ಗರ್ಭಿಣ ಮಹಿಳೆಯನ್ನು ತುಂಬಿ ಹರಿಯುತ್ತಿದ್ದ ನದಿಗೆ ನೂಕಿದ ದುರುಳ ಪತಿ!
ಮೈಸೂರು

ಗರ್ಭಿಣ ಮಹಿಳೆಯನ್ನು ತುಂಬಿ ಹರಿಯುತ್ತಿದ್ದ ನದಿಗೆ ನೂಕಿದ ದುರುಳ ಪತಿ!

June 25, 2018

ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿಯೊಬ್ಬ 6 ತಿಂಗಳ ಗರ್ಭಿಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ತುಂಗಭದ್ರಾ ನದಿಗೆ ತಳ್ಳಿ ಹತ್ಯೆ ಮಾಡಲು ಯತ್ನ ನಡೆಸಿರುವ ಘಟನೆಯೊಂದು ಹಾವೇರಿ ಜಿಲ್ಲೆಯ ನೂತನ ತಾಲೂಕು ರಟ್ಟೀಹಳ್ಳಿಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾಳೆ.

ಗಂಡ ತಳ್ಳಿದ ಬಳಿಕ 1 ಕಿ.ಮೀ. ದೂರ ಕೊಚ್ಚಿ ಹೋದ ಮಹಿಳೆ, ನದಿಯಲ್ಲಿ ಅಚಾನಕ್ ಆಗಿ ಸಿಕ್ಕ ಬಂಡೆಯೊಂದನ್ನು ಹಿಡಿದು, ರಾತ್ರಿಯಿಡೀ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಆಕೆಯನ್ನು ಕಂಡ ಸಾರ್ವಜನಿಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರುಳ ಪತಿರಾಯನನ್ನು ಪೆÇಲೀಸರು ಇದೀಗ ಬಂಧನಕ್ಕೊಳಪಡಿಸಿದ್ದಾರೆ. ರಟ್ಟೀಹಳ್ಳಿ ತಾಲೂಕಿನ ಚಿಕ್ಕ ಕಬ್ಬಾರ ಗ್ರಾಮದ ರೂಪೇಶ್ ಗೌಡ ಬಂಧಿತ ಆರೋಪಿಯಾಗಿದ್ದಾನೆ.

ಈತ ತನ್ನ ಗರ್ಭಿಣಿ ಪತ್ನಿ ಅರುಣಾಕುಮಾರಿಯನ್ನು ಗುರುವಾರ ಉಕ್ಕಡಗಾತ್ರಿ ದೇವಸ್ಥಾನಕ್ಕೆ ಕರೆದೊಯ್ದಿದ್ದ. ವಾಪಸ್ ಬರುವಾಗ ಹರಿಹರ ತಾಲೂಕಿನ ನಂದಿಗುಂದಿ ಸೇತುವೆ ಮೇಲಿಂದ ರಾತ್ರಿ 11.30ಕ್ಕೆ ಆಕೆಯನ್ನು ನದಿಗೆ ತಳ್ಳಿದ್ದಾನೆ. ಗುತ್ತಿಗೆ ಕೆಲಸ ಮಾಡುತ್ತಿದ್ದ ರೂಪೇಶ್‍ಗೌಡ, ಅರುಣಾ ಕುಮಾರಿಯನ್ನು 1 ವರ್ಷದ ಹಿಂದಷ್ಟೇ ವಿವಾಹವಾಗಿದ್ದ. ರೂಪೇಶ್ ಕುಮಾರ್‍ಗೆ ಮಗು ಇಷ್ಟವಿರಲಿಲ್ಲ. ಇದರಂತೆ ಇಬ್ಬರ ನಡುವೆ ಮಾತುಕತೆ ಚಕಮಕಿ ನಡೆದಿದೆ. ಈ ವೇಳೆ ಪತ್ನಿ ಮೇಲೆ ತೀವ್ರವಾಗಿ ಕೆಂಡಾಮಂಡಲಗೊಂಡ ರೂಪೇಶ್ ಪತ್ನಿಯನ್ನು ನದಿಗೆ ತಳ್ಳಿದ್ದಾನೆಂದು ಹೇಳಲಾಗುತ್ತಿದೆ.

Translate »