ಮೈಸೂರು,ಮೇ4-ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಮೇ5ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ 66/11 ಕೆ.ವಿ. ಕಲ್ಯಾಣಗಿರಿ ವ್ಯಾಪ್ತಿಯ ಶಿವಾಜಿ ರಸ್ತೆ, ಎನ್.ಆರ್.ಮೊಹಲ್ಲಾ, ಗಣೇಶ್‍ನಗರ, ನಾರ್ಥ್-ಈಸ್ಟ್ ಆಫ್ ಎನ್.ಆರ್.ಮೊಹಲ್ಲಾ, ಕುರಿಮಂಡಿ, ಕೆಸರೆ 3ನೇ ಹಂತ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿದ್ಯುತ್ ಓವರ್ ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗವನ್ನಾಗಿ ಪರಿವರ್ತನೆ
ಮೈಸೂರು, ಮೇ 4- ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮದ ವತಿಯಿಂದ ಮೈಸೂರು ನಗರದಾದ್ಯಂತ ವಿದ್ಯುತ್ ಸರಬರಾಜಿಗೆ ಪ್ರಸ್ತುತ ಇರುವ ವಿದ್ಯುತ್ ಓವರ್ ಹೆಡ್ ಮಾರ್ಗವನ್ನು ಭೂಗತ ಕೇಬಲ್ ಮಾರ್ಗವನ್ನಾಗಿ ಪರಿವರ್ತಿಸುವಂತಹ ಕಾಮಗಾರಿಯು ಪ್ರಗತಿಯಲ್ಲಿದೆ.
ಈ ಸಂಬಂಧ ಮಳೆಗಾಲದಲ್ಲಿ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ಪರಿವರ್ತಕ ಗಳಿಗೆ ಹಾನಿ ಉಂಟಾಗುವುದನ್ನು ತಡೆಗಟ್ಟಬಹುದು. ಗಾಳಿ ಮತ್ತು ಮಳೆಯಿಂದ ಉಂಟಾಗುವ ವಿದ್ಯುತ್ ಅಡಚಣೆಗಳನ್ನು ತಡೆಗಟ್ಟಿ ನಿಗಮಕ್ಕೆ ಉಂಟಾಗುವ ನಷ್ಟ ತಪ್ಪಿಸಬಹುದು. ಆದ್ದರಿಂದ ಸಾರ್ವ ಜನಿಕರು ಮತ್ತು ಗ್ರಾಹಕರು ತಮ್ಮ ಪೂರ್ಣ ಸಹಕಾರ ನೀಡಬೇಕು ಎಂದು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಕೆ.ಎಂ.ಮುನಿಗೋಪಾಲ್‍ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆ-ಗಾಳಿಯಿಂದಾಗಿ ವಿದ್ಯುತ್ ಕಂಬ, ಪರಿವರ್ತಕಗಳಿಗೆ ಹಾನಿ
ಮೈಸೂರು, ಮೇ 4-ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿ ಯಲ್ಲಿ ಭಾನುವಾರ ರಾತ್ರಿ ಬಿದ್ದ ಧಾರಾಕಾರ ಮಳೆ ಮತ್ತು ಗಾಳಿಯಿಂದಾಗಿ ನಗರದ ಹಲವಾರು ಕಡೆ ಭಾರಿ ಗಾತ್ರದ ಮರಗಳು ಕೆಳಗೆ ಬಿದ್ದಿರುವ ಪರಿಣಾಮ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯಾಪ್ತಿಗೆ ಒಳಪಟ್ಟ ಸುಮಾರು 200 ವಿದ್ಯುತ್ ಕಂಬಗಳು ಮತ್ತು 13 ಪರಿವರ್ತಕಗಳಿಗೆ ಹಾನಿ ಉಂಟಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದೆ. ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿರುವ ಪ್ರದೇಶಗಳಲ್ಲಿನ ವಿದ್ಯುತ್ ಸಂಪರ್ಕವನ್ನು ಆದಷ್ಟು ಶೀಘ್ರದಲ್ಲಿ ಪುನರ್‍ಸ್ಥಾಪಿಸಲಾಗುವುದು ಎಂದು ಕಾರ್ಯ ಮತ್ತು ಪಾಲನಾ ವೃತ್ತದ ಅಧೀಕ್ಷಕ ಇಂಜಿನಿಯರ್ ಕೆ.ಎಂ.ಮುನಿಗೋಪಾಲ್‍ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.