ಕೊರೊನಾ ಇಲ್ಲದಿದ್ದರೆ ಎಲ್ಲಾ 23 ಸ್ಥಾನ ಬಿಜೆಪಿ ಪಾಲಾಗುತ್ತಿತ್ತು
ಕೊಡಗು

ಕೊರೊನಾ ಇಲ್ಲದಿದ್ದರೆ ಎಲ್ಲಾ 23 ಸ್ಥಾನ ಬಿಜೆಪಿ ಪಾಲಾಗುತ್ತಿತ್ತು

May 1, 2021

ಮಡಿಕೇರಿ, ಏ.30- ಕೊರೊನಾ ಸೋಂಕು ಇಲ್ಲವಾಗಿದ್ದಲ್ಲಿ ನಗರ ಸಭೆಯ ಎಲ್ಲಾ 23 ವಾರ್ಡ್‍ಗಳನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿತ್ತು ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ ವ್ಯಕ್ತಪಡಿ ಸಿದ್ದಾರೆ. ನಗರದ ಸಂತ ಜೋಸೆಫರ ಶಾಲಾ ಆವರಣದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಗೆಲುವು ಸಾಧಿಸಿದ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಶುಭ ಕೋರಿದರು. ಪರಾಜಿತರಾದ ಅಭ್ಯರ್ಥಿ ಗಳಿಗೂ ಧೈರ್ಯ ತುಂಬಿದ ಮುಖಂಡರು ಧೃತಿ ಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಿ ಕೊಳ್ಳುವಂತೆ ಕಿವಿ ಮಾತು ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್, ಪ್ರಧಾನಿ ಮೋದಿ, ಮುಖ್ಯ ಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರುಗಳ ಕಾರ್ಯಕ್ಷಮತೆ, ಉಸ್ತುವಾರಿ ಸಚಿವರ ಸಹಕಾರ ಹಾಗೂ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಮಡಿಕೇರಿ ನಗರಸಭೆಯಲ್ಲಿ 16 ಸ್ಥಾನ ಗಳನ್ನು ಪಡೆದುಕೊಂಡಿದೆ ಎಂದರು. ಕೊರೊನಾ ಹಿನ್ನಲೆಯಲ್ಲಿ ಈ ಬಾರಿ ಶೇಕಡವಾರು ಮತ ದಾನ ಕುಸಿತವಾಗಿದೆ. ಇಲ್ಲದಿದ್ದಲ್ಲಿ ಎಲ್ಲಾ ಸ್ಥಾನ ಗಳನ್ನು ಬಿಜೆಪಿ ಪಡೆದುಕೊಳ್ಳುತ್ತಿತ್ತು ಎಂದು ಅಭಿಪ್ರಾಯಪಟ್ಟ ಅವರು, ನಗರದ ಎಲ್ಲಾ ಜನತೆಗೂ ಮತ್ತು ಮತದಾರರಿಗೂ ಅಭಿನಂದನೆ ಸಲ್ಲಿಸಿದರು. ಮಡಿ ಕೇರಿ ನಗರದ ಎಲ್ಲಾ ಕೆಲಸ ಕಾರ್ಯ ಗಳನ್ನೂ ಕೂಡ ಪ್ರಾಮಾ ಣಿಕವಾಗಿ ಮಾಡಲಾಗುತ್ತದೆ. ಗೆದ್ದಿರುವ ಮತ್ತು ಸೋತಿರುವ ಎಲ್ಲಾ ಅಭ್ಯರ್ಥಿಗಳೂ ಮತ ದಾರರ ಮನೆ ಮನೆಗೆ ತೆರಳಿ ಧನ್ಯವಾದ ಸಲ್ಲಿಸಬೇಕು ಎಂದು ಕಿವಿ ಸಲಹೆ ನೀಡಿದರು.
ನಗರ ಸಭೆಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಅವರ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿರಲಿಲ್ಲ. ಹೀಗಾಗಿ ಮತದಾರರು ಮಾಜಿಗಳನ್ನು ತಿರಸ್ಕರಿಸಿದ್ದಾರೆ ಎಂದು ಅಪ್ಪಚ್ಚು ರಂಜನ್ ಅನಿಸಿಕೆ ವ್ಯಕ್ತಪಡಿಸಿ ದರು. ಬಿಜೆಪಿಯ ಎಲ್ಲಾ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ಜನರ ನಂಬಿಕೆಯಿಂದ ಪಕ್ಷದ ಹಲವು ಮಂದಿ ಮಾಜಿ ಸದಸ್ಯರು ಗೆಲುವು ಸಾಧಿಸಿದ್ದಾರೆ. ನಗರದ ಅಭಿವೃದ್ದಿಯ ಎಲ್ಲಾ ಕೆಲಸ ಗಳನ್ನು ಒಗ್ಗಟ್ಟಿನಿಂದ ಮಾಡುವುದಾಗಿ ರಂಜನ್ ಭರವಸೆ ನೀಡಿದರು.

ಋಣ ತೀರಿಸುತ್ತೇವೆ: ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ನಗರದ ಮತದಾರರು ಬಿಜೆಪಿ ಯನ್ನು ಬೆಂಬಲಿಸಿದ್ದು, ಮತದಾರರನ್ನು ಅಭಿನಂದಿಸುವುದಾಗಿ ಹೇಳಿದರು. ಜನತೆ ಬಿಜೆಪಿಗೆ ದೊಡ್ಡ ಜವಾಬ್ದಾರಿಯನ್ನೂ ನೀಡಿದ್ದಾರೆ. ಗೆದ್ದ ಅಭ್ಯರ್ಥಿಗಳು ಅದಕ್ಕೆ ಸ್ಪಂದಿ ಸುವ ಕೆಲಸ ಮಾಡಬೇಕು. ಉತ್ತಮ ಆಡ ಳಿತ ನೀಡುವ ಮೂಲಕ ಜನರ ಋಣ ತೀರಿ ಸುತ್ತೇವೆ ಎಂದು ಭರವಸೆ ನೀಡಿದರು.

ಡಬ್ಬಲ್ ಸಾಧನೆ: ನಗರಸಭೆ ಚುನಾ ವಣೆಯಲ್ಲಿ ಬಿಜೆಪಿ ಪಕ್ಷ ನಿರೀಕ್ಷೆಯಂತೆ ಅಭೂತಪೂರ್ವ ಜಯ ಸಾಧಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹರ್ಷ ವ್ಯಕ್ತಪಡಿಸಿದರು. ಪಕ್ಷದ ಎಲ್ಲಾ ಕಾರ್ಯಕರ್ತರ ದುಡಿಮೆಯ ಫಲವಾಗಿ 16 ಸೀಟ್‍ಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದ ಅವರು, ಇದು ಮಡಿಕೇರಿ ನಗರ ಸಭೆ ಇತಿಹಾಸದಲ್ಲೇ ಮೊದಲು ಎಂದು ಪಕ್ಷದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿಂದೆ ಕಾಂಗ್ರೆಸ್ 9 ಸ್ಥಾನ ಪಡೆದಿತ್ತು. ಈ ಬಾರಿ ಅದನ್ನು ಕೇವಲ 1 ಸ್ಥಾನಕ್ಕೆ ಇಳಿಸಿದ್ದೇವೆ. ಜೆಡಿಎಸ್ ಹೇಗಿತ್ತೋ ಹಾಗೇ 1 ಸ್ಥಾನದಲ್ಲಿದೆ. ಈ ಹಿಂದೆ 8 ಸ್ಥಾನದಲ್ಲಿದ್ದ ಬಿಜೆಪಿ ಈ ಬಾರಿ 16 ಸ್ಥಾನ ಪಡೆದು ಡಬ್ಬಲ್ ಸಾಧನೆ ತೋರಿದೆ ಎಂದು ಹೇಳಿದರು.

Translate »