ಸರ್ಕಾರಗಳಿಂದ ಶ್ರಮಿಕ ವರ್ಗದ ಕಡೆಗಣನೆ: ಸಿಐಟಿಯು ಆಕ್ರೋಶ
ಮೈಸೂರು

ಸರ್ಕಾರಗಳಿಂದ ಶ್ರಮಿಕ ವರ್ಗದ ಕಡೆಗಣನೆ: ಸಿಐಟಿಯು ಆಕ್ರೋಶ

October 28, 2018

ಮೈಸೂರು: ಆಳುವ ವರ್ಗಗಳು ಬಂಡವಾಳಶಾಹಿಗಳು ಹಾಗೂ ಭೂ ಮಾಲೀಕರ ಪರ ನಿಂತಿದ್ದು, ಶ್ರಮಿಕ ವರ್ಗಗಳನ್ನು ಕಡೆಗಣಿಸಿವೆ ಎಂದು ಸಿಐ ಟಿಯು ನಾಯಕರು ಆಕ್ರೋಶ ವ್ಯಕ್ತಪಡಿಸಿ ದರು. ಸಿಐಟಿಯು ಅಂಗ ಸಂಘಟನೆಯಾದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ 7ನೇ ರಾಜ್ಯ ಸಮ್ಮೇಳನ ಮೈಸೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ಇದರ ಅಂಗವಾಗಿ ಮೈಸೂ ರಿನ ಪುರಭವನದ ಆವರಣದಲ್ಲಿ ಶನಿ ವಾರ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಸಿಐಟಿಯು ನಾಯಕರು ಆಳುವ ಸರ್ಕಾರ ಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸಭೆ ಉದ್ಘಾಟಿಸಿದ ಸಿಐಟಿಯು ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ಜೆ.ಕೆ.ನಾಯರ್ ಮಾತ ನಾಡಿ, ಸರ್ಕಾರದ ಕೆಲಸ ಮಾಡುತ್ತಿದ್ದರೂ ಸರ್ಕಾರಿ ನೌಕರರು ಎಂದು ಪರಿಗಣಿಸದ ಸ್ಥಿತಿಯನ್ನು ನಮ್ಮ ಸರ್ಕಾರಗಳು ಸೃಷ್ಟಿಸಿವೆ. ಗ್ರಾಮ ಪಂಚಾಯಿತಿ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸದೇ ದುಡಿಯುವ ವರ್ಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಸರ್ಕಾ ರದ ಅಧೀನದಲ್ಲಿ ಬರುವ 7ನೇ ವೇತನ ಆಯೋಗವೇ ಕನಿಷ್ಠ ವೇತನ 18 ಸಾವಿರ ರೂ. ಇರಬೇಕು ಎಂದಿದ್ದರೂ ಅದು ಜಾರಿಯಾಗಿಲ್ಲ. ಸುಪ್ರೀಂ ಕೋರ್ಟ್ ಸಹ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದರೂ ಸರ್ಕಾರ ಗಳು ಅನುಷ್ಠಾನಕ್ಕೆ ಮುಂದಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಐಎಂಎಫ್ ನಿಯಂತ್ರಣದಲ್ಲಿ ಸರ್ಕಾರಗಳು: ಸರ್ಕಾರಗಳ ಕಾರ್ಮಿಕ ವಿರೋಧಿ ಧೋರಣೆ ಹಿಂದೆ ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ) ಪಾತ್ರವಿದೆ. ಇದರ ನಿಯಂತ್ರಣದಲ್ಲಿ ನಡೆಯುವ ಸರ್ಕಾರ ಗಳಿಗೆ ಕಾರ್ಮಿಕರ ಹಿತಕಾಯುವ ಉದ್ದೇಶ ಇಲ್ಲವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೇರಿದಂತೆ ನಮ್ಮನ್ನು ಆಳುವವರು ಐಎಂಎಫ್ ನಿಯಂತ್ರಣದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಐಎಂಎಫ್ ನೀಡುವ ಸಾಲ ಕ್ಕಾಗಿ ಅದರ ಆಣತಿಯಂತೆ ನಮ್ಮ ಸರ್ಕಾರ ಗಳು ಕುಣಿಯುತ್ತಿವೆ ಎಂದು ಕಿಡಿಕಾರಿದರು.

ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಕಾರ್ಮಿ ಕರು ಹಾಗೂ ರೈತರ ಬದುಕು ಅನೇಕ ಸವಾಲುಗಳನ್ನು ಎದುರಿಸುವಂತಾಗಿದೆ. ನಿರುದ್ಯೋಗ, ಹೊರಗುತ್ತಿಗೆ ಪದ್ಧತಿ, ಕಡಿಮೆ ವೇತನ ಎಂಬುದು ಕಾರ್ಮಿಕರ ಬದು ಕನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ದೇಶದಲ್ಲಿ 100ಕ್ಕೆ 65 ಕುಟುಂಬಗಳು ಕೇವಲ 10 ಸಾವಿರ ರೂ. ವೇತನದಲ್ಲಿ ಬದುಕು ಮಾಡು ವಂತಹ ಪರಿಸ್ಥಿತಿ ಇದೆ. ಶ್ರೀಸಾಮಾನ್ಯ ನನ್ನು ಇಂತಹ ದುಸ್ಥಿತಿಗೆ ಸರ್ಕಾರಗಳು ತಂದು ನಿಲ್ಲಿಸಿವೆ ಎಂದು ಕಿಡಿಕಾರಿದರು.

ಮೋದಿ ಗದಾಪ್ರಹಾರ: ಕೇವಲ ಶೇ.1 ರಷ್ಟು ಮಂದಿಯಲ್ಲಿ ದೇಶದ ಶೇ.73ರಷ್ಟು ಸಂಪತ್ತು ಇದೆ. ಮೋದಿ ಸರ್ಕಾರ ನಾಲ್ಕೂ ವರೆ ವರ್ಷಗಳ ಆಡಳಿತಾವಧಿಯಲ್ಲಿ ಶ್ರೀಮಂ ತರ ಆಸ್ತಿಪಾಸ್ತಿಯನ್ನು ಶೇ.30ರಷ್ಟು ಹೆಚ್ಚಳ ವಾಗುವಂತೆ ಮಾಡಿದೆ. ದೇಶದ ಸಂಪತ್ತು ಕೆಲವೇ ಮಂದಿಯಲ್ಲಿ ಕೇಂದ್ರೀಕೃತ ಗೊಂಡ ಪರಿಣಾಮ ಇಂದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಉದ್ಯಮಿಗಳ ತೆರಿಗೆ ಕಡಿಮೆ ಮಾಡಿರುವ ಮೋದಿ ಸರ್ಕಾರ, ಕಾರ್ಮಿಕ ಪರವಾದ 40 ಕಾನೂನುಗಳನ್ನು 4ಕ್ಕೆ ಇಳಿ ಸಿದೆ. ಆ ಮೂಲಕ ಕಾರ್ಮಿಕರ ಸಂಘಟನೆ ಗಳ ಮೇಲೆ ಗದಾಪ್ರಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಟಕವಾಡಿತು ಸಿದ್ದು ಸರ್ಕಾರ: ಕನಿಷ್ಠ ಕೂಲಿ ಕೇಳುತ್ತಾರೆಂಬ ಕಾರಣಕ್ಕೆ ಈ ಸಂಬಂಧ ಕಾನೂನು ಮಾರ್ಪಾಡು ಮಾಡಲು ಕೇಂದ್ರ ಸರ್ಕಾರ ಕೈ ಹಾಕಿದೆ. ಗ್ರಾಪಂ ನೌಕರರ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಳೆದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಟಕ ವಾಡುತ್ತಲೇ ಕಾಲದೂಡಿತು. ಗ್ರಾಪಂ ನೌಕ ರರಿಗೆ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಸಿಐಟಿಯು ಹೋರಾಟದ ಫಲವಾಗಿ 820 ಕೋಟಿ ರೂ. ಬಿಡುಗಡೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತು. ಆದರೆ ಈ ಪೈಕಿ ಇಂದು 520 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಬೃಹತ್ ಮೆರವಣಿಗೆ: ಇದಕ್ಕೂ ಮುನ್ನ ಮೈಸೂರಿನ ಜಿಲ್ಲಾ ಸ್ವಾತಂತ್ರ್ಯ ಹೋರಾಟ ಗಾರರ ಉದ್ಯಾನವನದಿಂದ ಬೃಹತ್ ಮೆರವ ಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯು ನಾರಾಯಣಶಾಸ್ತ್ರಿ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧೀ ಚೌಕದ ಮೂಲಕ ಪುರಭವನ ತಲುಪಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿ ರಾರು ಗ್ರಾಪಂ ನೌಕರರು ಮೆರವಣಿಗೆ ಯಲ್ಲಿ ಪಾಲ್ಗೊಂಡಿದ್ದರು. ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವಿ.ಪಿ.ಕುಲಕರ್ಣಿ, ಅರಳಿ ಹಳ್ಳಿ ಗೋಪಾಲಕೃಷ್ಣ, ಪ್ರಧಾನ ಕಾರ್ಯ ದರ್ಶಿ ನಾಡಗೌಡ ಮಂಟನಗೌಡ, ಜಿಲ್ಲಾ ಧ್ಯಕ್ಷ ಕೆ.ಬಸವರಾಜು ಸೇರಿದಂತೆ ಮತ್ತಿತ ರರು ಹಾಜರಿದ್ದರು.

Translate »