ಪ್ರಜ್ವಲ್ ರೇವಣ್ಣರಿಗೆ ಈಜುವುದನ್ನು ಕಲಿಸಬೇಕಿಲ್ಲ
ಹಾಸನ

ಪ್ರಜ್ವಲ್ ರೇವಣ್ಣರಿಗೆ ಈಜುವುದನ್ನು ಕಲಿಸಬೇಕಿಲ್ಲ

May 29, 2019

ಶಾಸಕ ಪ್ರೀತಂಗೌಡರ ವಿರುದ್ಧ ಮಾಜಿ ಶಾಸಕ ಕರೀಗೌಡ ವಾಗ್ದಾಳಿ
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣರಿಗೆ ಈಜು ವುದನ್ನು ಕಲಿಸಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಅವರು ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ ಎಂದು ಮಾಜಿ ಶಾಸಕ ಬಿ.ವಿ.ಕರೀಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಜ್ವಲ್ ತಮ್ಮ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೇವೇಗೌಡರನ್ನು ಹಾಸನ ಜಿಲ್ಲೆಯಲ್ಲಿ ನಿಲ್ಲಿಸಿ ಗೆಲ್ಲಿಸುವುದಾಗಿ ಹೇಳಿ ದ್ದಾರೆ. ದೇವೇಗೌಡರು ತುಮಕೂರಿನಲ್ಲಿ ಸೋತಿರುವುದರಿಂದ ಹಾಸನದಲ್ಲಿ ಸೂತ ಕದ ಛಾಯೆ ಮೂಡಿದೆ. ಆದರೆ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ತಾವು ಶಾಸಕ ರಾಗಿ 1 ವರ್ಷ ಪೂರ್ಣಗೊಳಿಸಿದ್ದು, ಇಲ್ಲಿ ವರೆಗೂ ಕ್ಷೇತ್ರದ ಅಭಿವೃದ್ಧಿಗೆ ಒಂದೇ ಒಂದು ರೂ. ಅನುದಾನವನ್ನು ಕೇಂದ್ರ ದಿಂದಾಗಲೀ, ರಾಜ್ಯದಿಂದಾಗಲೀ ತಂದಿಲ್ಲ. ಅಂತಹವರಿಗೆ ದೇವೇಗೌಡರ ಬಗ್ಗೆ ಮಾತ ನಾಡುವ ಯಾವ ನೈತಿಕತೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಪ್ರೀತಂ ಗೌಡ ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರ ವನ್ನೇ ಮರೆತಿದ್ದಾರೆ. ಅವರು ಕೇವಲ ರಾಜ್ಯ ಪ್ರವಾಸದಲ್ಲೇ ನಿರತರಾಗಿದ್ದು, ತಾನೊಬ್ಬ ರಾಜ್ಯ ನಾಯಕನಾಗುತ್ತೇನೆಂಬ ಕನಸು ಕಾಣು ತ್ತಿದ್ದಾರೆ. ಮೊದಲು ಅವರು ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಕಿಡಿಕಾರಿದರು.

ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋಲು ಅನು ಭವಿಸಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವ ಯಾವುದೇ ನೈತಿಕತೆ ಶಾಸಕರಿಗಿಲ್ಲ. ರಾಜ್ಯದ ಹಿರಿಯ ಮುತ್ಸದ್ಧಿ ಸೋಲು ಅನುಭವಿಸಿ ರುವುದು ರಾಜ್ಯದ ಜನರಿಗೆ ತುಂಬ ಲಾರದ ನಷ್ಟವನ್ನುಂಟುಮಾಡಿದೆ. ಆದರೆ ಅದನ್ನು ರಾಜಕೀಯವಾಗಿ ಬಳಸಿಕೊಳ್ಳು ವುದು ಸರಿಯಲ್ಲ ಎಂದರು.

ಸಚಿವ ರೇವಣ್ಣ ಅವರು ಸನ್ಯಾಸತ್ವ ಸ್ವೀಕರಿಸಲಿ ಎಂದು ಶಾಸಕ ಪ್ರೀತಂಗೌಡ ಹೇಳುತ್ತಿದ್ದಾರೆ. ಆದರೆ ಇಡೀ ರಾಜ್ಯದಲ್ಲೇ ಅತಿ ಹೆಚ್ಚು 38 ಸಾವಿರ ಕೋಟಿ ರೂ. ಅನುದಾನವನ್ನು ಜಿಲ್ಲೆಗೆ ತರುವ ಮೂಲಕ ರೇವಣ್ಣ ಅಭಿವೃದ್ಧಿ ಹರಿಕಾರರಾಗಿರುವು ದನ್ನು ಶಾಸಕರು ಮರೆತಿದ್ದಾರೆ ಎಂದು ಪ್ರಶ್ನಿಸಿದರು. ಪ್ರಜ್ವಲ್ ರೇವಣ್ಣ ಸಂಸದ ರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಯಾವಾಗ ರಾಜೀನಾಮೆ ಕೊಡಬೇಕು ಎಂಬುದು ಗೊತ್ತಿದೆ. ಶಾಸಕ ಪ್ರೀತಂಗೌಡರಿಂದ ಅವರು ಪಾಠ ಕಲಿಯಬೇಕಾಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಯ್ಯದ್ ಅಕ್ಬರ್, ಮುಖಂಡ ರಾದ ಕಟ್ಟಾಯ ಅಶೋಕ್, ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಯರಾಮ್ ಇತರರಿದ್ದರು.

Translate »