‘ಪರಿಮಳ’ ಅನುವಾದ ಕವನ ಸಂಕಲನ ಬಿಡುಗಡೆ
ಮೈಸೂರು

‘ಪರಿಮಳ’ ಅನುವಾದ ಕವನ ಸಂಕಲನ ಬಿಡುಗಡೆ

March 3, 2020

ಮೈಸೂರು, ಮಾ.2(ಎಂಕೆ)- ನಗರದ ಕಲಾಮಂದಿರದ ಮನೆಯಂಗಳದಲ್ಲಿ ಭೂಮಿ ಗಿರಿ ಪ್ರಕಾಶನ, ಹಿರಿಮರಳಿ ಸಾಂಸ್ಕøತಿಕ ಸಿರಿ ಆಯೋಜಿಸಿದ್ದ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಲೇಖಕ ಡಾ.ವಿಜಯ್‍ನಾಗ್ ಅವರ ‘ಪರಿಮಳ’ ಅನುವಾದ ಕವನ ಸಂಕಲನವನ್ನು ವಿದ್ವಾಂಸ ಡಾ.ಕೆ.ಅನಂತರಾಮು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಕವಿತೆಯೇ ಸಾಹಿತ್ಯದ ಮೂಲ ಸ್ವರವಾಗಿದ್ದು, ಲೇಖಕ ಡಾ.ವಿಜಯ್‍ನಾಗ್ ಅತ್ಯುತ್ತಮ ಕವನ ಸಂಕಲನವನ್ನು ಸರಳವಾದ ಕನ್ನಡ ಭಾಷೆಯಲ್ಲಿ ಹೊರತಂದಿದ್ದಾರೆ. ನಿರಂತರ ಓದು ಮತ್ತು ಗ್ರಂಥಗಳ ನಡುವೆ ಒಡನಾಟವಿದ್ದರೆ ಮಾತ್ರ ಇಂತಹ ಕವನ ಸಂಕಲನಗಳನ್ನು ಬರೆಯಲು ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನುವಾದ ಕಠಿಣ ಕಾರ್ಯವಾಗಿದ್ದು, ಮೂಲ ಕವಿಯ ಚಿಂತನೆ, ಭಾವನೆಗಳಿಗೆ ಲೋಪವಾಗದಂತೆ ನೋಡಿಕೊಳ್ಳಬೇಕಾ ಗುತ್ತದೆ. ಅಂತಹ ಕಷ್ಟದ ಕೆಲಸವನ್ನು ಮಾಡುವಲ್ಲಿ ಲೇಖಕ ವಿಜಯ್‍ನಾಗ್ ಸಫಲರಾಗಿದ್ದಾರೆ ಎಂದು ಹೇಳಿದರು.

ಭಾಷಾಂತರವೂ ಒಂದು ಶಾಸ್ತ್ರವಿದ್ದಂತೆ. ಅನುವಾದಕನಿಗೆ ಭಾವೈಕ್ಯದ ದೃಷ್ಟಿ ಮತ್ತು ಸೃಷ್ಟಿ ಮಾಡುವ ಕೌಶಲ್ಯತೆ ಇರಬೇಕು. ಇದೊಂದು ಅನುಸೃಷ್ಟಿ ಕಾರ್ಯವಾಗಿದೆ. ಒಳ್ಳೆಯದು ಎಲ್ಲೆಲ್ಲಿ ದೊರಕುತ್ತದೆ ಎಲ್ಲ ವನ್ನು ಸ್ವೀಕರಿಸಬೇಕು ಎಂದು ಭಾರತೀಯ ಸನಾತನ ಸಂಸ್ಕøತಿ ಹೇಳುವಂತೆ ಲೇಖ ಕರು ಮಹಾನ್ ಕವಿಗಳ ಅಚ್ಚುಮೆಚ್ಚಿನ ಕವನಗಳನ್ನು ಕನ್ನಡಕ್ಕೆ ತಂದಿದ್ದಾರೆ ಎಂದರು.

ಸಾಹಿತಿ ಡಾ.ಮಳಲಿ ವಸಂತಕುಮಾರ್, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ವಿಶ್ವ ಮಾನವ ಕುವೆಂಪು ಕಲಾನಿಕೇತನ ಅಧ್ಯಕ್ಷ ಕುವೆಂಪು ಪ್ರಕಾಶ್, ಕವಿ ಹಿರಿ ಮರಳಿ ಧರ್ಮರಾಜು, ಪ್ರಕಾಶಕ ಎನ್.ಬೆಟ್ಟೇ ಗೌಡ, ಪೂರ್ಣಿಮಾ ಕಾರ್ಯಕ್ರಮದಲ್ಲಿದ್ದರು.

Translate »