ಸೋಂಕು ದೂರವಿಡಲು ಮುಂಜಾಗ್ರತಾ ಕ್ರಮ ಅನುಸರಿಸಬೇಕಷ್ಟೆ
ಮೈಸೂರು

ಸೋಂಕು ದೂರವಿಡಲು ಮುಂಜಾಗ್ರತಾ ಕ್ರಮ ಅನುಸರಿಸಬೇಕಷ್ಟೆ

August 3, 2020

ಮೈಸೂರು,ಆ.2(ವೈಡಿಎಸ್)- ಕೊರೊನಾ ಭಯಪಡುವ ಖಾಯಿಲೆ ಅಲ್ಲ. ಯಾರೂ ಭಯಪಡಬೇಕಿಲ್ಲ. ಬದಲಾಗಿ ಮುಂಜಾ ಗ್ರತಾ ಕ್ರಮಗಳನ್ನು ಅನುಸರಿಸಬೇಕಷ್ಟೇ…

ನನಗೆ ಜು.19ರಂದು ಜ್ವರ ಬಂತು. ಮಾತ್ರೆ ಸೇವಿಸಿ ಮಲಗಿದೆ. ಮರುದಿನ ಜ್ವರ ಇರಲಿಲ್ಲ. ಆದರೂ ಕೊರೊನಾ ಭಯದಿಂದ ಜು.21 ರಂದು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದೆ. ಮರುದಿನವೇ ವೈದ್ಯರು ಕರೆ ಮಾಡಿ ಪಾಸಿ ಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಿ ಎಂದರು. ನಂತರ ವೈದ್ಯರು ಆಂಬುಲೆನ್ಸ್‍ನಲ್ಲಿ ಮನೆಗೆ ಬಂದು ಹೊಸಕೋಟೆಯ ಕೋವಿಡ್ ಕೇಂದ್ರಕ್ಕೆ ಕರೆದುಕೊಂಡು ಹೋದರು. ಆರಂಭದಲ್ಲಿ ತುಂಬಾ ಹೆದರಿಕೆಯಾಗಿತ್ತು. ವೈದ್ಯರು ಮತ್ತು ಕುಟುಂಬದವರು ನನ್ನಲ್ಲಿ ಧೈರ್ಯ ತುಂಬಿ ದರು ಎಂದು ಹೂಟಗಳ್ಳಿಯ ಚಿಕ್ಕರಾಜು ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ಹೇಗೆ ಬಂತೆಂದು ಗೊತ್ತಿಲ್ಲ: ಯಾವುದೇ ಕಾರ್ಯಕ್ರಮಕ್ಕೂ ಹೋಗಿಲ್ಲ, ಯಾರನ್ನೂ ಸಂಪರ್ಕಿಸಿಲ್ಲ. ಕೊರೊನಾ ದೇಶಕ್ಕೆ ಬಂದಾ ಗಿನಿಂದಲೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿ ಟೈಸರ್, ಬಿಸಿನೀರು, ಸಾಮಾಜಿಕ ಅಂತರ ಹೀಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಕೊಂಡೇ ಬಂದಿದ್ದೇನೆ. ಆದರೂ ಕೊರೊನಾ ಹೇಗೆ ಬಂತೆಂದು ಗೊತ್ತಿಲ್ಲ. ಮೈಸೂರಿನಲ್ಲಿಂದು ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಎಷ್ಟೇ ಜಾಗೃತಿ ವಹಿಸಿ ದರೂ ಕಡಿಮೆಯೇ ಎಂದರು.

ಭಯವಾಗುತ್ತಿತ್ತು: ಆಸ್ಪತ್ರೆಗೆ ಕರೆದೊಯ್ಯಲು ವೈದ್ಯರು ಆಂಬುಲೆನ್ಸ್‍ನಲ್ಲಿ ಮನೆಗೆ ಬಂದಾಗ `ಏನಪ್ಪ ಹೀಗಾಯಿತಲ್ಲ’ ಎಂದು ತುಂಬಾ ಭಯ ವಾಗಿತ್ತು. ಆಸ್ಪತ್ರೆಯಲ್ಲಿ ನನ್ನಂಥ ನೂರಾರು ಮಂದಿಯನ್ನು ನೋಡಿದಾಗ ಭಯ ದೂರ ವಾಯಿತು. ಹಾಗಾಗಿ ಮೊದಲು ನಮ್ಮಲ್ಲಿ ರುವ ಭಯವನ್ನು ದೂರ ಮಾಡಬೇಕು. ಧೈರ್ಯದಿಂದ ಇರಬೇಕು ಎಂದು ಹೇಳಿದರು.

Translate »