ಪ್ರತಿಯೊಬ್ಬ ವಿದ್ಯಾರ್ಥಿಗೆ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ: ಸಂಸದ ಧ್ರುವನಾರಾಯಣ್ ಅಭಿಮತ
ಚಾಮರಾಜನಗರ

ಪ್ರತಿಯೊಬ್ಬ ವಿದ್ಯಾರ್ಥಿಗೆ ಡಾ.ಬಿ.ಆರ್.ಅಂಬೇಡ್ಕರ್ ಆದರ್ಶ: ಸಂಸದ ಧ್ರುವನಾರಾಯಣ್ ಅಭಿಮತ

June 25, 2018

ಚಾಮರಾಜನಗರ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಡಾ. ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಗಳನ್ನು ಮೈಗೂಡಿ ಸಿಕೊಳ್ಳಬೇಕು ಎಂದು ಸಂಸದ ಆರ್.ಧ್ರುವನಾರಾಯಣ್ ವಿದ್ಯಾ ರ್ಥಿಗಳಿಗೆ ಕರೆ ನೀಡಿದರು.

ಜಿಲ್ಲೆಯ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ವತಿಯಿಂದ ಶ್ರೀ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜನ್ಮ ದಿನದ ಅಂಗ ವಾಗಿ ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಚಾಮ ರಾಜನಗರ ತಾಲೂಕು ಮಟ್ಟದ 2017-18ನೇ ಸಾಲಿನ ಎಸ್‍ಎಸ್‍ಎಲ್‍ಸಿ ಯಲ್ಲಿ ಶೇ.80 ಮತ್ತು ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ಡಾ.ಬಿ.ಆರ್. ಅಂಬೇಡ್ಕರ್ ಅವರು ಆದರ್ಶ. ಅವರ (ಅಂಬೇಡ್ಕರ್) ಆದರ್ಶಗಳನ್ನು ಮೈಗೂಡಿಸಿ ಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದರು.ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಶದಲ್ಲಿಯೇ ಒಬ್ಬ ಪ್ರಗತಿಪರ ಮಹಾರಾಜರು ಅವರ ಕಾಲದಲ್ಲಿ ಮೈಸೂರು ಯೂನಿವರ್ಸಿಟಿ ಆರಂಭವಾ ಯಿತು. ಪ್ರಪ್ರಥಮ ವಿದ್ಯುತ್ ಘಟಕ ಪ್ರಾರಂಭವಾಯಿತು. ಶೋಷಿತ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಸದಾ ಸ್ಮರಿಸಬೇಕಾಗಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕೊಠಡಿಗಳ ಸಮಸ್ಯೆ ತುಂಬಾ ಇದೆ. ಈ ಬಗ್ಗೆ ಶಿಕ್ಷಣ ಸಚಿವ ಮಹೇಶ್ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ತರುವಂತೆ ಸಂಸದರು ಮನವಿ ಮಾಡಿದರು.
ಪ್ರಾಥಮಿಕ ಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ನೀವು (ಪ್ರತಿಭಾವಂತ ವಿದ್ಯಾರ್ಥಿಗಳು) ಎಲ್ಲಾ ರೀತಿಯ ಕಷ್ಟದ ಲ್ಲಿಯೂ ಈ ಸಾಧನೆ ಮಾಡಿದ್ದೀರಾ ಎಂದರೆ ನೀವು ನಿಮ್ಮ ಜೀವನ ಪೂರ್ತಿ ಎಲ್ಲಾ ಎಡರು-ತೊಡರುಗಳನ್ನು ನಿಭಾ ಯಿಸಿದ್ದೀರಿ ಎಂಬರ್ಥ ಎಂದರು.

ಹೆಣ್ಣು ಮಕ್ಕಳನ್ನು ಮಗು ಹೆರಿಗೆಗೆ, ಮನೆ ಕೆಲಸಕ್ಕೆ ಸೀಮಿತ ಎನ್ನಲಾಗುತ್ತಿತ್ತು. ಆದರೆ ಇಂದು ಪ್ರತಿಭಾನ್ವಿತ ವಿದ್ಯಾರ್ಥಿ ಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿ ಇರುವು ದನ್ನು ನೋಡಿದರೆ ಹೆಣ್ಣು ಕ್ರೀಯಾಶೀಲೆ ಎಂಬುದು ಅರ್ಥವಾಗುತ್ತದೆ. ಅವರಿಗೆ ಅವಕಾಶಗಳನ್ನು ಕೊಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂದರು.

ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವರೆಗೆ ವ್ಯಾಸಂಗ ಮಾಡುವಾಗ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಡಿಗ್ರಿಯಲ್ಲಿ ಅವರ ಸಂಖ್ಯೆ ಕಡಿಮೆ. ಇದಕ್ಕೆ ಹೆಣ್ಣು ಮಕ್ಕಳ ಪೋಷಕರಲ್ಲಿ ಇರುವ ಏನೋ, ಎತ್ತವೋ ಎಂಬ ಆತಂಕ. ಈ ಆತಂಕ ಹಾಗೂ ಕಲ್ಪನೆಯನ್ನು ದೂರ ಇಡಬೇಕು. ಈ ಆಧುನಿಕ ಜಗತ್ತಿನಲ್ಲಿ ಹೆಣ್ಣು ಮಕ್ಕಳನ್ನು ಎಲ್ಲಿಗಾದರೂ ಕಳುಹಿಸಿ. ಅವರ ಸಾಧನೆಗೈದು ತಮ್ಮ ಬಳಿಗೆ ಬಂದು ಕಾಲಿಗೆ ನಮಸ್ಕರಿಸುತ್ತಾರೆ. ಹೆಣ್ಣು ಮಕ್ಕ ಳಲ್ಲಿ ಇರುವ ಪ್ರತಿಭೆ ಎಂದು ಎನ್. ಮಹೇಶ್ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇ ಗೌಡ ಮಾತನಾಡಿ, ವಿದ್ಯಾರ್ಥಿಗಳು ಸಂಕೋ ಚವನ್ನು ಬಿಡಬೇಕು. ಎಲ್ಲಾ ರೀತಿಯ ಸ್ಮರ್ಧಾ ತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿ ದರು. ಸಚಿವ ಸಿ.ಪುಟ್ಟರಂಗಶೆಟ್ಟಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಐಎಎಸ್ ತರಬೇತುದಾರ ಡಾ.ಶಿವ ಕುಮಾರ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಐಎಎಸ್ ರ್ಯಾಂಕ್ ವಿಜೇತ ವೆಂಕಟೇಶ ನಾಯ್ಕ, ಡಿಡಿಪಿಐ ಕೆ.ಮಹದೇವಪ್ಪ, ಪಿಯು ಡಿಡಿ ವಿ.ಆರ್.ಶ್ಯಾಮಲಾ, ಎನ್.ಲಕ್ಷ್ಮೀ ಪತಿ, ಉದ್ಯಮಿ ಸಂತೇ ಮರಹಳ್ಳಿ ಮಾದಪ್ಪ, ಜೆಎಸ್‍ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸ್ವಾಮಿ, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್‍ರಾಜ್, ಜಿಲ್ಲಾಧ್ಯಕ್ಷ ಎನ್.ಮಹೇಂದ್ರ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ರೋಟರಿ ಅಧ್ಯಕ್ಷ ಆರ್.ಸುಭಾಷ್, ಬಿಎಸ್‍ಪಿ ಜಿಲ್ಲಾ ಕಾರ್ಯ ದರ್ಶಿ ಬಿ.ಮ.ಕೃಷ್ಣಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ರಂಗ ರಾಮು, ಯೂನಿ ವರ್ಸೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ವಿಜಯ ಲಕ್ಷ್ಮಿ, ಎಂವೈಎಫ್ ಆಂಗ್ಲಭಾಷೆ ಆಡಳಿತಾಧಿಕಾರಿ ಮೊಹಮ್ಮದ್ ಸಾಬೀರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕರು ತರಗತಿಗೆ ಮೊಬೈಲ್ ತೆಗೆದುಕಂಡು ಹೋಗುವಹಾಗಿಲ್ಲ. ಅದೇ ರೀತಿ ವಿದ್ಯಾರ್ಥಿಗಳೂ ಸಹ ಮೊಬೈಲನ್ನು ಶಾಲೆಗೆ ಕೊಂಡೊಯ್ಯುವಂತಿಲ್ಲ. ಜಿಲ್ಲಾಧಿಕಾರಿಗಳೊಗೂಡಿ ಶಾಲೆಗೆ ಸರ್‍ಫ್ರೈಜ್ (ದಿಢೀರ್) ಭೇಟಿ ನೀಡುತ್ತೇನೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ವಿದ್ಯಾರ್ಥಿ ಕೇಂದ್ರ ಬಿಂದು. ಶಿಕ್ಷಕ ಅಲ್ಲ. ಹೀಗಾಗಿ ನಾವೆಲ್ಲ ವಿದ್ಯಾರ್ಥಿಗಳ ಪರ ಕೆಲಸ ಮಾಡಬೇಕಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮತ್ತು ವೃತ್ತಿ ಬಗ್ಗೆ ಮಾರ್ಗದರ್ಶನ ನೀಡುವ ಕೇಂದ್ರ ತೆರೆಯಲು ಶ್ರಮಿಸಲಾಗುವುದು. -ಎನ್.ಮಹೇಶ್, ಪ್ರಾಥಮಿಕ ಶಿಕ್ಷಣ ಸಚಿವ

Translate »