ಡಿಸಿ, ಎಸಿ ಕೋರ್ಟ್‍ಗಳಲ್ಲಿ ಕಾಲಕಾಲಕ್ಕೆ ವಿಚಾರಣೆ: ಅಕ್ರಂಪಾಷ
ಹಾಸನ

ಡಿಸಿ, ಎಸಿ ಕೋರ್ಟ್‍ಗಳಲ್ಲಿ ಕಾಲಕಾಲಕ್ಕೆ ವಿಚಾರಣೆ: ಅಕ್ರಂಪಾಷ

June 24, 2019

ಹಾಸನ, ಜೂ.23- ತಮ್ಮ ಹಾಗೂ ಅಧೀನ ಅಧಿಕಾರಿಗಳ ನ್ಯಾಯಾಲಯದಲ್ಲಿ ಕಾಲ ಕಾಲಕ್ಕೆ ವಿಚಾರಣೆಗಳನ್ನು ನಡೆಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಭರವಸೆ ನೀಡಿದರು.

ಜಿಲ್ಲಾ ವಕೀಲರ ಸಂಘದಲ್ಲಿ ಡಿಸಿ, ಎಸ್‍ಪಿ ಜತೆ ವಕೀಲರು ಹಮ್ಮಿಕೊಂಡಿದ್ದ `ಆಡಳಿತ ಸುಧಾರಣೆ’ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಜಿಲ್ಲಾಡಳಿತವು ನ್ಯಾಯಾಂಗ ಇಲಾಖೆಗೆ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಗ್ರಾಮ ವಾಸ್ತವ್ಯ ಸೇರಿದಂತೆ ಆಡಳಿತ ವ್ಯವಸ್ಥೆ ಸುಧಾರಣೆಗೆ ರಚನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೌತಿ ಖಾತೆ ಆಂದೋ ಲನ ಮೂಲಕ 1000 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ತಾಲೂಕು, ಹೋಬಳಿಗಳಲ್ಲಿ ಪೌತಿ ಖಾತೆ ಆಂದೋ ಲನ, ಜನ ಸಂಪರ್ಕ ಸಭೆಗಳನ್ನು ನಡೆಸ ಲಾಗುವುದು ಎಂದು ಹೇಳಿದರು.

ಡಿಸಿ ಅಕ್ರಂ ಪಾಷ ಜೆ.ಸಿ.ಪುರದಲ್ಲಿ ಗ್ರಾಮ ವಾಸ್ತವ್ಯ ನಡೆಸಿರುವುದು ಶ್ಲಾಘನೀಯ. ಇಂತಹ ಕ್ರಮದಿಂದ ಗ್ರಾಮೀಣ ಜನರ ಹಲವು ಸಂಕಷ್ಟಗಳು ಸುಲಭವಾಗಿ ಬಗೆಹರಿಯು ತ್ತವೆ ಎಂದು ವಕೀಲರ ಸಂಘದ ಅಧ್ಯಕ್ಷ ಜಿ.ಪಿ.ಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿ, ಎಸಿ, ತಹಸೀಲ್ದಾರ್ ಕಚೇರಿ ಹಾಗೂ ನ್ಯಾಯಾಲಯಗಳಲ್ಲಿ ಜನರನ್ನು ಹೆಚ್ಚು ಅಲೆ ದಾಡಿಸದೆ ಅವರ ಕೆಲಸಗಳನ್ನು ತ್ವರಿತವಾಗಿ ಮುಗಿಸಿಕೊಡಬೇಕೆಂದು ಮನವಿ ಮಾಡಿದರು.

ಚೆಕ್‍ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿ ಪೆÇಲೀಸ್ ಇಲಾಖೆಯು ಸಕಾಲದಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಬೇಗ ವರದಿ ಸಲ್ಲಿಸಬೇಕು. ನಗರದ ಸಂಚಾರಿ ವ್ಯವಸ್ಥೆ ಸುಧಾರಣೆಗೂ ಗಮನ ಹರಿಸ ಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ ಮಾತನಾಡಿ, ನಗರದ ಸಂಚಾರಿ ವ್ಯವಸ್ಥೆ ಸುಧಾರಣೆಗೆ ಈಗಾಗಲೇ ಗಮನ ಹರಿಸಲಾಗಿದೆ. ಸೂಚನಾ ಫಲಕಗಳ ಅಳ ವಡಿಕೆ, ಹೈಮಾಸ್ಟ್ ದೀಪ, ಕ್ಯಾಟ್ ಐ, ರಿಫ್ಲೆಕ್ಟರ್‍ಗಳ ಅಳವಡಿಕೆಗೆ ಅಗತ್ಯ ಅನು ದಾನವನ್ನು ಒದಗಿಸಲಾಗಿದೆ ಎಂದು ಹೇಳಿ ದರು. ವಕೀಲರ ಸಂಘದ ಪದಾಧಿಕಾರಿ ಗಳು ಸಂವಾದದಲ್ಲಿದ್ದರು.

ದುಸ್ಥಿತಿಯಲ್ಲಿರುವ ಹಾಸನಾಂಬ ಕಲಾಕ್ಷೇತ್ರದ ದುರಸ್ತಿಗೆ 4.50 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿದ್ದು, ಅನುದಾನ ಬಿಡುಗಡೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಿಕೊಡಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು.
-ಅಕ್ರಂ ಪಾಷ, ಜಿಲ್ಲಾಧಿಕಾರಿ

Translate »