ಮೈಸೂರು: ಮೈಸೂರು ಜಿಲ್ಲಾ ವ್ಯಾಪ್ತಿಯ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಇನ್ನಿತರ ತಾಂತ್ರಿಕ ಕೋರ್ಸುಗಳಲ್ಲಿ, ವಿವಿಧ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುª,À ಪೋಷಕರ ವಾರ್ಷಿಕ ವರಮಾನ 2.5 ಲಕ್ಷದೊಳಗಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ಹೊಸದಾಗಿ ನೋಂದಣಿ ಮಾಡಲು ಮತ್ತು ನವೀಕರಣ ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಿದೆ.
ಸರ್ಕಾರಿ/ಅನುದಾನಿತ/ಅನುದಾನ ರಹಿತ ವಿದ್ಯಾಸಂಸ್ಥೆಗಳು ಇಲಾಖಾ ವೆಬ್‍ಸೈಟ್ ನಲ್ಲಿ ಕಾಲೇಜುಗಳ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಾಗಿರುತ್ತದೆ ಹಾಗೂ ಈಗಾಗಲೇ ನೋಂದಣಿ ಮಾಡಿಕೊಂಡಿರುವ ವಿದ್ಯಾಸಂಸ್ಥೆಗಳಲ್ಲಿ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಿದಲ್ಲಿ ವೆಬ್‍ಸೈಟ್‍ಗೆ ಸೇರಿಸುವುದು ಅವಶ್ಯಕವಾಗಿರುತ್ತದೆ. ಆದ್ದರಿಂದ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರುಗಳು ಅಗತ್ಯ ಕ್ರಮಕೈಗೊಳ್ಳತಕ್ಕದ್ದು. ಹಾಗೂ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಅರ್ಜಿಗಳನ್ನು ಮಂಜೂ ರಾತಿಗಾಗಿ ಅ.31ರೊಳಗೆ ವೆಬ್‍ಸೈಟ್ sw.kar.nic.in-SC Post Metric Scholarship ನಲ್ಲಿ ಆಯಾ ತಾಲೂಕುಗಳ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಕಛೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರವರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ, ಮೈಸೂರು, ಡಾ.ಬಾಬು ಜಗಜೀವನರಾಂ ಭವನದ ಕಟ್ಟಡ, ನಾರಾಯಣಸ್ವಾಮಿ ಬ್ಲಾಕ್, ಆದಿಪಂಪಾ ರಸ್ತೆ, ಒಂಟಿಕೊಪ್ಪಲು ಪೂರ್ವ ಬಡಾವಣೆ ಮೈಸೂರು-10, ದೂರವಾಣಿ ಸಂಖ್ಯೆ: 0821-2344661 ಅನ್ನು ಸಂಪರ್ಕಿಸಬಹುದಾಗಿದೆ.