ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ `ಕಥೆ-ಚಿಂತನ-ಮಂಥನ’ ಬಿಡುಗಡೆ
ಮೈಸೂರು

ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ `ಕಥೆ-ಚಿಂತನ-ಮಂಥನ’ ಬಿಡುಗಡೆ

October 28, 2018

ಮೈಸೂರು: ಲೇಖಕ ಹೆಚ್.ಎಸ್. ಲಕ್ಷ್ಮೇಗೌಡ ರಚಿತ `ಕಥೆ-ಚಿಂತನ-ಮಂಥನ’ ಪುಸ್ತಕ ವನ್ನು ಕವಯಿತ್ರಿ ಡಾ.ಲತಾರಾಜಶೇಖರ್ ಅವರು, ಬಿಡುಗಡೆಗೊಳಿಸಿದರು. ಕಲಾಮಂದಿರ ಆವರಣದ ಮನೆಯಂಗಳದಲ್ಲಿ ಮೈಸೂರಿನ ವಿನಯ ಪ್ರಕಾಶನ, ಕನ್ನಡ ಸಾಹಿತ್ಯ ಕಲಾ ಕೂಟ ಹಾಗೂ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಸಹಯೋಗ ದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಹೆಚ್.ಎಸ್. ಲಕ್ಷ್ಮೇಗೌಡ ರಚಿತ `ಕಥೆ-ಚಿಂತನ-ಮಂಥನ’ ಪುಸ್ತಕವನ್ನು ಬಿಡುಗಡೆಗೊಳಿಸಿ, ಮಾತನಾಡಿದರು.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತುಂಬು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಲೇಖಕ ಹೆಚ್.ಎಸ್.ಲಕ್ಷ್ಮೇಗೌಡರ ಅವಿಭಕ್ತ ಕುಟುಂಬ ನೋಡಿದರೆ, ನನಗೆ ತುಂಬಾ ಸಂತೋಷವಾಗು ತ್ತಿದೆ. ಇವರು ಸರ್ಕಾರಿ ಸೇವೆಯಿಂದ ನಿವೃತ್ತರಾದ ಮೇಲೆ ನಿವೃತ್ತಿ ಜೀವನವನ್ನು ಬರವಣಿಗೆಯಲ್ಲಿ ತಲ್ಲೀನ ರಾಗಿರುವುದು ಉತ್ತಮ ಬೆಳವಣಿಗೆ ಎಂದರು.

ಪ್ರತಿ ವರ್ಷದ ಯುವ ದಸರಾವನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಯುವಕರು ಕಿಷ್ಕಿಂಧೆಯಲ್ಲಿ ನಿಂತು ವೀಕ್ಷಣೆ ಮಾಡುತ್ತಾರೆ. ಆದರೆ, ಸಾಹಿತ್ಯ ಕಾರ್ಯ ಕ್ರಮದಲ್ಲಿ ಮಾತ್ರ ಯುವಕರಿಗೆ ಆಸಕ್ತಿ ಕಡಿಮೆಯಾಗಿ ರುವುದು ಬೇಸರ ಸಂಗತಿ. ಆದ್ದರಿಂದ ಯುವಕರು, ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡರೆ, ಉತ್ತಮ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ ಎಂದರು.

ಇತ್ತೀಚೆಗೆ ಫೇಸ್‍ಬುಕ್, ವಾಟ್ಸಾಪ್ ಹಾಗೂ ಇತರೆ ಸಮೂಹ ಮಾಧ್ಯಮಗಳಲ್ಲಿ ಕವಿತೆ, ಸಣ್ಣ ಕಥೆಗಳು ಹಾಗೂ ಹಾಸ್ಯ ತುಣುಕು ಹೆಚ್ಚಾಗಿ ಬರುತ್ತಿವೆ. ಇಂತಹ ಬರಹಗಳು ಜನಮಾನಸದಲ್ಲಿ ಹೆಚ್ಚು ದಿನ ಉಳಿಯು ವುದಿಲ್ಲ. ಆದ್ದರಿಂದ ಓದುಗರು ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಸಲಹೆ ನೀಡಿದರು.

ಕಥೆ-ಚಿಂತನ-ಮಂಥನ ಪುಸ್ತಕಕ್ಕೆ ಮುನ್ನುಡಿ ಬರೆ ದಿರುವ ಹಿರಿಯ ಸಾಹಿತಿ ಡಾ. ಮಳಲಿ ವಸಂತ ಕುಮಾರ್ ಹೀಗೆ ಹೇಳಿದ್ದಾರೆ. ಪ್ರಸ್ತುತ ಲಕ್ಷೇಗೌಡರ ಚಿಂತನ-ಮಂಥನ ಪುಸ್ತಕದಲ್ಲಿ ಲೋಕಜ್ಞಾನ ಖಜಾನೆ ಯಿದ್ದಂತೆ ಮತ್ತು ವಾಸ್ತವಾಂಶಗಳ ಹೂರಣ. ಇದರಲ್ಲಿ ಜೀವನದ ಸಕಲ ಸ್ತರಗಳ ಅರಿವಿನ ಸಂಸ್ಪರ್ಶವಿದೆ. ನೋಡಿದರೆ, ಎಲ್ಲವೂ ಪುಟ್ಟ ಲೇಖನಗಳು, ಆದರೆ, ಓದುಗರಿಗೆ ಬೇಕಾದ ಅನೇಕ ಅಂಶಗಳು ಈ ಪುಸ್ತಕ ದಲ್ಲಿದೆ ಎಂದರು.ಈ ಪುಸ್ತಕ ಪುಟ್ಟ ಲೇಖನಗಳಿಂದ ಕೂಡಿದ್ದರೂ ಒಂದು ಕೊಡದಲ್ಲಿ ಶುದ್ಧ ಕುಡಿಯುವ ನೀರು ಶೇಖರಿಸಿದ್ದಂತೆ, ಲಕ್ಷ್ಮೇಗೌಡರು, ತಮ್ಮ ಅಪಾರ ಲೋಕಾನುಭವವನ್ನು ಇದರಲ್ಲಿ ಕೂಡಿಟ್ಟು ಓದುಗರಿಗೆ ನೀಡಿದ್ದಾರೆ. ಕುಲುಮೆಯಲ್ಲಿ ಕಾದ ಕಬ್ಬಿಣವನ್ನು ಬಡಿ ಯುವಾಗ ಬೆಂಕಿಯ ಕಿಡಿಗಳು ಚಿಮ್ಮಿದಂತೆ, ಈ ಪುಸ್ತಕದಲ್ಲಿ ಬಂಗಾರ ಜ್ಞಾನದ ಕಿಡಿಗಳಿಗೆ ಸಮಾನದ ಅನುಭವ ಅಡಕವಾಗಿದೆ ಎಂದರು. ವೇದಿಕೆಯಲ್ಲಿ ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಹಿರಿಯ ಸಾಹಿತಿಗಳಾದ ಡಾ.ಸಿ.ಪಿ.ಕೃಷ್ಣಕುಮಾರ್,  ಡಾ.ಮಳಲಿ ವಸಂತ್‍ಕುಮಾರ್, ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷ ಹೆಚ್.ಎಲ್.ಯಮುನಾ, ಸಂವಹನ ಟ್ರಸ್ಟ್ ಅಧ್ಯಕ್ಷ ಡಿ.ಎನ್. ಲೋಕಪ್ಪ, ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರ ಶೇಖರ್, ಕೆ.ಆರ್.ಪೇಟೆ ತಾಲೂಕು ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಯುವ ಬರಹಗಾರ ಸತೀಶ್ ಜವರೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Translate »