ಮೈಸೂರಿನಲ್ಲೂ ಅಂಚೆ ಪಾವತಿ ಬ್ಯಾಂಕ್ ಆರಂಭ
ಮೈಸೂರು

ಮೈಸೂರಿನಲ್ಲೂ ಅಂಚೆ ಪಾವತಿ ಬ್ಯಾಂಕ್ ಆರಂಭ

September 2, 2018

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 2.30 ಗಂಟೆಗೆ ನವದೆಹಲಿಯ ತಲಕಟೋರ ಸ್ಟೇಡಿಯಂನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸೇವೆಗೆ ಚಾಲನೆ ನೀಡಿದರು.

ಪ್ರಧಾನಮಂತ್ರಿಗಳು ಕಾರ್ಯಕ್ರಮ ಉದ್ಘಾ ಟಿಸಿದ ನೇರ ದೃಶ್ಯವನ್ನು ವೀಕ್ಷಿಸಲು ಅಂಚೆ ಇಲಾಖೆಯು ಮೈಸೂರಿನ ಪಡುವಾರಹಳ್ಳಿ ಬಳಿ ಇರುವ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ವ್ಯವಸ್ಥೆ ಮಾಡಿತ್ತು.
ಮೈಸೂರು ಜಿಲ್ಲಾ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ವೆಂಕಟಾಚಲಪತಿ, ಆಲ್ ಇಂಡಿಯಾ ರೇಡಿಯೋ ಅಸಿಸ್ಟೆಂಟ್ ಡೈರೆ ಕ್ಟರ್ (ಪ್ರೋಗ್ರಾಮ್) ಹೆಚ್.ಶ್ರೀನಿವಾಸ, ಮಹಾರಾಣಿ ವಾಣಿಜ್ಯ ಕಾಲೇಜು ಸ್ನಾತ ಕೋತ್ತರ ವಾಣಿಜ್ಯ ವಿಭಾಗದ ಕೋ-ಆರ್ಡಿ ನೇಟರ್ ಡಾ.ಎಸ್.ಮಂಜು ಹಾಗೂ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪಾಸ್ ಬುಕ್ ಇಲ್ಲದೆ ಕಾಗದ ರಹಿತ ಬ್ಯಾಂಕಿಂಗ್ ವ್ಯವಹಾರ ಸೇವೆಯನ್ನು ದೇಶಾದ್ಯಂತ 3,250 ಆಕ್ಸಿಸ್ ಪಾಯಿಂಟ್‍ಗಳು ಮತ್ತು 650 ಶಾಖೆಗಳಲ್ಲಿ ಪೂರೈಸಲಾಗು ತ್ತಿದ್ದು, ಡಿಸೆಂಬರ್ 31ರೊಳಗೆ 1.55 ಲಕ್ಷ ಪೋಸ್ಟ್ ಆಫೀಸ್‍ಗಳಲ್ಲಿ ಐಪಿಪಿಬಿ ಸೇವೆಯನ್ನು ಲಿಂಕ್ ಮಾಡಲಾಗುವುದು. ಬ್ಯಾಂಕ್ ಸೌಲಭ್ಯ ವಿಲ್ಲದ ಗ್ರಾಮೀಣ ಭಾಗಗಳ ಪೋಸ್ಟ್ ಆಫೀಸ್‍ಗಳಲ್ಲಿ ಗ್ರಾಹಕನ ಬಯೋಮೆಟ್ರಿಕ್ ಪಡೆದು ಹೊಸ ತಂತ್ರಾಂಶದ ಮೂಲಕ ಖಾತೆ ತೆರೆಸಿ ಹಣಕಾಸಿನ ವ್ಯವಹಾರ ನಡೆಸಲು ಸಾಮಾನ್ಯ ಜನರಿಗೆ ಈ ಸೌಲಭ್ಯ ಅನು ಕೂಲವಾಗಲಿದೆ ಎಂದು ಹಿರಿಯ ಅಂಚೆ ಕಚೇರಿ ಅಧೀಕ್ಷಕ ಎನ್. ಪ್ರಕಾಶ್ ತಿಳಿಸಿದ್ದಾರೆ.

ಅಂಗವಿಕಲರ ಭತ್ಯೆ, ಗ್ಯಾಸ್ ಸಬ್ಸಿಡಿ, ವಿಧವಾ ವೇತನ, ನರೇಗಾ ವೇತನ, ವೃದ್ಧಾಪ್ಯ ಬೆಳೆ ವಿಮಾ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಮಾಜಿಕ ಭದ್ರತಾ ಹಾಗೂ ಇತರ ಯೋಜನೆಗಳ ಫಲಾನುಭವಿಗಳ ಮನೆ ಬಾಗಿಲಿಗೆ ಈ ಕಾರ್ಯಕ್ರಮದಿಂದ ಸೇವೆ ಲಭ್ಯವಾಗ ಲಿದೆ. ಸ್ವೈಪಿಂಗ್ ಮೆಷಿನ್ ಮೂಲಕ ಅಂಚೆ ಇಲಾಖೆ ನೀಡುವ ಕ್ವಿಕ್ ರೆಸ್ಪಾನ್ಸ್ ಕಾರ್ಡ್ (ಕಿಖಅ) ಬಳಸಿ ಖಾತೆದಾರರು ತಾವಿರುವ ಕಡೆಯೇ ಬ್ಯಾಂಕಿಂಗ್ ವಹಿ ವಾಟು ಮಾಡಬಹುದು. ಒಂದು ವೇಳೆ ಕಾರ್ಡ್ ಹಾಳಾದರೂ ಬಯೋಮೆಟ್ರಿಕ್ ಆದ್ದರಿಂದ ಆ ಖಾತೆಯಲ್ಲಿ ಬೇರೆಯವರು ವ್ಯವಹರಿಸಲು ಸಾಧ್ಯವಾಗದು.

ಮೈಸೂರಿನ ಇಟ್ಟಿಗೆಗೂಡು ಅಂಚೆ ಕಚೇರಿ, ಲಷ್ಕರ್ ಮೊಹಲ್ಲಾದ ಪ್ರಧಾನ ಅಂಚೆ ಕಚೇರಿ, ನಜರ್‍ಬಾದಿನ ಅಂಚೆ ತರಬೇತಿ ಕೇಂದ್ರ, ಚಾಮುಂಡಿಬೆಟ್ಟ ಮತ್ತು ವರುಣಾ ಹೋಬಳಿಯ ದುದ್ದಗೆರೆ ಅಂಚೆ ಕಚೇರಿಗಳಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.

Translate »