ಜಗದೀಶ್ ಹುಟ್ಟುಹಬ್ಬಕ್ಕೆ ಮಡದಿಯ ಒಲವಿನ ಓಲೆ
ಸಿನಿಮಾ

ಜಗದೀಶ್ ಹುಟ್ಟುಹಬ್ಬಕ್ಕೆ ಮಡದಿಯ ಒಲವಿನ ಓಲೆ

March 20, 2020

ಕಳೆದವಾರ ನವರಸ ನಾಯಕ ಜಗ್ಗೇಶ್ ಅವರ 57ನೇ ಹುಟ್ಟುಹಬ್ಬ. ಅವರು ಪ್ರತಿಬಾರಿ ತಮ್ಮ ಹುಟ್ಟುಹಬ್ಬವನ್ನು ಮಂತ್ರಾಲಯದಲ್ಲೇ ಆಚರಿಸಿಕೊಳ್ಳುವುದನ್ನು ಹಿಂದಿನಿಂದ ರೂಢಿಸಿಕೊಂಡು ಬಂದಿದ್ದಾರೆ. ಈ ಸಲವೂ ಜಗ್ಗೇಶ್ ಮತ್ತವರ ಕುಟುಂಬ ಮಂತ್ರಾಲಯ ಕ್ಷೇತ್ರಕ್ಕೆ ಭೇಟಿನೀಡಿ, ಗುರುರಾಯರ ಆಶೀರ್ವಾದ ಪಡೆದಿz್ದÁರೆ. ಈ ಬಗ್ಗೆ ಜಗ್ಗೇಶ್ ಅವರೇ ತಮ್ಮ ಟ್ವಿಟ್ಟರಿನಲ್ಲಿ ಫೋಟೋಗಳನ್ನು ಹಂಚಿಕೊಂಡಿz್ದÁರೆ. ಅಲ್ಲದೆ ನನ್ನ ಹುಟ್ಟುಹಬ್ಬದ ದಿನ ರಾಯರು ನಿದ್ರಿಸುತ್ತಿದ್ದ ಜಾಗದಲ್ಲಿ ಅವರ ಆ ದಿನ ನೆನೆದು ತP್ಷÀಣ ರೋಮಾಂಚನ ಎಂದು ಬರೆದು ಟ್ವೀಟ್ ಮಾಡಿz್ದÁರೆ.

ಇದೇ ಸಂದರ್ಭದಲ್ಲಿ ಜಗ್ಗೇಶ್ ತಮ್ಮ ಟ್ವಿಟ್ಟರಿನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಫೋಟೋವನ್ನು ಸಹ ಹಾಕಿ, ನಲ್ಮೆಯ ಸಹೋದರ ಪುನೀತ್‍ರಾಜಕುಮಾರ್‍ಗೆ ಹುಟ್ಟುಹಬ್ಬದ ಶುಭಾಶಯಗಳು. ಆರೋಗ್ಯ, ಯಶ ಪ್ರಾಪ್ತಿರಸ್ತು. ನೂರ್ಕಾಲ ಸುಖವಾಗಿ ಬಾಳಿ, ಶುಭ ಹಾರೈಕೆ ಎಂದು ಟ್ವೀಟ್ ಮಾಡಿz್ದÁರೆ.

ಇದೇ ಖುಷಿಯಲ್ಲಿ ತಮ್ಮ ಪತ್ನಿ ಪರಿಮಳಾ ಅವರು ತಾವು ಮದುವೆಯಾದ ಮೊದಲ ವರ್ಷ ಹೇಗೆ ತಮ್ಮ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು ಎನ್ನುವ ಸವಿನೆನಪನ್ನು ಸಹ ಅವರು ಹಂಚಿಕೊಂಡಿz್ದÁರೆ. ತಮ್ಮ ಮದುವೆಯಾದ ಮೊದಲವರ್ಷ ಪತ್ನಿ ಪರಿಮಳಾ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ತನ್ನ ಕೈಯಾರೆ ಮಾಡಿಕೊಟ್ಟಿದ್ದ ಗ್ರೀಟಿಂಗ್ ಕಾರ್ಡ್ ಫೋಟೋವನ್ನು ಜಗ್ಗೇಶ್ ರಿವೀಲ್ ಮಾಡಿz್ದÁರೆ. ಈ ಪ್ರೀತಿಯ ಓಲೆಗೆ 34ವರ್ಷ ವಯಸ್ಸು, ನಾವು ಮದುವೆಯಾದ ವರ್ಷ ನನ್ನ ಪತ್ನಿ ಮಾತ್ರ ನನ್ನ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಳು. ಆದರೆ, ಇಂದು ನನ್ನ ಪತ್ನಿ ಜೊತೆಗೆ ನನ್ನ ಅಭಿಮಾನಿಗಳು ಕೂಡ ನನ್ನ ಜನ್ಮದಿನಕ್ಕೆ ಶುಭ ಹಾರೈಸಿ ಆಶೀರ್ವದಿಸಿz್ದÁರೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿz್ದÁರೆ. ಈ ಪ್ರೀತಿ ಸಂಕೇತಕ್ಕೆ 34 ವರ್ಷ ವಯಸ್ಸು. ಅಂದು ಅವಳೊಬ್ಬಳೇ ಹರಸಿದ್ದಳು. ಇಂದು ಅವಳ ಪ್ರೀತಿ ಕೋಟಿ ಕೋಟಿ ಆತ್ಮಗಳಲ್ಲಿ ವಿಸ್ತಾರ ಮಾಡಿಬಿಟ್ಟರು ರಾಯರು. ಧನ್ಯೋಸ್ಮಿ ರಾಯರೆ. ಇಷ್ಟು ಆತ್ಮಗಳ ಪ್ರೀತಿಸಲು ದೇಣಿಗೆ ನೀಡಿದ್ದಕ್ಕೆ ಎಂದು ಬರೆದುಕೊಂಡಿದ್ದಾರೆ.

Translate »