ಹಂಪ ನಾಗರಾಜಯ್ಯರಿಗೆ ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ,  ಡಾ.ಆರ್.ಬಾಲಸುಬ್ರಹ್ಮಣ್ಯಂರಿಗೆ ಡಾ. ಮತ್ತೂರು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ
ಮೈಸೂರು

ಹಂಪ ನಾಗರಾಜಯ್ಯರಿಗೆ ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ, ಡಾ.ಆರ್.ಬಾಲಸುಬ್ರಹ್ಮಣ್ಯಂರಿಗೆ ಡಾ. ಮತ್ತೂರು ಕೃಷ್ಣಮೂರ್ತಿ ಪ್ರಶಸ್ತಿ ಪ್ರದಾನ

October 28, 2018

ಮೈಸೂರು:  ಕುವೆಂಪು ನಗರದ ಗಾನಭಾರತಿ ವೀಣೆ ಶೇಷಣ್ಣ ಭವನ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಸ್ಕøತಿ ಹಾಗೂ ಸಮಾಜ ಸೇವೆಯಲ್ಲಿ ಅನುಪಮಸೇವೆಗೈದ ಇಬ್ಬರು ಮಹ ನೀಯರಿಗೆ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಮತ್ತು `ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ಆಯೋ ಜಿಸಿದ್ದ ದಶಮಾನೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು, ಹಿರಿಯ ಸಾಹಿತಿ ನಾಡೋಜ ಹಂ.ಪ.ನಾಗರಾಜಯ್ಯ ಅವರಿಗೆ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಹಾಗೂ ಸ್ವಾಮಿ ವಿವೇಕಾನಂದ ಯೂತ್‍ಮೂವ್ ಮೆಂಟ್‍ನ ಸಂಸ್ಥಾಪಕ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರಿಗೆ `ಪದ್ಮಶ್ರೀ ಡಾ.ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ’ ಪ್ರದಾನ ಮಾಡಿದರು.

ಹಿರಿಯ ಸಾಹಿತಿ ನಾಡೋಜ ಹಂ.ಪ. ನಾಗರಾಜಯ್ಯ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಮ್ಮ ಆತ್ಮವೇ ನಮಗೆ ಬೆಳಕು, ಅದು ನಂದಿಸಿ ಹೋಗದಂತೆ ನೋಡಿಕೊಳ್ಳ ಬೇಕು. ನಮ್ಮಿಂದ ಸಮಾಜ ಪರಿವರ್ತನೆಯಾ ಗುವ ಸಾಧ್ಯತೆಗಳಿವೆ. ಹಾಗಾಗಿ ನಮ್ಮಿಂ ದಲೇ ಪರಿವರ್ತನೆ ಆಗಬೇಕು. ಆದ್ದರಿಂದ, ನಾವು ಸವೆಸುವ ದಾರಿಯನ್ನು ಆತ್ಮಾವ ಲೋಕನ ಮಾಡಬೇಕು. ಏಕೆಂದರೆ, ಇಂದು ನಮಗೆ ಉಪಕಾರ, ಸಹಕಾರ ಮಾಡಿದವರನ್ನು ಮರೆ ಯುವ ಮನೋಭಾವ ಹೆಚ್ಚಾಗುತ್ತಿದೆ ಎಂದರು.

ಇದಕ್ಕೆ ಉದಾ: 1864ರಲ್ಲಿ ಅಮೆರಿಕಾ ಅಧ್ಯಕ್ಷರಾಗಿದ್ದ ಅಬ್ರಾಹಂ ಲಿಂಕನ್ ಅವರ ಪುತ್ರ ರಾಬರ್ಟ್, ರೈಲು ನಿಲ್ದಾಣದಲ್ಲಿ ಆಯ ತಪ್ಪಿ ಹಳಿ ಮೇಲೆ ಬಿದ್ದಾಗ ಮತ್ತೋರ್ವ ವ್ಯಕ್ತಿ ಬಂದು ಮೇಲೆ ಎತ್ತುತ್ತಾನೆ. ಆಗ ರಾಬರ್ಟ್, ಕೃತಜ್ಞತೆ ಹೇಳಲು ಹೋದಾಗ ಅವರೊಬ್ಬ ದೊಡ್ಡ ನಟರಾಗಿರುತ್ತಾರೆ. ಆದರೆ, ಅಬ್ರಾಹಂ ಲಿಂಕನ್ ಪುತ್ರನ ಜೀವ ಉಳಿಸಿದ ದೊಡ್ಡ ನಟನ ಸಹೋದರ ನೊಬ್ಬ ಯಾವುದೋ ವಿಷಯಕ್ಕೆ ಅಬ್ರಾಹಂ ಮೇಲೆ ಗುಂಡು ಹಾರಿಸಿ ಕೊಲ್ಲುತ್ತಾನೆ. ಆಗಿನಿಂದ ದೊಡ್ಡ ನಟ ನೆಂದು ಗುರುತಿಸಿದ್ದ ಅದೇ ಜನರು ಅಮೆರಿಕಾ ಅಧ್ಯಕ್ಷ ಅಬ್ರಾಹಂ ಲಿಂಕನ್ ನನ್ನು ಕೊಲೆ ಗೈದವನ ಅಣ್ಣ ಎಂದು ಗುರುತಿಸಲು ಆರಂ ಭಿಸುತ್ತಾರೆ. ಸಾಧನೆಯಿಂದ ಗುರುತಿಸ ಬೇಕಾದ ವ್ಯಕ್ತಿಯನ್ನು ದುರಂತಕ್ಕೆ ಕಾರಣ ನಾದ ವ್ಯಕ್ತಿಯ ಮೂಲಕ ಗುರುತಿಸುವುದು ಹೆಚ್ಚಾಗಿದೆ ಎಂದು ವಿಷಾದಿಸಿದರು.

ಬದುಕಿನ ಪಾಠದಿಂದ ಹಲವು ವಿಚಾರ ಗಳು ತಿಳಿಯುತ್ತದೆ. ವಿದ್ಯೆ ಅಖಂಡವಾದದ್ದು, ಅದನ್ನು ನಾವು 4 ಮೂಲಗಳಿಂದ ಸಂಪಾದಿ ಸುತ್ತೇವೆ. ಒಂದೆಡೆ ಗುರುಗಳಿಂದ ಕಲಿಯುವ ವಿದ್ಯೆಯಾದರೆ, ಸ್ವ-ಬುದ್ಧಿಯಿಂದ ಕಲಿ ಯುವ ಜ್ಞಾನ ಮತ್ತೊಂದೆಡೆ ಇರುತ್ತದೆ. ಆದರೆ, ಸಮಾಜ ಹಾಗೂ ಬದುಕು ಕಲಿ ಸುವ ಪಾಠ ಎಲ್ಲದಕ್ಕಿಂತ ದೊಡ್ಡದು. ಈ 4 ರೀತಿಯ ವಿದ್ಯೆಗಳು ಮನುಷ್ಯನನ್ನು ಪರಿ ಪೂರ್ಣನನ್ನಾಗಿಸುತ್ತವೆ ಎಂದು ಹೇಳಿದರು.

ವಿವೇಕ ಇಲ್ಲದವನು ಸಾಂಬಾರ್‍ನಲ್ಲಿರುವ ಸೌಟಿನಂತೆ: ವಿವೇಕ ಇಲ್ಲದವನು ಸಾಂಬಾರ್ ನಲ್ಲಿರುವ ಸೌಟಿನಂತೆ. ಸಾಂಬಾರ್‍ನ ರುಚಿ ನಾಲಗೆಗೆ ಗೊತ್ತಿರುತ್ತದೆ. ಆದರೆ, ಸೌಟಿಗೆ ಗೊತ್ತಿರುವುದಿಲ್ಲ. ಹಾಗೆಯೇ ನಾವು ಎಷ್ಟೇ ಓದಿದರೂ, ಎಂಎ, ಪಿಹೆಚ್‍ಡಿ, ನಾಡೋಜ, ಪದ್ಮಶ್ರೀ ಪ್ರಶಸ್ತಿ ಏನೇ ಪಡೆದರೂ ವಿವೇಕ ಇಲ್ಲದಿದ್ದರೆ ಓದು ವ್ಯರ್ಥವಾಗುತ್ತದೆ. ಬರ ವಣಿಗೆಗಿಂತ ಬಹಳ ದೊಡ್ಡದು ಬದುಕು ಎಂದರು. ಒಮ್ಮೆ ಆಶ್ರಮದ ವಿದ್ಯಾರ್ಥಿ ಯೋರ್ವ ಬೆಳಕು ಎಲ್ಲಿಂದ ಬರುತ್ತದೆಂದು ಗುರುಗಳನ್ನು ಪ್ರಶ್ನಿಸುತ್ತಾನೆ. ಆಗ ಗುರು ಗಳು ಸೂರ್ಯನಿಂದ ಎಂದು ಹೇಳುತ್ತಾರೆ. ಸೂರ್ಯ ಇಲ್ಲದಿದ್ದಾಗ ಹೇಗೆ ಬರುತ್ತದೆ. ಆಗ ಗುರುಗಳು ಚಂದ್ರ, ಅವನೂ ಇಲ್ಲ ದಾಗ ನಕ್ಷತ್ರ, ಅಗ್ನಿ ಎಂದು ವಿವರಿಸುತ್ತಾರೆ. ಅಗ್ನಿ ಇಲ್ಲದಾಗ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸುತ್ತಾನೆ. ಆಗ ಗುರುಗಳು ಆತ್ಮದಿಂದ ಬೆಳಕು ಬರುತ್ತದೆ. ಅದನ್ನು ಅರ್ಥ ಮಾಡಿ ಕೊಂಡು ನಡೆದಾಗ ಉತ್ತಮ ಬದುಕು ಕಟ್ಟಿ ಕೊಳ್ಳಲು ಸಾಧ್ಯ ಎಂದು ಹೇಳುತ್ತಾರೆ.

ಹಾಗಾಗಿ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಗುರುಗಳ ಸ್ಮರಣೆ: ಕಲ್ಲು ಮೂರ್ತಿ ಯಾದರೆ ಎಲ್ಲರೂ ಗೌರವಿಸುತ್ತಾರೆ. ಆದರೆ, ಮೆಟ್ಟಿಲಾದರೆ ಚಪ್ಪಲಿಯಲ್ಲಿ ಹತ್ತುತ್ತಾರೆ. ಆದರೆ, ನಾನು ಮೂರ್ತಿಯಾಗಬೇಕೋ ಅಥವಾ ಮೆಟ್ಟಿಲಾಗಬೇಕೋ ಎಂದು ಯೋಚಿ ಸುತ್ತಿದ್ದಾಗ ನಮ್ಮ ಗುರುಗಳು ಹಚ್ಚಿದ ಹಣತೆ ಬೆಳಕು ನನ್ನನ್ನು ಈ ಮಟ್ಟಕ್ಕೆ ತೆಗೆದುಕೊಂಡು ಬರಲು ಸಾಧ್ಯವಾಯಿತು ಎಂದು ಗುರು ಗಳನ್ನು ಸ್ಮರಿಸಿದ ಅವರು, ತಾವು ನಡೆದು ಬಂದ ದಾರಿ, ವಿದೇಶಿ ಪ್ರವಾಸದ ಅನು ಭವಗಳನ್ನು ಹಂಚಿಕೊಡರು.

ನಂತರ ಸಾಹಿತಿಗಳು ಹಾಗೂ ಸಂಶೋಧಕ ರಾದ ಡಾ.ಎನ್.ಎಸ್.ತಾರಾನಾಥ್ ಮತ್ತು ಗ್ರಾಮ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆರ್.ಬಸವ ರಾಜು ಅವರು ಪುರಸ್ಕøತರನ್ನು ಕುರಿತು ಮಾತ ನಾಡಿದರು. ಟ್ರಸ್ಟ್‍ನ ಮೀನಾ ಅವರು ಪ್ರಾಸ್ತ್ತಾ ವಿಕ ನುಡಿಗಳನ್ನಾಡಿದರು. ಇದೇ ಸಂದರ್ಭ ದಲ್ಲಿ ಹಿರಿಯ ವಿದ್ವಾಂಸರಾದ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರು `ಸುಮನಾಂ ಜಲಿ ಕೃತಿ ಬಿಡುಗಡೆಗೊಳಿಸಿದರು. ನಂತರ ಅನಾಥ ಶವಗಳಿಗೆ ಸತ್ಕಾರ್ಯ ನೆರವೇರಿಸು ತ್ತಿರುವ ಅಯೂಬ್ ಹಮೀದ್ ಜೀ ಅವ ರನ್ನು ಸನ್ಮಾನಿಸಲಾಯಿತು. ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಸುಂದರ್‍ರಾಜ್, ವೇದಾಂತ ವಿದ್ವಾಂಸ ಮದ್ದೂರು ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Translate »