ಗ್ರಾಪಂ ಸದಸ್ಯನಿಂದ ಪತ್ನಿ ದಹನ
ಮೈಸೂರು

ಗ್ರಾಪಂ ಸದಸ್ಯನಿಂದ ಪತ್ನಿ ದಹನ

November 15, 2020

ತಿ.ನರಸೀಪುರ, ನ.14-ದೀಪಾವಳಿ ಹಬ್ಬದಂದೇ ಗ್ರಾಮ ಪಂಚಾಯ್ತಿ ಸದಸ್ಯ ನೋರ್ವ ತನ್ನ ಗರ್ಭಿಣಿ ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ರುವುದಾಗಿ ತಾಲೂಕಿನ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೂರು ಠಾಣೆ ವ್ಯಾಪ್ತಿಯ ದೊಡ್ಡ ಮುಲಗೂಡು ಗ್ರಾಮ ಪಂಚಾಯ್ತಿ ಸದಸ್ಯ ರಮೇಶ್ ಪತ್ನಿಯ ಕೊಲೆ ಆರೋಪಕ್ಕೆ ಗುರಿಯಾದವನಾಗಿದ್ದು, ಈತನಿಗೆ ತಾಯಿ ನಿಂಗಮ್ಮ, ಆತನ ದೊಡ್ಡಪ್ಪ ಜವ ರಯ್ಯ ಮತ್ತಿತರರು ಸಹಕಾರ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ವಿವರ: ನಂಜನಗೂಡಿನ ಅಶೋಕಪುರಂ ನಿವಾಸಿ ಕಾಳಿಂಗ ಸ್ವಾಮಿ ಎಂಬುವರ ಪುತ್ರಿ ಬಿ.ಎಡ್. ಪದವೀ ಧರೆ ಶಾಂತಮ್ಮ (22)ಳನ್ನು ದೊಡ್ಡಮುಲಗೂಡು ಗ್ರಾಮ ಪಂಚಾಯ್ತಿ ಸದಸ್ಯ ರಮೇಶನಿಗೆ 2 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ 50 ಸಾವಿರ ರೂ. ನಗದು, 60 ಗ್ರಾಂ ಚಿನ್ನಾ ಭರಣ ವರದಕ್ಷಿಣೆಯಾಗಿ ನೀಡಲಾಗಿತ್ತು. ರಮೇಶ ತಾನು ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಲು ತವರು ಮನೆಯಿಂದ 5 ಲಕ್ಷ ರೂ. ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಶಾಂತಮ್ಮ ತಂದೆ ಕಾಳಿಂಗಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ತಾನು ಪಂಚಾಯ್ತಿ ನಡೆಸಿ ಅಳಿಯನಿಗೆ ಬುದ್ಧಿವಾದ ಹೇಳಿದ್ದೆ ಎಂದು ದೂರಿನಲ್ಲಿ ತಿಳಿಸಿರುವ ಅವರು, ಶುಕ್ರವಾರ ರಾತ್ರಿ 10 ಗಂಟೆ ಸಮಯದಲ್ಲಿ ತನ್ನ ಪುತ್ರಿ ಮೇಲೆ ಪತಿ ಹಾಗೂ ಮನೆಯವರು ಗಲಾಟೆ ಮಾಡಿದ್ದು, ಈ ವಿಷಯವನ್ನು ಮಗಳು ನನಗೆ ದೂರವಾಣಿ ಮೂಲಕ ತಿಳಿಸಿದ್ದಳು. ನಾನು ಇಂದು (ಶನಿವಾರ) ಬೆಳಿಗ್ಗೆ ಬರುವು ದಾಗಿ ಆಕೆಗೆ ತಿಳಿಸಿದ್ದೆ. ಆದರೆ ಇಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ದೊಡ್ಡಮುಲ ಗೂಡು ಗ್ರಾಮದ ವ್ಯಕ್ತಿಯೋರ್ವರು ನನ್ನ ಸಹೋದರ ಕೃಷ್ಣ ಅವರಿಗೆ ಮೊಬೈಲ್ ಮೂಲಕ ಕರೆ ಮಾಡಿ ಶಾಂತಮ್ಮ ಬೆಂಕಿ ಹಚ್ಚಿಕೊಂಡು ಸತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಆಕೆಯನ್ನು ಪತಿ ರಮೇಶ ಮತ್ತು ಆತನ ಮನೆಯವರು ವರದಕ್ಷಿಣೆ ಹಣ ತರುವಂತೆ ಹಿಂಸೆ ನೀಡಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಕಾಳಿಂಗಸ್ವಾಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಪಂ ಸದಸ್ಯ ರಮೇಶ್ ಮತ್ತು ಆತನ ಕುಟುಂಬದವರು ಪರಾರಿಯಾಗಿದ್ದು, ಬನ್ನೂರು ಠಾಣೆ ಪೊಲೀಸರು ಭಾರತೀಯ ದಂಡ ಸಂಹಿತೆ 302, 498ಎ, 304ಬಿ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡು ಕಾಟ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ನಂಜನಗೂಡು ಡಿವೈಎಸ್‍ಪಿ ಪ್ರಭಾಕರ ರಾವ್ ಶಿಂಧೆ, ತಿ.ನರಸೀಪುರ ಸರ್ಕಲ್ ಇನ್ಸ್‍ಪೆಕ್ಟರ್ ಲವ, ಬನ್ನೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಪುನೀತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

 

 

 

 

Translate »