ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಹಟ್ಟುಹಬ್ಬದ ವಿಶೇಷವಾಗಿ ಬರ್ತ್‍ಡೇ ಹಿಂದಿನ ದಿನವೇ ಬಿಡುಗಡೆಯಾದ ಯುವರತ್ನ ಚಿತ್ರದ ಡೈಲಾಗ್ ಟೀಸರ್‍ನಲ್ಲಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹೊರಹಾಕಲಾಗಿದೆ. ಈ ಡೈಲಾಗ್ ಟೀಸರ್ ಬಿಡುಗಡೆಯಾದ ಕೇವಲ 18 ಗಂಟೆಗಳಲ್ಲಿ ಒಂದೂವರೆ ಮಿಲಿಯನ್ ನಷ್ಟು ವ್ಯೂಸ್ ಪಡೆದುಕೊಂಡಿದೆ. ಈ ಟೀಸರ್‍ಗಾಗಿಯೇ ಕಾದು ಕುಳಿತಿದ್ದ ಪುನೀತ್ ಅಭಿಮಾನಿಗಳಿಗೆ ಟೀಸರ್‍ನಲ್ಲಿರುವ ಸಂಭಾಷಣೆಗಳು ಸಖತ್ ಕಿಕ್ ಕೊಟ್ಟಿರುವುದಂತೂ ನಿಜ. ರಿಲೀಸಾದ ಅಲ್ಪ ಸಮಯದಲ್ಲೇ ಈ ಡೈಲಾಗ್‍ಗಳು ಎಲ್ಲಾ ಕಡೆ ವೈರಲ್ ಆಗಿಹೋಗಿವೆ. ಪುನೀತ್ ಹುಟ್ಟುಹಬ್ಬಕ್ಕೆ ಇನ್ನಷ್ಟು ಕಳೆ ಬರಬೇ ಕೆಂದರೆ ಚಿತ್ರತಂಡದಿಂದ ಯಾವುದಾದರೂ ಹೊಸ ಸಂಗತಿ ಸಿಗಲೇಬೇಕು. ಯುವರತ್ನದ ಟೀಸರ್ ಅಥವಾ ಹಾಡು ಯಾವು ದಾದರೂ ಒಂದು ಖುಷಿಯ ಅಂಶವನ್ನು ಕೊಡಿ ಎಂದು ಪುನೀತ್ ಅಭಿಮಾನಿಗಳು ನಿರ್ದೇಶಕ ಸಂತೋಷ್ ಆನಂದರಾಮ್ ಮತ್ತು ನಿರ್ಮಾಪಕರನ್ನು ಒತ್ತಾಯಿಸಿದ್ದರು. ಅದಕ್ಕೆ ಒಪ್ಪಿಕೊಂಡಿದ್ದ ಚಿತ್ರತಂಡ ಅಪ್ಪು ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಹುಟ್ಟುಹಬ್ಬದ ಮುನ್ನಾದಿನ, ಅಂದರೆ ಮಾರ್ಚ್ 16ರಂದು ಯುವರತ್ನ ಚಿತ್ರದ ಸಂಭಾಷಣೆಯ ಟೀಸರ್‍ನ್ನು ಬಿಡುಗಡೆ ಮಾಡಿತ್ತು. ಹೊಂಬಾಳೆ ಫಿಲಂಸ್‍ನ ಕಾರ್ತಿಕ್‍ಗೌಡ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಅಪ್ಪು ಅಭಿಮಾನಿಗಳಿಗಾಗಿಯೇ ಈ ಡೈಲಾಗ್ ಟೀಸರ್ ಗಿಫ್ಟ್ ಆಗಿ ನೀಡಿದ್ದರು.
ಯುವರತ್ನ ಚಿತ್ರತಂಡ ಈ ಮಾಹಿತಿ ನೀಡುತ್ತಿದ್ದಂತೆಯೇ ಪುನೀತ್ ಅಭಿಮಾನಿಗಳು ಸಹ ಸಖತ್ ಖುಷಿಯಾಗಿದ್ದರು. ಯುವರತ್ನ ಚಿತ್ರದಲ್ಲಿ ಪುನೀತ್‍ರಾಜ್‍ಕುಮಾರ್ ಜೊತೆ ನಾಯಕಿಯಾಗಿ ಸಯ್ಯೇಶಾ ಸೈಗಲ್ ನಟಿಸಿz್ದÁರೆ. ಜೊತೆಗೆ ಸೋನುಗೌಡ, ಡಾಲಿ ಧನಂಜಯ, ಬೋಮನ್ ಇರಾನಿ, ಪ್ರಕಾಶ್ ರೈ ಮುಂತಾದವರು ನಟಿಸಿz್ದÁರೆ. ಎಸ್.ಎಸ್.ತಮನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿz್ದÁರೆ. ಇದರ ಜೊತೆಗೆ ಚೇತನ್‍ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಮೋಷನ್ ಪೆÇೀಸ್ಟರ್ ಸಹ ಗಂಟೆಗೆ ಬಿಡುಗಡೆ ಯಾಗಿದ್ದು, ಅದು ಕೂಡ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಪೆÇೀಸ್ಟರ್‍ನಲ್ಲಿ ಪುನೀತ್ ಅವರ ಹೊಸಲುಕ್ ನೋಡಿ ಸಾಕಷ್ಟು ಅಭಿಮಾನಿಗಳು ಕಮೆಂಟ್ಸ್ ಮಾಡಿ ಪುನೀತ್ ರಾಜ್‍ಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಸಧ್ಯ ಯುವರತ್ನ ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾ ಸಮಸ್ಯೆ ಬಗೆಹರಿದ ನಂತರ ಚಿತ್ರತಂಡ ಬಿಡುಗಡೆಗೆ ಪ್ಲಾನ್ ಮಾಡಲಿದೆ.