ಶಾಂತಿಯುತ ಶೇ.72.81 ಮತದಾನ
News

ಶಾಂತಿಯುತ ಶೇ.72.81 ಮತದಾನ

May 11, 2023

ಬೆಂಗಳೂರು, ಮೇ 10(ಕೆಎಂಶಿ)- ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಗೆ ರಾಜ್ಯದ ಮತದಾರರು ಇಂದು ಭವಿಷ್ಯ ಬರೆದಿದ್ದಾರೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರ ಗಳಿಗೆ ಇಂದು ಒಂದೇ ಹಂತದಲ್ಲಿ ನಡೆದ ಚುನಾವಣೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ಶಾಂತಿಯುತ ವಾಗಿ ನಡೆಯಿತು. ಒಂದೆಡೆ ರಾಜ ಕೀಯ ಪಕ್ಷಗಳ ಅಬ್ಬರ ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗ ಮತ ದಾನಕ್ಕೆ ಅಭೂತಪೂರ್ವ ಪೆÇ್ರೀತ್ಸಾಹ ನೀಡಿದ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಮತದಾರರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದೆ. ಒಟ್ಟಾರೆ ಶೇಕಡ 72.81 ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಗಿಂತ ಶೇಕಡವಾರಿನಲ್ಲಿ ಮತದಾನದ ಪ್ರಮಾಣ ಹೆಚ್ಚಿದೆ. ಬಳ್ಳಾರಿ ಗ್ರಾಮಾಂತರ ದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನಡೆದ ಗಲಭೆ ಮತ್ತು ಕಲ್ಲು ತೂರಾಟ ದಿಂದ ಒಬ್ಬರು ಗಾಯಗೊಂಡಿದ್ದಾರೆ. ಇದನ್ನು ಹೊರತುಪಡಿಸಿದರೆ, ದೊಡ್ಡ ಪ್ರಮಾಣದಲ್ಲಿ ಅಹಿತಕರ ಘಟನೆ ಜರುಗಿಲ್ಲ. ಆದರೆ ಮತದಾನ ಮಾಡಲು ಬಂದವರು, ನಂತರ ಮತದಾನ ಮಾಡಿ ಹೋದ ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬರು ಮತಗಟ್ಟೆಯಲ್ಲೇ ಕೊನೆಯು ಸಿರೆಳೆದ ಘಟನೆ ಜರುಗಿದೆ. ರಾಜ್ಯದ ಕೆಲವೆಡೆ ವಧು-ವರರು ಮದುವೆ ಮುಗಿಯುತ್ತಿದ್ದಂತೆ ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ. ಮತ್ತೊಂದೆಡೆ ಹೆರಿಗೆಗೆ ತೆರಳು ವುದಕ್ಕೂ ಮುನ್ನ ಮತ ಚಲಾಯಿಸಿ, ಆಸ್ಪತ್ರೆಯಲ್ಲಿ ಮಗು ಹೆತ್ತಿದ್ದಾರೆ. ಇಂದು ಮತ್ತು ನಾಳೆ ಮಧ್ಯಾಹ್ನದ ನಂತರ ಮಳೆ ಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ನೀಡಿದ ವರದಿ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಧ್ಯಾಹ್ನದ ವೇಳೆಗೆ ಬಿರುಸಿನ ಮತದಾನ ನಡೆದು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇಕಡ 58ರಷ್ಟು ಮತ ದಾನವಾಗಿತ್ತು. ಈ ಬಾರಿ ಹಿರಿಯ ನಾಗರಿಕರು ಅತೀ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿ ದರೆ, ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕು ಪಡೆದ ಯುವ ಜನತೆ ಅದೇ ಉತ್ಸಾಹ ದಲ್ಲಿ ತಮ್ಮ ಮತ ಚಲಾಯಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾ ಮನ್, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿ ಯೂರಪ್ಪ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ತಮ್ಮ ತಮ್ಮ ಮತ ಕ್ಷೇತ್ರಗಳಲ್ಲಿ ಮತಚಲಾಯಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರ ರಾಷ್ಟ್ರೀಯ ರಾಜಕೀಯ ಪಕ್ಷಗಳು, ಪಕ್ಷೇತರ ಸದಸ್ಯರು ಸೇರಿದಂತೆ 2615 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯ ವನ್ನು ಮತದಾರರು ನಿರ್ಧರಿಸಿದ್ದಾರೆ. ಮೂರೂ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿದ್ದು, ಯಾವ ಪಕ್ಷಕ್ಕೆ ಮತದಾರರು ಆಶೀರ್ವಾದ ಮಾಡಲಿದ್ದಾರೆ ಎಂಬುದು ಮೇ 13 ರಂದು ಬಹಿರಂಗ ಗೊಳ್ಳಲಿದೆ. ಅಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆಯಾ ತಾಲೂಕು, ಜಿಲ್ಲಾ, ಪಾಲಿಕೆ ಕೇಂದ್ರಗಳಲ್ಲಿ ನಡೆಯಲಿದೆ.

ಮತಗಟ್ಟೆಯಲ್ಲೇ ಮಗು ಜನನ: ಮತದಾನ ಸಂದರ್ಭದಲ್ಲಿ ಕೆಲವು ಮನಮುಟ್ಟುವ ಘಟನೆಗಳೂ ಜರುಗಿವೆ. ಕುರುಗೋಡು ವಿಧಾನಸಭಾ ಕ್ಷೇತ್ರದಲ್ಲಿ ತುಂಬು ಗರ್ಭಿಣಿಗೆ ಮತ ಕೇಂದ್ರದಲ್ಲಿಯೇ ಸಹಜ ಹೆರಿಗೆ ಆಗಿದೆ. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೂಡಲೇ ತಾಯಿ ಮತ್ತು ನವಜಾತಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖ ಲಿಸಲಾಗಿದೆ. ಮತ ಚಲಾಯಿಸಿ, ಗುರುತು ತೋರಿಸಿದವರಿಗೆ ರಾಜ್ಯದ ಕೆಲವು ಹೋಟೆಲ್ ಗಳಲ್ಲಿ ಉಚಿತವಾಗಿ ತಿಂಡಿ-ಊಟ ನೀಡಲಾಗಿದೆ. ಕೆಲವೆಡೆ ತಾಂತ್ರಿಕ ದೋಷದಿಂದ ವಿದ್ಯುನ್ಮಾನ ಯಂತ್ರಗಳು ಬದಲಾವಣೆ ಮಾಡಿದರೆ, ಮತ್ತೆ ಕೆಲವೆಡೆ ಕಾರ್ಯಕರ್ತರು, ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಮತಯಂತ್ರವನ್ನೇ ಪುಡಿಪುಡಿ ಮಾಡಿದ್ದಾರೆ.

ಕೆಲವೆಡೆ ಒಂದು ಪಕ್ಷಕ್ಕೆ ಮತಚಲಾಯಿಸಿ ಎಂದು ಮತಗಟ್ಟೆಯ ಬಳಿ, ಕಾರ್ಯ ಕರ್ತರು ಮತದಾರರಿಗೆ ಮನವಿ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲವೆಡೆ ಮತಗಟ್ಟೆ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಏಜೆಂಟ್ ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೂಡಲೇ ಮತಗಟ್ಟೆಯ ಓರ್ವ ಬಿಎಲ್‍ಓ ಅನ್ನು ಮೇಲಧಿಕಾರಿಗಳು ಬದಲಾವಣೆ ಮಾಡಿದ್ದಾರೆ.ಮೈಸೂರು ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಏಳಿಗೆಹುಂಡಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ. ಚುನಾವಣಾ ಆಯೋಗ ಬೆಂಗಳೂ ರಿನ ಮತಗಟ್ಟೆಯ ಸುತ್ತ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದು, ಜಿಲ್ಲಾ ಚುನಾವಣಾ ಆಯೋಗ ಪ್ರತಿ ಮತಗಟ್ಟೆಗೆ 5 ಜನ ಅಧಿಕಾರಿಗಳ ನಿಯೋಜನೆ ಹಾಗೂ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ವಿಕಲಚೇತನರಿಗೆ ಸುಲಭವಾಗಿ ಮತದಾನ ಮಾಡಲು ವ್ಯವಸ್ಥೆ ಮಾಡಿತ್ತು. ಇದರ ಮಧ್ಯೆ ಶಾಂತಿಯುತವಾಗಿ ಮತದಾನ ನಡೆದು, ರಾಜ್ಯದ ಜನತೆ ಹೊಸ ಸರ್ಕಾರದ ಭವಿಷ್ಯ ನಿರ್ಧಾರ ಮಾಡಿದ್ದಾರೆ.

Translate »