗೌರವ ಕುಸಿಯುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ತಿಳಿಸಿದರು.
ಯುವ ಮೋರ್ಚಾ ಕಾರ್ಯಕರ್ತರ ಸಮಾ ವೇಶದಲ್ಲಿ ಮಾತನಾಡುತ್ತ, 2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿ ಕಾರದಲ್ಲಿತ್ತು. ಆ ವರ್ಷ ನಡೆದ ಚುನಾವಣೆಯಲ್ಲಿ ಯುವ ಮೋರ್ಚಾ ಮೈಮರೆತ ಪರಿಣಾಮ ಅಧಿ ಕಾರ ಕಳೆದುಕೊಳ್ಳಬೇಕಾಯಿತು. ಈ ಬಾರಿ ಹಾಗಾಗಬಾರದು. 2014ರ ಚುನಾವಣೆಯಲ್ಲಿ ಯುವ ಕಾರ್ಯಕರ್ತರು ತಳಮಟ್ಟದಲ್ಲಿ ಕೆಲಸ ಮಾಡಿದ್ದಂತೆ ಈ ಬಾರಿಯೂ ಅದೇ ರೀತಿ ಪಕ್ಷ ಸಂಘಟಿಸಬೇಕು ಎಂದು ಕಿವಿಮಾತು ಹೇಳಿದರು.
ಈಗಿನ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಮುದ್ರಾ ಯೋಜನೆ, ಗ್ರಾಮಗಳ ಅಭಿವೃದ್ಧಿ, ಬಡವರಿಗೆ ಆಧಾರ್ ಮೂಲಕ ಸಬ್ಸಿಡಿ ವಿತರಣೆ, ಜನಧನ್ ಅಕೌಂಟ್, ಪಾಸ್‍ಪೋರ್ಟ್ ಸೇವಾ ಕೇಂದ್ರ, ಜನೌಷಧ ಅಂಗಡಿಗಳು, ರೈಲ್ವೆ ಕಾಮಗಾರಿ, ಹೆದ್ದಾರಿಗಳ ಅಭಿವೃದ್ಧಿ, ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ, ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ, ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಸೇರಿದಂತೆ ಅನೇಕ ಯೋಜನೆ ಗಳನ್ನು ಜಾರಿ ಮಾಡಿ, ಪೂರ್ಣಗೊಳಿಸಿರುವುದು ಮೋದಿಯವರ ಸ್ವಚ್ಛ ಆಡಳಿತದ ಪ್ರತೀಕ ಎಂದರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಗುಜ ರಾತ್ ಮಾದರಿ ಆಡಳಿತದ ಬಗ್ಗೆ ಮತದಾರರಿಗೆ ಪರಿಚಯ ಮಾಡಲಾಗುತ್ತಿತ್ತು. ಈ ಬಾರಿ ಪ್ರಧಾನಿ ಮೋದಿಯವರ ಆಡಳಿತವನ್ನು ಇಡೀ ವಿಶ್ವವೇ ಮೆಚ್ಚಿದೆ. ಅದು ಭಾರತೀಯ ಸೇನೆಯನ್ನು ಬಲ ಪಡಿಸಿರುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಹೆಚ್ಚಿಸಿರುವುದು. ಕೈಗಾರಿಕೆ ಸ್ಥಾಪ ನೆಗೆ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಮೋದಿ ಯವರ ಸಾಧನೆ ಅಮೋಘ ಎಂದರು.
ಈ ಚುನಾವಣೆಯಲ್ಲಿ ಮೋದಿಯವರ ಅಭಿ ವೃದ್ಧಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸು ವುದು ಯುವ ಮೋರ್ಚಾ ಕರ್ತವ್ಯವಾಗಿದೆ. ಆದ್ದ ರಿಂದ 2004ರ ಚುನಾವಣೆಯಲ್ಲಿ ಆದ ಪರಿಸ್ಥಿತಿ ಈ ಚುನಾವಣೆಯಲ್ಲಿ ಬರಬಾರದು. ಈ ದೇಶ ಮತ್ತೆ ದುಷ್ಟರ ಪಾಲಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಮೈಸೂರು-ಕೊಡಗು ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ಸುಮಾರು 20 ರಿಂದ 22 ಸ್ಥಾನ ಗೆಲ್ಲಲು ಜಿಲ್ಲಾ, ತಾಲೂಕು ಮತ್ತು ಹೋಬಳಿ ಮಟ್ಟದ ಯುವ ಕಾರ್ಯಕರ್ತರು ಚುನಾವಣೆ ಯಲ್ಲಿ ಸಕ್ರಿಯರಾಗಬೇಕು ಎಂದು ಕರೆ ನೀಡಿದರು.
ಮತ್ತೊರ್ವ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಮಾತನಾಡಿ, ಮೈಸೂರಿನ ಯುವ ಮೋರ್ಚಾ ಕಾರ್ಯಕರ್ತರು ಇಂದು ಎದೆತಟ್ಟಿ ಮತದಾರರಿಗೆ ಮನವರಿಕೆ ಮಾಡುವ ಕಾಲ ಸಮೀಪಿಸಿದೆ. ಕೇಂದ್ರ ದಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಇಲ್ಲಿನ ಸಂಸದ ಪ್ರತಾಪಸಿಂಹ ಭ್ರಷ್ಟಾಚಾರ ದಿಂದ ದೂರವಿದ್ದು, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮದು. ಈ ಬಾರಿಯ ಚುನಾವಣೆ ಯುವಕರು ಮತ್ತು ದೇಶವಾಸಿಗಳ ಸ್ವಾಭಿಮಾನ ಪ್ರಶ್ನೆಯಾಗಿದೆ ಎಂದು ತಿಳಿಸಿದರು.