ಹುತಾತ್ಮ ಪೊಲೀಸರ ಸ್ಮರಣೆ, ಗೌರವ ವಂದನೆ
ಮೈಸೂರು

ಹುತಾತ್ಮ ಪೊಲೀಸರ ಸ್ಮರಣೆ, ಗೌರವ ವಂದನೆ

October 22, 2018

ಮೈಸೂರು: ಕರ್ತವ್ಯ ಸಲ್ಲಿಸು ತ್ತಿದ್ದಾಗಲೇ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭಾನುವಾರ ಮೈಸೂರಿನ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಗೌರವ ಸಲ್ಲಿಸಲಾಯಿತು.

ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಪೊಲೀಸ್, ನಗರ ಪೊಲೀಸ್, ಕರ್ನಾ ಟಕ ಪೊಲೀಸ್ ಅಕಾಡೆಮಿ ಜಂಟಿಯಾಗಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿದರು.
ಡಿವೈಎಸ್‍ಪಿ ಎಚ್.ಎಂ.ಚಂದ್ರಶೇಖರ್ ನೇತೃತ್ವದ ತಂಡ ಕಳೆದ ಒಂದು ವರ್ಷದ ಅವಧಿಯಲ್ಲಿ ನಿಧನ ರಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಾರಿ ಫೈರಿಂಗ್ ಮುಖಾಂತರ ಗೌರವ ಅರ್ಪಿಸಿದರು.

ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಧೀಶ ಎಸ್.ಕೆ.ವಂಟಿಗೋಡಿ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿ ಮಾತನಾಡಿ, 1959ರ ಅ.21 ರಂದು ದೇಶದ ಗಡಿ ಲಡಾಕ್‍ನಲ್ಲಿ ಚೀನಾ ಆಕ್ರಮಣಕ್ಕೆ ತಕ್ಕ ಉತ್ತರ ನೀಡಲು ನಮ್ಮ ಸೈನಿಕರು ಸಿಆರ್‍ಪಿಎಫ್ ಪಡೆಯ ಡಿಎಸ್‍ಪಿ ಕರಣ್‍ಸಿಂಗ್ ನೇತೃತ್ವದಲ್ಲಿ ಕೊನೆಯ ರಕ್ತದ ಹನಿ ಹಾಗೂ ಗುಂಡು ಇರುವವ ರೆಗೂ ಕೇವಲ ರೈಫಲ್‍ನಿಂದ ಹೋರಾಟ ನಡೆಸಿ ದ್ದರು. ಆ ಹೋರಾಟದಲ್ಲಿ 10 ಮಂದಿ ಯೋಧರು ಮೃತರಾದರೆ, 9 ಮಂದಿ ಗಾಯಗೊಂಡು ಸೆರೆಯಾ ದರು. ಈ ಪಡೆ ತೋರಿದ ಧೈರ್ಯ ಮತ್ತು ಸಾಹಸ ಇಡೀ ರಾಷ್ಟ್ರದ ಮೆಚ್ಚುಗೆಗೆ ಪಾತ್ರವಾಯಿತು. ಯೋಧರ ಬಲಿದಾನದಿಂದಾಗಿ ದೇಶ ಶೋಕ ಸಾಗರದಲ್ಲಿ ಮುಳುಗಿತ್ತು. ಈ ದಿನದ ನೆನಪಿಗಾಗಿ ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಸ್ವಾತಂತ್ರ್ಯಾ ನಂತರದಲ್ಲಿ ಈವರೆಗೆ 34,418 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸೈನಿಕರು ದೇಶಕ್ಕಾಗಿ ಹೋರಾಡಿ ಹುತಾತ್ಮರಾಗಿದ್ದಾರೆ. 2016-17ರಲ್ಲಿ 383 ಮಂದಿ ಜೀವ ತೆತ್ತಿದ್ದಾರೆ. 2017-18ರಲ್ಲಿ 418 ಮಂದಿ ಬಲಿದಾನಗೈದಿದ್ದಾರೆ ಎಂದು ವಿವರಿಸಿದರು.

ಪೊಲೀಸರು, ಸೈನಿಕರಿಗೆ ದಿನದಲ್ಲಿ ಇಂತಿಷ್ಟು ಕೆಲಸದ ಅವಧಿ ಎಂಬುದೇ ಇರುವುದಿಲ್ಲ. ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಇವರು ದೇಶದ ಆಸ್ತಿ, ಪಾಸ್ತಿ, ಜನರ ರಕ್ಷಣೆ ಮಾಡುತ್ತಿರುತ್ತಾರೆ. ಅಂಥವರಿಗೆ ಗೌರವ ಸಲ್ಲಿಸಬೇಕಾದದ್ದು ನಮ್ಮ ಕರ್ತವ್ಯ ಎಂದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ಕಳೆದ ಒಂದು ವರ್ಷದ ಅವಧಿ ಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗಳ ಪಟ್ಟಿ ವಾಚಿಸಿ, ಸ್ಮರಿಸಿದರು.

ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್‍ಕುಮಾರ್, ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವ ರಾವ್, ಉಪ ಪೊಲೀಸ್ ಆಯುಕ್ತ ವಿಷ್ಣುವರ್ಧನ, ಕೆಪಿಎ ಉಪ ನಿರ್ದೇಶಕ ಓಂಕೃಷ್ಣ, ಕೆಎಸ್‍ಆರ್‍ಪಿ 5ನೇ ಪಡೆ ಕಮಾಂಡೆಂಟ್ ಕೆ.ಎಸ್.ರಘುನಾಥ್, ರಾಜ್ಯ ಗುಪ್ರ ವಾರ್ತೆ ಮೈಸೂರು ವಲಯ ಪೊಲೀಸ್ ಅಧೀಕ್ಷಕಿ ಬಿ.ಟಿ.ಕವಿತಾ, ಮೈಸೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕಿ ಪಿ.ವಿ.ಸ್ನೇಹಾ, ಕೆಎಸ್‍ಆರ್‍ಪಿ ಉಪ ಕಮಾಂಡೆಂಟ್ ಪ್ರವೀಣ್ ಆಳ್ವ, ಕೆ.ಆರ್.ಉಪ ವಿಭಾ ಗದ ಸಹಾಯುಕ ಪೊಲೀಸ್ ಆಯುಕ್ತ ಎನ್.ಎಂ. ಧರ್ಮಪ್ಪ, ಬಾಂಬ್ ಪತ್ತೆ ದಳದ ಎಂ.ಬಾಬು ಇನ್ನಿ ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Translate »