ಚಾಮುಂಡಿಬೆಟ್ಟದಲ್ಲೂ ಅಗ್ನಿ ಹಾವಳಿ: ತಪ್ಪಿದ ಭಾರೀ ಹಾನಿ
ಮೈಸೂರು

ಚಾಮುಂಡಿಬೆಟ್ಟದಲ್ಲೂ ಅಗ್ನಿ ಹಾವಳಿ: ತಪ್ಪಿದ ಭಾರೀ ಹಾನಿ

February 26, 2019

ಮೈಸೂರು: ಕಿಡಿಗೇಡಿಗಳು ಹಚ್ಚಿದ ಕಿಚ್ಚಿಗೆ ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯದಲ್ಲಿ ಭಾರೀ ಪ್ರಮಾಣದ ವನ್ಯ ಸಂಪತ್ತು ಅಗ್ನಿಗಾಹುತಿ ಯಾಗುತ್ತಿರುವ ಸಂದರ್ಭದಲ್ಲಿಯೇ ಮೈಸೂರಿನಲ್ಲಿಯೂ ಕಿಡಿಗೇಡಿಗಳ ದುಷ್ಕೃತ್ಯದಿಂದಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮೈಸೂರು-ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ಬಿಜಿಎಸ್ ಸಂಸ್ಥೆ ಖಾಲಿ ಜಾಗದಲ್ಲಿ ಕಿಡಿಗೇಡಿ ಗಳು ಬೆಂಕಿ ಹಾಕಿ ಪರಾರಿಯಾಗಿದ್ದರು. ಮಧ್ಯಾಹ್ನ 12.30ರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಬಿಸಿಲಿನ ಬೇಗೆಗೆ ತೀವ್ರ ಸ್ವರೂಪ ಪಡೆಯಿತು. ಗಾಳಿ ರಭಸ ವಾಗಿ ಬೀಸಲಾರಂಭಿಸಿದ ಪರಿಣಾಮ ಬೆಂಕಿ ಚಾಮುಂಡಿಬೆಟ್ಟದ ತಪ್ಪಲಿಗೂ ಪ್ರವೇಶಿಸಿತು. ಅಷ್ಟರಲ್ಲಿ ವಿಷಯ ತಿಳಿದು ಸ್ಥಳಕ್ಕೆ ಬಂದ ಆರ್‍ಎಫ್‍ಓ ಗೋವಿಂದರಾಜು ನೇತೃತ್ವದ ಅರಣ್ಯ ಸಿಬ್ಬಂದಿ, ಮೈಸೂರು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಗುರುರಾಜ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ದಟ್ಟ ಹೊಗೆಯೊಂದಿಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ಕಂಡ ದಾರಿ ಹೋಕರು, ವಿವಿಧ ಕಾಲೇಜು ವಿದ್ಯಾರ್ಥಿಗಳು ಹಸಿ ಸೊಪ್ಪಿನಿಂದ ಬಡಿದು ಬೆಂಕಿ ನಂದಿಸುವ ಕಾರ್ಯಾಚರ ಣೆಗೆ ಸಾಥ್ ನೀಡಿದರು. ಇದರಿಂದ ಬೆಂಕಿ ನಿಯಂತ್ರಣಕ್ಕೆ ಬಂತು. ಈ ವೇಳೆ ಅಗ್ನಿ ಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗಿ ಕಾರ್ಯಾಚರಣೆಗೆ ಸ್ವಲ್ಪ ಅಡಚಣೆಯಾ ಯಿತು. ಆದರೂ ಸಿಬ್ಬಂದಿ ಸ್ವಯಂ ಸೇವಕ ರೊಂದಿಗೆ ಬೆಂಕಿ ಕಿಡಿ ಬೆಟ್ಟಕ್ಕೆ ಹರಡದಂತೆ ನೋಡಿಕೊಂಡರು. ಕೆಲ ಸಮಯದ ಬಳಿಕ ಬಂದ ಮತ್ತೆರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ಸಂಪೂರ್ಣ ನಂದಿಸಿದವು. ಕಾರ್ಯಾಚರಣೆ ಅರ್ಧ ಗಂಟೆ ವಿಳಂಬ ವಾಗಿದ್ದರೂ ಬೆಂಕಿ ಕೆನ್ನಾಲಿಗೆ ಬೆಟ್ಟಕ್ಕೆ ವ್ಯಾಪಿಸಿ ಅಪಾರ ಪ್ರಮಾಣದ ವನ್ಯಸಂಪತ್ತು ನಾಶ ವಾಗುತ್ತಿತ್ತು. ಉತ್ತನಹಳ್ಳಿ ರಸ್ತೆ ತಿರುವಿನಲ್ಲಿ ರುವ ಕಡಿದಾದ ಗುಡ್ಡಕ್ಕೆ ಅಲ್ಪ ಹಾನಿಯಾ ಗಿದೆ. ಅದನ್ನು ಹೊರತುಪಡಿಸಿದರೆ ಬೆಟ್ಟದ ಸಸ್ಯ ಸಂಪತ್ತಿಗೆ ಯಾವುದೇ ಹಾನಿಯಾಗಿಲ್ಲ.

Translate »