ನವದೆಹಲಿ, ಜೂ.21-ಯೋಗದಲ್ಲಿ ಉಸಿರಾಟ ವನ್ನು ನಿಯಂತ್ರಿಸುವ ಅಭ್ಯಾಸ ಮಾಡುವ ಪ್ರಾಣಾ ಯಾಮ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಪ್ರಸ್ತುತ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಸಮಸ್ಯೆ ಇರುವ ಸಂದರ್ಭದಲ್ಲಿ ಪ್ರಾಣಾಯಾಮ ಮಾಡುವ ಮೂಲಕ ಕೊರೊನಾ ಬರುವುದನ್ನು ತಡೆಗಟ್ಟಲು ಸಹಾಯವಾಗ ಬಹುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ತಿಳಿಸಿದ್ದಾರೆ.
6ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗ ವಾಗಿ ದೆಹಲಿಯಲ್ಲಿ ಭಾಷಣ ಮಾಡಿದ ಅವರು, ಕೊರೊನಾ ವೈರಸ್ ಸೋಂಕು ನಮ್ಮ ಉಸಿರಾಟ ವ್ಯವಸ್ಥೆ ಮೇಲೆ ದಾಳಿ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಪ್ರಾಣಾಯಾಮದ ಮೂಲಕ ಹೆಚ್ಚು ನಿಯಂತ್ರಿಸಬಹುದು. ಸಾಮಾನ್ಯ ವಾಗಿ ಪ್ರಾಣಾಯಾಮದಲ್ಲಿ ಅನೋಮ, ವಿಲೋಮ ಬಹಳ ಮುಖ್ಯವಾದ ತಂತ್ರವಾಗಿದೆ. ಇದನ್ನು ನಾವು ದಿನನಿತ್ಯ ಮಾಡುತ್ತಾ ಹೋದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಯನ್ನು ಸಹ ಬಲಪಡಿಸುತ್ತದೆ ಎಂದು ಹೇಳಿದರು.
ವಿಶ್ವದ ಹಲವು ಕಡೆಗಳಲ್ಲಿ ಕೊರೊನಾ ರೋಗಿ ಗಳು ಯೋಗ ಮಾಡುವ ಮೂಲಕ ಪ್ರಯೋಜನ ಕಂಡುಕೊಂಡಿದ್ದಾರೆ. ಕಷ್ಟದ ಸಮಯಗಳಲ್ಲಿ ದೇಹದಲ್ಲಿ ಹೋರಾಟ ನಡೆಸಲು ಯೋಗ ಆತ್ಮವಿಶ್ವಾಸ ನೀಡಿ ರೋಗದ ವಿರುದ್ಧ ಜಯ ಸಾಧಿಸಲು ಸಹಾಯ ಮಾಡು ತ್ತದೆ. ಯೋಗದಿಂದ ಶರೀರ ಮತ್ತು ಶಾರೀರ ಎರ ಡರ ಆರೋಗ್ಯ ಸಿಗುತ್ತದೆ ಎಂದರು. ನಮ್ಮ ಆರೋಗ್ಯ ಮತ್ತು ಭರವಸೆಯ ಸ್ವರಮೇಳವನ್ನು ಉತ್ತಮಗೊಳಿ ಸಲು, ಆರೋಗ್ಯಕರ ಮತ್ತು ಸಂತೋಷದ ಮಾನವೀ ಯತೆಯ ಯಶಸ್ಸಿಗೆ ಜಗತ್ತು ಸಾಕ್ಷಿಯಾಗುವ ದಿನ ದೂರವಿಲ್ಲ. ಇದನ್ನು ಮಾಡಲು ಯೋಗ ಖಂಡಿತ ವಾಗಿಯೂ ನಮಗೆ ಸಹಾಯ ಮಾಡುತ್ತದೆ, ಯೋಗವು ಏಕತೆಯ ಶಕ್ತಿಯಾಗಿ ಹೊರಹೊಮ್ಮಿದೆ; ಯೋಗ ಮಾಡುವುದಕ್ಕೆ ಯಾವುದೇ ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ರಾಷ್ಟ್ರಗಳ ತಾರತಮ್ಯವಿಲ್ಲ, ಇವೆಲ್ಲಕ್ಕೂ ಮೀರಿದ ಶಕ್ತಿ ಇರುವುದು ಯೋಗಕ್ಕೆ ಎಂದು ಬಣ್ಣಿಸಿ ದರು. ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ `ಮನೆಯಲ್ಲಿಯೇ ಯೋಗ’ ಎಂಬುದಾಗಿದ್ದು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಇಂದು ಯಾವುದೇ ಸಾರ್ವಜನಿಕ ಸಮಾರಂಭಗಳನ್ನು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ ಎಂದರು.