ವೈರಸ್ ಸೋಂಕು ತಡೆಗೆ ಪ್ರಾಣಾಯಾಮ, ಅಗ್ನಿಹೋತ್ರ ಮದ್ದು
ಮೈಸೂರು

ವೈರಸ್ ಸೋಂಕು ತಡೆಗೆ ಪ್ರಾಣಾಯಾಮ, ಅಗ್ನಿಹೋತ್ರ ಮದ್ದು

March 19, 2020

`ಕೊರೊನಾ’ ಹರಡುವಿಕೆ ತಡೆಗೆ ಶಾಸಕ ರಾಮದಾಸ್ ನೇತೃತ್ವದಲ್ಲಿ ಕಾರ್ಯಾಗಾರ, ಅಗ್ನಿಹೋತ್ರ ತರಬೇತಿ
ಮೈಸೂರು, ಮಾ.18(ಆರ್‍ಕೆಬಿ)- ಕೊರೊನಾ ವೈರಸ್ ಹರಡದಂತೆ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸಲು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವ ದಲ್ಲಿ ಬುಧವಾರ ಮೈಸೂರಿನ ವಿದ್ಯಾ ಶಂಕರ ಕಲ್ಯಾಣ ಮಂಟಪದಲ್ಲಿ ಕಾರ್ಯಾ ಗಾರ ನಡೆಯಿತು. ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 270 ಬೂತ್‍ಗಳ ಅಧ್ಯಕ್ಷರು, ಪದಾಧಿಕಾರಿಗಳು, ಆಸಕ್ತರು ಕಾರ್ಯಾ ಗಾರದಲ್ಲಿ ಭಾಗವಹಿಸಿದ್ದರು.

ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತದೆ? ತಡೆಗೆ ಅನುಸರಿಸ ಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಸುಧೀರ್ ನಾಯಕ್, ಡಿಹೆಚ್‍ಒ ಡಾ. ವೆಂಕಟೇಶ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಿದಂಬರ, ಆಯುರ್ವೇದ ವೈದ್ಯಾಧಿ ಕಾರಿ ಡಾ.ಪ್ರಸನ್ನ ವೆಂಕಟೇಶ್, ಯೋಗ ಕುಮಾರ್ ಧನ್ಯಕುಮಾರ್ ಇನ್ನಿತರರು ಮಾಹಿತಿ ನೀಡಿದರು.

ಪ್ರಾಣಾಯಾಮ ಮತ್ತು ಅಗ್ನಿಹೋತ್ರ ದಿಂದ ಸೋಂಕು ತಡೆಗಟ್ಟಬಹುದೆಂದು ಹೇಳಿದ ಶಾಸಕರು, ಪ್ರಾಣಾಯಾಮ ತರಬೇತಿ ಮತ್ತು ಅಗ್ನಿಹೋತ್ರ ನಡೆಸಿ ಕೊಟ್ಟರು. ಅಗ್ನಿಹೋತ್ರ ಮಾಡುವುದು ಹೇಗೆ? ಅದರಿಂದ ಆಗುವ ಪ್ರಯೋ ಜನಗಳ ಕುರಿತು ವಿವರಿಸಿದರು. ಬಳಿಕ ಪ್ರಾಣಾಯಾಮ, ಅಗ್ನಿಹೋತ್ರ ಬ್ರೋಷರ್ ವಿತರಿಸಿದರು. ಪ್ರಾಣಾಯಾಮ ಕಲಿ ಯಲು, ಅಗ್ನಿಹೋತ್ರ ಮಾಡಲು ಇಚ್ಛಿಸು ವವರಿಗೆ ಉಚಿತ ತರಬೇತಿ ನೀಡಲಾ ಗುವುದು. 60 ಸಾವಿರ ಬ್ರೋಷರ್ ಮುದ್ರಿಸಿದ್ದು, ಒಂದು ವಾರ ಕ್ಷೇತ್ರಾದ್ಯಂತ ಸಂಚರಿಸಿ ಬ್ರೋಷರ್ ವಿತರಿಸಲಾಗುವುದು ಎಂದರು. ಪಾಲಿಕೆ ಸದಸ್ಯ ಬಿ.ವಿ.ಮಂಜು ನಾಥ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಕೆ.ಆರ್.ಕ್ಷೇತ್ರ ಅಧ್ಯಕ್ಷ ಎಂ.ವಡಿವೇಲು ಇನ್ನಿತರರು ಕಾರ್ಯಕ್ರಮದಲ್ಲಿದ್ದರು.

ಮೈಸೂರಿನ `ಅಮ್ಮ’ ಮನೆಯಲ್ಲಿ ಆಶ್ರಯ ಪಡೆದಿರುವ ಹೆಚ್‍ಐವಿ ಪಾಸಿ ಟಿವ್ ಮಕ್ಕಳು 5 ವರ್ಷದಿಂದ ನಿತ್ಯ ಸೂರ್ಯೋದಯ, ಸೂರ್ಯಾಸ್ತ ವೇಳೆ ಅಗ್ನಿಹೋತ್ರ ಮಾಡಿದ್ದರಿಂದ ವೈರಸ್‍ನಿಂದ ಹೊರಬಂದಿದ್ದಾರೆ. ಈ ಸಂಶೋಧನೆಯ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಿ ದ್ದೇನೆ. ಅಗ್ನಿಹೋತ್ರ ಮಾಡುವುದರಿಂದ ನಮ್ಮ ಆರೋಗ್ಯ, ಮನೆ, ಸುತ್ತಲಿನ ಪರಿಸರ ವನ್ನು ಕಾಪಾಡಿಕೊಳ್ಳಬಹುದು. ತಾಮ್ರದ ಚಿಕ್ಕ ಅಗ್ನಿಕುಂಡ, ಹಸುವಿನ ಬೆರಣಿ, ತುಪ್ಪ ಮತ್ತು ಪಾಲಿಶ್ ರಹಿತ ಕೆಂಪಕ್ಕಿ ಬಳಸಿ ಮಾಡಬಹುದಾದ ಅಗ್ನಿಹೋತ್ರದ ಬಗ್ಗೆ ನಮ್ಮ ತಂಡ ತರಬೇತಿ ನೀಡಲಿದೆ.
-ಎಸ್.ಎ.ರಾಮದಾಸ್, ಶಾಸಕ

ಎಸ್‍ಎಸ್‍ಎಸ್‍ಸಿ, ಪಿಯು ಪರೀಕ್ಷೆ ವೇಳೆ ಮಾಸ್ಕ್: ಶಾಸಕ ಸಲಹೆ
ಎಸ್‍ಎಸ್‍ಎಲ್‍ಸಿ, ಪಿಯು ಪರೀಕ್ಷೆ ವೇಳೆ ಲಕ್ಷಾಂತರÀ ವಿದ್ಯಾರ್ಥಿ ಗಳು ಮತ್ತು ಶಿಕ್ಷಕರ ಹಿತದೃಷ್ಟಿಯಿಂದ ವೈದ್ಯಕೀಯ ಸೌಲಭ್ಯ ಇರಬೇಕು. ಉಚಿತ ಮಾಸ್ಕ್ ನೀಡಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಮತ್ತು ಶೌಚಾಲಯ ಶುದ್ಧೀಕರಣಕ್ಕೆ ಆದ್ಯತೆ ನೀಡ ಬೇಕು. ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಗಳಲ್ಲಿ ಕೊರೊನಾ ಪರೀಕ್ಷಾ ಕೊಠಡಿ ಸಜ್ಜುಗೊಳಿಸಲು ತಕ್ಷಣ ಕ್ರಮ ವಹಿಸಬೇಕು ಎಂದು ಸಿಎಂಗೆ ಪತ್ರ ಬರೆದಿದ್ದೇನೆ. ಸ್ವಇಚ್ಛೆ ಯಿಂದ ಪರೀಕ್ಷೆಗೊಳಪಡಲು ಬಯಸುವ ವ್ಯಕ್ತಿಗಳ ತಪಾಸಣೆಗೆ ಅವಕಾಶ ಮಾಡಿಕೊಡಬೇಕು. ಸದ್ಯ ರಾಜ್ಯದಲ್ಲಿ ಪ್ರವಾಸೋ ದ್ಯಮ ಪೂರ್ಣ ಸ್ಥಗಿತವಾಗಿದೆ. ದುಡಿಮೆ ಇಲ್ಲದ ಕಾರಣ ಪ್ರವಾಸೋದ್ಯಮ ವಾಹನಗಳ ಚಾಲಕ/ಮಾಲೀಕರಿಗೆ ಸಾಲ ಮರುಪಾವತಿಗೆ ರಿಯಾಯಿತಿ ಅಥವಾ ಸಮಯಾವಕಾಶ ನೀಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವಂತೆ ಕೋರುವೆ. ಹಕ್ಕಿಜ್ವರ ಹಾಗೂ ಇತರೆ ವೈರಸ್‍ಗಳಿಂದ ಬೇಸಿಗೆ ಸಮಯದಲ್ಲಿ ಆಗಬಹುದಾದ ಅನಾಹುತಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹಾಗೂ ರಾಜ್ಯದಲ್ಲಿ ಭಯಭೀತರಾಗಿರುವ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳಿಗೆ ಹೆಚ್ಚುಒತ್ತು ಕೊಡುವ ಅವಶ್ಯಕತೆ ಇದೆ.

Translate »