ಸಿಎಫ್‍ಟಿಆರ್‍ಐ ಸಂಶೋಧನಾ ವಿದ್ಯಾರ್ಥಿ ಎಂ.ಎಲ್.ಭವ್ಯಗೆ ಬಹುಮಾನ
ಮೈಸೂರು

ಸಿಎಫ್‍ಟಿಆರ್‍ಐ ಸಂಶೋಧನಾ ವಿದ್ಯಾರ್ಥಿ ಎಂ.ಎಲ್.ಭವ್ಯಗೆ ಬಹುಮಾನ

March 3, 2020

ಮೈಸೂರು, ಮಾ.2- ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ ನಡೆಸುವ ರಾಷ್ಟ್ರಮಟ್ಟದ ವಿಜ್ಞಾನ ಬರವಣಿಗೆಯಲ್ಲಿ ಮೈಸೂರು ಸಿಎಫ್‍ಟಿಆರ್‍ಐನ ಸಂಶೋಧನಾ ವಿದ್ಯಾರ್ಥಿ ಎಂ.ಎಲ್.ಭವ್ಯ ಮೂರನೇ ಬಹುಮಾನ ಪಡೆದಿದ್ದಾರೆ.

ಸ್ಪರ್ಧೆಯಲ್ಲಿ ಭವ್ಯ ಅವರು ಬರೆದ ‘ಲೈಟ್, ಸೌಂಡ್ಸ್, ಆಕ್ಷನ್’ ಪ್ರಬಂಧಕ್ಕೆ ಮೂರನೇ ಸ್ಥಾನ ಲಭಿಸಿದ್ದು, 25 ಸಾವಿರ ರೂ.ನಗದು ಮತ್ತು ಪ್ರಶಸ್ತಿ ದೊರಕಿದೆ. ಫೆ.28ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಹರ್ಷವರ್ಧನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

Translate »