ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ  ಅನುಕೂಲ ಪಡೆದವರ ಮಾತು ತೃಪ್ತಿ ತಂದಿದೆ: ಮೋದಿ
ಮೈಸೂರು

ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ಅನುಕೂಲ ಪಡೆದವರ ಮಾತು ತೃಪ್ತಿ ತಂದಿದೆ: ಮೋದಿ

June 21, 2022

ಮೈಸೂರು, ಜೂ. 20(ಆರ್‍ಕೆ)- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಫಲಾನು ಭವಿಗಳೊಂದಿಗೆ ತಾವು ನಡೆಸಿದ ಸಂವಾದ ತೃಪ್ತಿ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಪುರಸ್ಕøತ ಯೋಜನೆಗಳ 74 ಇಲಾಖೆಗಳಲ್ಲಿ ಪ್ರಯೋಜನ ಪಡೆದ ಫಲಾನು ಭವಿಗಳೊಂದಿಗೆ ಸಂವಾದ ನಡೆ ಸಿದ ನಂತರ ವೇದಿಕೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಯಾವುದೋ ದುರ್ಘಟನೆಯೊಂದರಲ್ಲಿ ಗಾಯಗೊಂಡು ಮುಖ ವಿಕಾರಗೊಂಡಿದ್ದ ಪ್ರದೀಪ್ ಎಂಬ ಯುವಕ, ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದು ಗುಣಮುಖನಾಗಿ ಮೊದಲಿನಂತೆಯೇ ಮುಖ ರೂಪುಗೊಂಡಿತು ಎಂದು ಆ ಯುವಕ ಹೇಳುತ್ತಿದ್ದಾಗ ನನಗೆ ಸಂತೋಷವಾಯಿತು ಎಂದು ನುಡಿದರು. ಆ ಯೋಜನೆಯಿಂದ ದೇಶದಲ್ಲಿ ಲಕ್ಷಾಂತರ ಮಂದಿಯ ಆರೋಗ್ಯ ಸುಧಾರಣೆಯಾಗಿದೆ. ಅದೆಷ್ಟೋ ಬಡವರಿಗೆ ಆಸರೆಯಾಗಿದೆ ಎಂಬುದನ್ನು ತಿಳಿದು ತೃಪ್ತಿಯಾಯಿತು. ಅದೇ ರೀತಿ ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಇಲಾಖೆಗಳ ಫಲಾನುಭವಿಗಳೂ ಸಹ ತಮ್ಮ ಅಭಿಪ್ರಾಯ ಹಂಚಿಕೊಂಡರು ಎಂದು ಪ್ರಧಾನಿಗಳು ನುಡಿದರು.

ಸಂಜೆ 5.40 ಗಂಟೆಗೆ ವಿಶೇಷ ಹೆಲಿಕಾಪ್ಟರ್‍ನಲ್ಲಿ ಓವೆಲ್ ಮೈದಾನಕ್ಕೆ ಬಂದಿಳಿದ ಪ್ರಧಾನಿಗಳು, ಕಾರಿನಲ್ಲಿ ನೇರವಾಗಿ ಮಹಾರಾಜ ಕಾಲೇಜು ಮೈದಾನಕ್ಕೆ ಬಂದು ವೇದಿಕೆ ಬದಿಯಲ್ಲೇ ವ್ಯವಸ್ಥೆ ಮಾಡಿದ್ದ ಪ್ರತ್ಯೇಕ ಸ್ಥಳದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ನಂತರ ಸಂಜೆ 6.05 ಗಂಟೆಗೆ ಪ್ರಧಾನ ವೇದಿಕೆಗೆ ಆಗಮಿಸಿದರು.

Translate »