ಟಕ್ಕರ್ ಹಾಡು ಮೆಚ್ಚಿದ ಧ್ರುವಸರ್ಜಾ
ಸಿನಿಮಾ

ಟಕ್ಕರ್ ಹಾಡು ಮೆಚ್ಚಿದ ಧ್ರುವಸರ್ಜಾ

March 20, 2020

ಧ್ರುವ ಸರ್ಜಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ಈಗ ದರ್ಶನ್ ಕುಟುಂಬದ ಹುಡುಗ ಮನೋಜ್ ಹೀರೋ ಆಗಿರುವ ಟಕ್ಕರ್ ಚಿತ್ರದ ಟೀಸರ್ ಮತ್ತು ಹಾಡುಗಳನ್ನು ನೋಡಿ ಮೆಚ್ಚಿ ಮಾತಾಡಿದ್ದಾರೆ. “ ಕನ್ನಡ ಚಿತ್ರರಂಗಕ್ಕೆ ದರ್ಶನ್ ದೊಡ್ಡ ಆನೆ ಇದ್ದಂತೆ. ಅವರು ನಡೆದಿದ್ದೇ ದಾರಿ. ಹೀಗಿರುವಾಗ ಟಕ್ಕರ್ ಸಿನಿಮಾದಲ್ಲಿ ಆನೆ ನಡೆದಿದ್ದೆ ದಾರಿ ಅಲ್ವೇನ್ರಿ, ಯಾರೂ ಕೊಡಬೇಡಿ ಲೆಕ್ಚರ್… ಎನ್ನುವ ಹಾಡು ರೂಪಿಸಿರುವುದು ತುಂಬಾ ಖುಷಿ ಆಯ್ತು. ಈ ಹಾಡು ಕೂಡಾ ಅಷ್ಟೇ ಅರ್ಥಪೂರ್ಣವಾಗಿ ಮೂಡಿಬಂದಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಅದ್ಭುತವಾದ ಸಾಲುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಅವರು ಈ ಮಟ್ಟಕ್ಕೆ ಮಾಸ್ ಸಾಂಗ್ ಮಾಡುತ್ತಾರೆ ಅಂತಾ ನನಗೆ ಈಗ ಗೊತ್ತಾಯ್ತು. ನನ್ನ ಗೆಳೆಯ ಮನೋಜ್ ಈ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೀರೋ ಆಗಲು ಬೇಕಿರುವ ಹೈಟು, ಪರ್ಸನಾಲಿಟಿ ಎಲ್ಲವೂ ಮನೋಜ್ ಅವರಲ್ಲಿದೆ ಎಂದು ಧ್ರುವ ಸರ್ಜಾ ಟಕ್ಕರ್ ಚಿತ್ರತಂಡ ಮತ್ತು ಮನೋಜ್‍ಗೆ ಶುಭಾಶಯ ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೇ ಆಗಿದ್ದರೆ ಇದೇ ಮಾರ್ಚ್ 27ರಂದು ಟಕ್ಕರ್ ರಾಜ್ಯಾದ್ಯಂತ ತೆರೆಗೆ ಬರಬೇಕಿತ್ತು. ಕೊರೋನೊ ವೈರಸ್ ಹಾವಳಿಯಿಂದ ಚಿತ್ರಮಂದಿರ, ಮಾಲ್‍ಗಳು ಬಂದ್ ಆಗಿರುವುದರಿಂದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ದರ್ಶನ್ ಅವರ ನಟನೆಯ, ಬಹು ನಿರೀಕ್ಷಿತ ರಾಬರ್ಟ್ ಚಿತ್ರ ಬಿಡುಗಡೆಯಾದ ನಂತರ ಟಕ್ಕರ್ ತೆರೆಗೆ ಬರಲಿದೆ ಎಂದು ನಿರ್ಮಾಪಕ ಕೆ.ಎನ್.ನಾಗೇಶ ಕೋಗಿಲು ತಿಳಿಸಿದ್ದಾರೆ. ವಿ.ರಘುಶಾಸ್ತ್ರಿ ಅವರ ನಿರ್ದೇಶನದ ಟಕ್ಕರ್ ಚಿತ್ರÀ ಸೈಬರ್ ಕ್ರೈಂ ಸುತ್ತಲಿನ ಕಥಾವಸ್ತುವನ್ನು ಹೊಂದಿದೆ. ಪುಟ್ಟಗೌರಿ ಮದುವೆ ಧಾರಾವಾಹಿಯ ಮೂಲಕ ಕರ್ನಾಟಕದ ಮನೆಮಗಳಾದ ನಟಿ ರಂಜನಿ ರಾಘವನ್ ನಟನೆಯ ಎರಡನೇ ಸಿನಿಮಾ ಇದು. ಮಣಿಕಾಂತ್ ಕದ್ರಿ ಅವರ ಸಂಗೀತ, ಡಿಫರೆಂಟ್ ಡ್ಯಾನಿ ಅವರ ಸಾಹಸ, ವಿಲಿಯಮ್ಸ್ ಡೇವಿಡ್ ಅವರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿಕುಮಾರ್ ಕಲಾನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಕೆ.ಎಸ್. ಶ್ರೀಧರ್, ಶಂಕರ್‍ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಕುರಿ ಸುನಿಲ್, ಜೈಜಗದೀಶ್  ಇತರರ ತಾರಾಬಳಗವಿದೆ.

Translate »