ಸಾಂಸ್ಕೃತಿಕ ನಗರಿಯಲ್ಲಿ ಹಳೇ  ಕನ್ನಡ ಚಿತ್ರಗೀತೆಗಳ ಝೇಂಕಾರ
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಹಳೇ  ಕನ್ನಡ ಚಿತ್ರಗೀತೆಗಳ ಝೇಂಕಾರ

June 25, 2018

ಮೈಸೂರು: ಸುಂದರ ಇಳಿ ಸಂಜೆಯಲಿ ಸಿಂಗಾರ ಗೊಂಡಿದ್ದ ವೇದಿಕೆಯಲ್ಲಿ ಜನಪ್ರಿಯ ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು.

ಜೆ.ಕೆ.ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸಾಗರ್ ಸ್ಕಿನ್ ಕೇರ್ ಸೆಂಟರ್ ಭಾನುವಾರ ಆಯೋ ಜಿಸಿದ್ದ ಮ್ಯೂಸಿಕ್ ಲೆಜೆಂಡ್ಸ್ (ನಾ ಹಾಡಲು ನೀವು ಆಡಬೇಕು) ಸಂಗೀತ ಸಂಜೆ ಕಾರ್ಯ ಕ್ರಮದಲ್ಲಿ ಗಾಯಕರಾದ ಜಯಂತಿ ಭಟ್, ವೀಣಾ ಪಂಡಿತ್, ಸ್ಟ್ಯಾನ್ಲಿ ಪಾರ್ಕರ್, ಸ್ಟ್ಯಾನ್ಲಿ ಮರ್ಸರ್, ಎನ್.ರಶ್ಮಿ, ಎಸ್. ಬಾಲರಾಜ್, ಡಾ.ಸುರೇಂದ್ರನ್, ಮನು ಯಾದವ್, ಸುಪ್ರಿಯಾ ಲೋಹಿತ್ ಮತ್ತಿತರರ ಸುಮಧುರ ಕಂಠದಿಂದ ಹೊರ ಹೊಮ್ಮಿದ ಹಾಡುಗಳು ಸಂಗೀತ ಪ್ರಿಯರು ತಲೆದೂಗುವಂತೆ ಮಾಡಿದವು.

ಮೊದಲಿಗೆ ವೇದಿಕೆ ಹಂಚಿಕೊಂಡ ಗಾಯಕ ಸ್ಟ್ಯಾನ್ಲಿ ಪಾರ್ಕರ್, ದೇವರ ಸ್ತುತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ನಂತರ ಗಾಯಕಿಯ ರಾದ ವೀಣಾ ಪಂಡಿತ್ ಮತ್ತು ಜಯಂತಿ ಭಟ್ ಅವರು `ತೆರೆದಿದೆ ಮನೆ ಓ ಬಾ ಅತಿಥಿ’ ಹಾಡಿದರೆ, ಗಾಯಕ ಡಾ. ಸುರೇಂದ್ರ ಅವರು `ನಿನದೆ ನೆನಪು ದಿನವೂ ಮನದಲ್ಲಿ’ ಹಾಡನ್ನು ಸುಮ ಧುರವಾಗಿ ಹಾಡಿ ಎಲ್ಲರನ್ನು ರಂಜಿಸಿದರು.

2_Page

ಗಾಯಕ ಸ್ಟ್ಯಾನ್ಲಿ ಪಾರ್ಕರ್ ಅವರು `ನಾ ಹಾಡಲು ನೀನು ಹಾಡಬೇಕು’ ಹಾಡಿದರೆ, ಗಾಯಕರಾದ ಎಸ್.ಬಾಲರಾಜ್ ಮತ್ತು ಜಯಂತಿ ಭಟ್ ಅವರು `ಎಂದೆಂದು ನಿನ್ನನು ಮರೆತು ಬದುಕಿರಲಾರೆ’, ಗಾಯಕಿ ಜಯಂತಿ ಭಟ್ ಅವರು `ಹೊಸ ಬೆಳಕು ನಿನ್ನಿಂದ. ನೀ ತಂದೆ ಆನಂದ’, ಗಾಯಕ ರಾದ ಮನು ಯಾದವ್ ಮತ್ತು ಜಯಂತಿ ಭಟ್ ಅವರು `ರವಿವರ್ಮನ ಕುಂಚದ ಕಲೆ ಬಲೆ ಸಾಕಾರವು’, ಗಾಯಕ ರಾದ ಸ್ಟ್ಯಾನ್ಲಿ ಮತ್ತು ರಶ್ಮಿ ಅವರು `ಸ್ವೀಟಿ ನನ್ನ ಜೋಡಿ’, ಗಾಯಕರಾದ ಸ್ಟ್ಯಾನ್ಲಿ ಪಾರ್ಕರ್ ಮತ್ತು ಸುಪ್ರಿಯಾ ಲೋಹಿತ್ ಅವರು `ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ’, `ಆಸೆಗಳೇ ಹಕ್ಕಿಗಳಾಗಿ’ ಗೀತೆಯನ್ನು ಸುಮಧುರವಾಗಿ ಹಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ನಂತರ ಗಾಯಕರಾದ ಜಯಂತಿ ಭಟ್, ವೀಣಾ ಪಂಡಿತ್, ಡಾ.ಸುರೇಂದ್ರ, ಮನುಯಾದವ್, ಸುಪ್ರಿಯಾ ಲೋಹಿತ್ ಅವರುಗಳು `ನೆನ್ನೆ ನೆನ್ನೆಗೆ ನಾಳೆ ನಾಳೆಗೆ’, `ಒಲುಮೆ ಸಿರಿಯ ಕಂಡು’, `ನಮ್ಮೂರು ಮೈಸೂರು’, `ನಾಚಿಕೆ ಇನ್ನೇಕೆ’, `ಆಕಾಶ ನೀನಾದರೆ’, `ಒಲವೇ ಜೀವನ’, `ಸುತ್ತಮುತ್ತ ಯಾರು ಇಲ್ಲ’, `ಮಧುಮಾಸ ಚಂದ್ರಮ’, `ಒಲವೆ ಚೆಲುವ ಕವನ’, `ಆಹಾ ಮೈಸೂರು ಮಲ್ಲಿಗೆ’, `ನಿನ್ನ ನಗುವು ಹೂವಂತೆ’, `ರಾಜ ಮುದ್ದು ರಾಜ’, `ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’, `ಆಕಾಶ ನೀರಾಗಲಿ’, `ಒಂದೇ ಒಂದು ಆಸೆಯು’, `ಕನಸಲೂ ನೀನೆ ಮನಸಲೂ ನೀನೆ’, `ಬಾರೆ ಬಾರೆ ನನ್ನವಳೇ’, `ಆಸೆಯ ಭಾವ’, `ಬಾರೆ ಬಾರೆ ಚಂದದ’ ಹಾಡಿನ ಮೂಲಕ ಎಲ್ಲರನ್ನು ರಂಜಿಸಿದರು.

ಇದಕ್ಕೂ ಮುನ್ನ ಆಂದೋಲನ ದಿನಪತ್ರಿಕೆ ಸಹಾಯಕ ಸಂಪಾದಕರಾದ ರಶ್ಮಿ ಕೌಜಲಗಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಎಸ್.ಬಾಲರಾಜ್ ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಪಿ.ಬಿ.ಶ್ರೀನಿವಾಸ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಇದೇ ಸಂದರ್ಭ ದಲ್ಲಿ ಗಾಯಕರಾದ ವೀಣಾಪಂಡಿತ್ ಮತ್ತು ಸುಪ್ರಿಯಾಲೋಹಿತ್ ಅವರನ್ನು ಸನ್ಮಾನಿಸ ಲಾಯಿತು. ಮಾಜಿ ಮೇಯರ್ ಆರ್.ಲಿಂಗಪ್ಪ, ಹಿರಿಯ ಹೃದ್ರೋಗ ತಜ್ಞ ಡಾ.ಸಿ.ಜಿ. ಕೇಶವಮೂರ್ತಿ, ಹಿರಿಯ ವಕೀಲೆ ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.

Translate »