ಮನೆಗಳವು: ಮೂವರ ಬಂಧನ, 18 ಲಕ್ಷ ರೂ. ಚಿನ್ನಾಭರಣ ವಶ
ಮೈಸೂರು

ಮನೆಗಳವು: ಮೂವರ ಬಂಧನ, 18 ಲಕ್ಷ ರೂ. ಚಿನ್ನಾಭರಣ ವಶ

March 19, 2020
  • ನಸುಕಿನ 4.45ರಲ್ಲಿ ಅನುಮಾನಾಸ್ಪದ ರೀತಿ ಸಂಚರಿಸುತ್ತಿದ್ದಾಗ ಸೆರೆ
  • 205 ಗ್ರಾಂ ಚಿನ್ನ, 26 ಗ್ರಾಂ ವಜ್ರಾಭರಣ, 5 ಕೆಜಿ ಬೆಳ್ಳಿ ಆಭರಣ ವಶ
  • ಇಬ್ಬರು ಆರೋಪಿಗಳಿಗೆ ಹಲವು ಮನೆಗಳವು ಪ್ರಕರಣಗಳಲ್ಲಿ ಜೈಲು
  • ಉದಯಗಿರಿ ಠಾಣೆ ವ್ಯಾಪ್ತಿ-5, ನಜರ್‍ಬಾದ್-1, ಆಲನಹಳ್ಳಿ-1 ಮನೆಗಳವು

ಮೈಸೂರು,ಮಾ.18(ಎಂಕೆ)-ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳ ಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ರುವ ಉದಯಗಿರಿ ಠಾಣೆ ಪೊಲೀಸರು, 18 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ಲಿಡ್ಕರ್ ಕಾಲೋನಿಯಲ್ಲಿ ಗುಜರಿ ಕೆಲಸ ಮಾಡುವ, ಮಹದೇವಪುರ ಮುಖ್ಯ ರಸ್ತೆಯ ರೆಹಮತೀಯ ಮಸೀದಿ ಸಮೀಪದ ನಿವಾಸಿ ಸೈಯದ್ ಅಲೀಂ(33), ಭಾರತ್ ನಗರದ ನಿವಾಸಿಯಾದ ಆಟೋ ಚಾಲಕ ಉಮರ್ ಪಾಷ(27), ಅಜೀಜ್ ಸೇಠ್ ನಗರದ ವಸೀಂ ಪಾಷ(30) ಬಂಧಿತರು.

ಬಂಧಿತರು ಮಂಗಳವಾರ ನಸುಕಿನ 4.45ರಲ್ಲಿ ಉದಯಗಿರಿ ಠಾಣಾ ಸರಹದ್ದಿನ ವಿದ್ಯಾಶಂಕರ ಬಡಾವಣೆಯ ಆಲದ ಮರದ ಹತ್ತಿರದ ಆಟೋರಿಕ್ಷಾದಲ್ಲಿ ಅನುಮಾನಾ ಸ್ಪದವಾಗಿ ಸಂಚರಿಸುತ್ತಿದ್ದಾಗ ಪೊಲೀಸ ರಿಗೆ ಸಿಕ್ಕಿಬಿದ್ದಿದ್ದಾರೆ. ಸೈಯದ್ ಅಲೀಂ ಮತ್ತು ಉಮರ್ ಪಾಷ ನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬಹಳಷ್ಟು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಅನುಮಾನಗೊಂಡು ಆಟೋರಿಕ್ಷಾವನ್ನು ಪರಿ ಶೀಲಿಸಿದಾಗ ಸೀಟಿನ ಹಿಂಬದಿಯಲ್ಲಿ ಕಬ್ಬಿಣದ ರಾಡು ಇಟ್ಟುಕೊಂಡು, ಬೀಗ ಹಾಕಿದ ಮನೆ ಗಳ ಬಾಗಿಲು ಮೀಟಿ ಕಳವು ಮಾಡಲು ಹೊಂಚು ಹಾಕುತ್ತಿದ್ದುದು ತಿಳಿದುಬಂದಿದೆ.

ಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಉದಯಗಿರಿ ಠಾಣೆ ಯಲ್ಲಿ 5, ನಜರ್‍ಬಾದ್ ಮತ್ತು ಆಲನ ಹಳ್ಳಿ ಪೊಲೀಸ್ ಠಾಣೆಯಲ್ಲಿ ತಲಾ 1 ಪ್ರಕರಣಗಳಲ್ಲಿ (ಒಟ್ಟು 7 ಮನೆಗಳವು) ಭಾಗಿ ಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ಕದ್ದ ಚಿನ್ನಾಭರಣಗಳನ್ನು ಸ್ವೀಕರಿಸಿ ವಿಲೇವಾರಿಗೆ ಸಹಕಾರ ನೀಡುತ್ತಿದ್ದ ಮಧ್ಯವರ್ತಿಗಳಾದ ಹುಣಸೂರು ಹೌಸಿಂಗ್ ಬೋರ್ಡ್‍ನ ಮಂಜುನಾಥ್ ಮತ್ತು ಬನ್ನೂರು ಬಿಸ್ಮಿಲ್ಲಾ ನಗರದ ಅದಿಲ್ ಪಾಷ ಹಾಗೂ ಹುಣಸೂರು ಬಜಾರ್ ರಸ್ತೆಯ ನವಕಾರ್ ಬ್ಯಾಂಕರ್ಸ್ ಮಾಲೀಕ ದೇವೇಂದ್ರ ಸಿಂಗ್ ನಿಂದ ಕಳವು ಮಾಲನ್ನು ವಶಪಡಿಸಿ ಕೊಳ್ಳಲಾಗಿದೆ. 205 ಗ್ರಾಂ ಚಿನ್ನ, 26 ಗ್ರಾಂ ವಜ್ರದ ಆಭರಣ, 5 ಕೆಜಿ ಬೆಳ್ಳಿ ಪದಾರ್ಥ ಗಳು(ಒಟ್ಟು 18 ಲಕ್ಷ ರೂ. ಮೌಲ್ಯ) ಹಾಗೂ ಕಳವು ಮಾಡಿದ್ದ ಹಣದಲ್ಲಿ ಖರೀದಿಸಿದ್ದ 1 ಟಿವಿಎಸ್ ಅಪಾಚೆ ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಒಂದು ಆಟೋರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜೈಲು ಶಿಕ್ಷೆ: ಮೊದಲ ಆರೋಪಿ ಸೈಯದ್ ಸಲೀಂ ಈ ಹಿಂದೆ ಹಲವು ಕಳವು ಪ್ರಕರಣ ಗಳಲ್ಲಿ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿ 5 ವರ್ಷಗಳ ಕಾಲ ಜೈಲಿನಲ್ಲಿದ್ದ. 2019ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆಯಾಗಿದ್ದ. ಎರಡನೇ ಆರೋಪಿ ಉಮರ್ ಪಾಷ ಕಳವು ಪ್ರಕರಣ ಗಳಲ್ಲಿ 4 ವರ್ಷ ಜೈಲು ಶಿಕ್ಷೆ ಅನುಭವಿಸಿ 2019ರ ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದ.

ದೇವರಾಜ ವಿಭಾಗದ ಎಸಿಪಿ ಎಂ.ಎನ್. ಶಶಿಧರ್ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಉದಯಗಿರಿ ಠಾಣೆ ಇನ್ಸ್ ಪೆಕ್ಟರ್ ಎನ್.ಎಂ.ಪೂಣಚ್ಚ, ಪಿಎಸ್‍ಐ ಎಂ. ಜೈಕೀರ್ತಿ, ಮದನ್‍ಕುಮಾರ್, ನಟರಾಜ್, ಸಿಬ್ಬಂದಿಗಳಾದ ಎಂ.ಎಂ.ಬಾಬು, ಎಂ.ಶಂಕರ್, ದಿವಾಕರ್, ಸಿದ್ದಿಕ್ ಅಹಮದ್, ಎಂ.ಎಂ. ಮಂಜುನಾಥ್, ಮೋಹನ್ ಕುಮಾರ್, ಆರ್.ಎಸ್.ಕೃಷ್ಣ, ಶಿವರಾಜಪ್ಪ ಮತ್ತು ಸಮೀರ್ ಭಾಗಿಯಾಗಿದ್ದರು.

Translate »