ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಮೈಸೂರು

ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

November 15, 2020

ಜೈಸಲ್ಮೇರ್,ನ.14- ಆಕ್ರಮಣಕಾರ ರನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಹೊಂದಿ ರುವ ದೇಶಗಳು ಮಾತ್ರವೇ ಸುರಕ್ಷಿತ ವಾಗಿ ಉಳಿದಿವೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಮತ್ತು ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಲ್ಲಿನ ಲೋಂಗಾವಾಲಾ ಸೇನಾ ನೆಲೆಯಲ್ಲಿ ಶನಿವಾರ ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ, ಆಕ್ರಮಣಕಾರರು ತಕ್ಕ ಪಾಠ ಕಲಿಯಬೇಕಾಗುತ್ತದೆ ಎನ್ನು ವುದನ್ನು ಜಗತ್ತಿನ ಇತಿಹಾಸವೇ ತೋರಿಸಿ ಕೊಟ್ಟಿದೆ. ಗಡಿಯಲ್ಲಿ ಯೋಧರ ಕಟ್ಟೆ ಚ್ಚರ ಮತ್ತು ಸನ್ನದ್ಧ ಸ್ಥಿತಿ ಯಾವುದೇ ದೇಶವನ್ನು ಸುರಕ್ಷಿತವಾಗಿ ಇರಿಸುವು ದರ ಜತೆಗೆ

ಪ್ರಧಾನಿಯಿಂದ ಎಲ್ಲೆಲ್ಲಿ ದೀಪಾವಳಿ ಆಚರಣೆ: ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಪ್ರಧಾನಿಯಾದ ಬಳಿಕ ಈವರೆಗೆ ಏಳು ಕಡೆ ಯೋಧರೊಂದಿಗೆ ಅವರು ದೀಪಾವಳಿ ಆಚರಿಸಿದ್ದಾರೆ, 2014ರಲ್ಲಿ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎನಿಸಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶ, 2015ರಲ್ಲಿ ಪಂಜಾಬ್ ಗಡಿಯಲ್ಲಿ ಬಿಎಸ್‍ಎಫ್ ಯೋಧರೊಂದಿಗೆ ದೀಪಾವಳಿ ಆಚರಣೆ, 2016ರಲ್ಲಿ ಹಿಮಾಚಲ ಪ್ರದೇಶದ ಇಂಡೋ-ಟಿಬೆಟ್ ಗಡಿ ಪೆÇಲೀಸ್ ಪಡೆಯೊಂದಿಗೆ, 2017ರಲ್ಲಿ ಉತ್ತರ ಕಾಶ್ಮೀರದ ಎಲ್‍ಒಸಿ ಬಳಿಯ ಗುರೇಜ್ ಸೆಕ್ಟರ್‍ನಲ್ಲಿ ದೀಪಾವಳಿ ಆಚರಣೆ, 2018ರಲ್ಲಿ ಉತ್ತರಾಖಂಡದ ಹರ್ಶಿಲ್ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿ ಐಟಿಬಿಪಿ ಪಡೆ ಜತೆ, 2019ರಲ್ಲಿ ಜಮ್ಮು-ಕಾಶ್ಮೀರದ ರಜೌರಿ ಸೇನಾ ನೆಲೆ, ಪಠಾಣ್‍ಕೋಟ್ ವಾಯು ನೆಲೆಯಲ್ಲಿ ಯೋಧರ ಜತೆ ಹಬ್ಬ ಆಚರಿಸಿದ್ದರು.

Translate »