ಅರಸೀಕೆರೆ: ಪೋಷಕರು ಶಾಲಾ-ಕಾಲೇಜಿಗೆ ಮಕ್ಕಳನ್ನು ಸೇರಿಸಿದರಷ್ಟೇ ಸಾಲದು, ತಿಂಗಳಿಗೊಮ್ಮೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಚಟುವಟಿಕೆ, ವ್ಯಾಸಂಗದ ವೈಖರಿ ಮತ್ತು ಶೈಕ್ಷಣಿಕ ಪ್ರಗತಿಯನ್ನು ಅರಿಯುತ್ತಿರಬೇಕು ಎಂದು ಆದಿಚುಂಚನ ಗಿರಿ ಮಹಾಸಂಸ್ಥಾನದ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹಿತವಚನ ನೀಡಿದರು.
ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಶ್ರೀ ಆದಿಚುಂಚನಗಿರಿ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ವರ್ಷಾರಂಭದಲ್ಲಿ ಶಿಕ್ಷಕ ವೃಂದ ಎಷ್ಟೇ ಆಸಕ್ತಿ ವಹಿಸಿ ಬೋಧಿಸಿದರೂ ಪೋಷಕರು ಮಕ್ಕಳ ಪ್ರಗತಿ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ ಎಂದರು.
ಪಿಯುಸಿ ವಿದ್ಯಾರ್ಥಿಗಳ ವಯಸ್ಸು ಪ್ರಬುದ್ಧಗೊಳ್ಳುತ್ತಿ ರುವ ಸಮಯ. ಇಂಥ ವೇಳೆ ಮಕ್ಕಳು ತಮ್ಮ ಭವಿಷ್ಯ ವನ್ನು ರೂಪಿಸಿಕೊಳ್ಳಲು ಅಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಆ ಮೂಲಕ ಉನ್ನತ ವಿದ್ಯಾಭ್ಯಾಸಕ್ಕೂ ಅಡಿಪಾಯವನ್ನು ಭದ್ರವಾಗಿ ಹಾಕಿಕೊಳ್ಳಬೇಕು. ಸಾಮಾನ್ಯಜ್ಞಾನ ವೃದ್ಧಿಗೆ ನಿತ್ಯ ದಿನಪತ್ರಿಕೆ ಓದಬೇಕು. ಆ ಮೂಲಕ ದೇಶ-ವಿದೇಶದ ವಿದ್ಯಾಮಾನಗಳನ್ನು ಅರಿಯಬೇಕು. ಮಾರ್ಗದರ್ಶನ ನೀಡಲು ಅಧ್ಯಾಪಕರ ದೊಡ್ಡ ತಂಡವೇ ಇದೆ. ಅವರ ಮಾರ್ಗದರ್ಶನ ಪಡೆದು ಸಾಧನೆ ಮಾಡಬೇಕು ಎಂದು ಉತ್ತೇಜನದ ಮಾತನಾಡಿದರು.
ನಮ್ಮ ಸಂಸ್ಥೆಯಿಂದ ಬಡ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ. 15 ವರ್ಷಗಳಲ್ಲಿ 12.50 ಕೋಟಿ ರೂ. ಶುಲ್ಕ ವಿನಾಯಿತಿ ನೀಡಿ ಶಿಕ್ಷಣ ಒದಗಿಸಿ ದ್ದೇವೆ. ಆ ಮಕ್ಕಳೆಲ್ಲ ಈಗ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಆದರೆ, ಅವರೆಲ್ಲ ಕಲಿತ ಶಾಲೆಗೆ ಸಹಾಯ ಮಾಡುವ ಸಾಮಥ್ರ್ಯ ವಿದ್ದರೂ, ಕಷ್ಟದ ದಿನಗಳನ್ನು ಮರೆತಿದ್ದರೂ ಪರವಾಗಿಲ್ಲ. ಬೇರೆಯವರಿಗಾದರೂ ಕೈಲಾದಷ್ಟು ಉಪಕಾರ ಮಾಡಲಿ ಎಂಬ ಅಭಿಲಾಷೆ ನಮ್ಮ ಸಂಸ್ಥೆಯದು ಎಂದರು.
ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕ ಹೇಮಚಂದ್ರ ಉಪನ್ಯಾಸ ನೀಡಿದರು. ಕಾಲೇಜು ವಿದ್ಯಾಭ್ಯಾಸ ಕೇವಲ ವೈದ್ಯಕೀಯ, ಇಂಜಿನಿಯರ್ ಪದವಿ ಗಷ್ಟೇ ಸೀಮಿತವಾಗಿರಬಾರದು. ಕಷ್ಟಪಟ್ಟು ಓದಿ ಈಗ ಜಿಲ್ಲಾಧಿಕಾರಿ, ತಹಸೀಲ್ದಾರ್, ಡಿವೈಎಸ್‍ಪಿ ಸೇರಿದಂತೆ ವಿವಿಧ ಉನ್ನತ ಹುದ್ದೆಗಳಲ್ಲಿರುವವರು ಸಮಾಜಕ್ಕೆ ದಾರಿದೀಪವಾಗಬೇಕು. ಐಟಿ-ಬಿಟಿ ಕ್ಷೇತ್ರದÀಲ್ಲಿರುವವರಿಗೆ ಮುಖ್ಯಮಂತ್ರಿ, ಪ್ರಧಾನಿ, ರಕ್ಷಣಾ ಸಚಿವರ ಹೆಸರೇ ತಿಳಿದಿ ರುವುದಿಲ್ಲ. ಹಾಗಾಗಿ ಸಾಮಾನ್ಯ ಜ್ಞಾನದೊಂದಿಗಿನ ಗುಣ ಮಟ್ಟದ ಶಿಕ್ಷಣ ಪಡೆಯಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದವರೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಲ್ಲಾಧಿಕಾರಿಯಂತಹ ದೊಡ್ಡ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಕರ್ನಾಟಕದ ಮಕ್ಕಳೂ ಉನ್ನತ ಹುದ್ದೆಗಳನ್ನು ಅಲಂಕರಿಸುವ ದೃಢ ನಿರ್ಧಾರ ಹೊಂದಬೇಕು. ಸಮಾಜವನ್ನು ಬದಲಿಸುವ ಶಕ್ತಿ ಈ ಅಧಿಕಾರಿಗಳಿಗೆ ಇರುತ್ತದೆ ಎಂದು ಹೇಳಿದರು.
ಮುಖ್ಯವಾಗಿ ವಿದ್ಯಾರ್ಥಿಗಳು ಮೊಬೈಲ್ ಎಂಬ ಮಾಯಾ ಪ್ರಪಂಚದಿಂದ ಹೊರಬರಬೇಕು. ಗ್ರಾಮೀಣ ಮತ್ತು ನಗರದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಕೀಳರಿಮೆ ಬಿಡಬೇಕು ಎಂದರು.
ಸಿಇಟಿ ಮತ್ತು ಗಣಿತ ಪುಸ್ತಕ ಲೇಖಕ ಕೃಷ್ಣ ಚೈತನ್ಯ ಮಾತನಾಡಿದರು. ಇದೇ ವೇಳೆ, ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿನಿಯರಾದ ಸಹನಾ, ಹೀಮಾ, ಸಚೀತಾ, ಹರ್ಷಿತಾ, ಜೀವಿತ ಅವರನ್ನು ಸನ್ಮಾನಿಸ ಲಾಯಿತು. ಪ್ರಾಂಶುಪಾಲ ಲಿಂಗರಾಜು, ಮುಖ್ಯೋಪಾದ್ಯಾ ಯಿನಿ ಜ್ಞಾನೇಶ್ವರ, ಉಪನ್ಯಾಸಕ ಯೋಗಾನಂದ, ರಮೇಶ್, ಶಿಕ್ಷಕರಾದ ನಾಗೇಶ್, ಅಮೃತ, ದಿವ್ಯಶ್ರೀ, ಸೋಮಶೇಖರ್, ಸವಿತ, ಹರೀಶ್ ಮತ್ತಿತರರಿದ್ದರು.